ಬೆಂಗಳೂರು: ಕರ್ತವ್ಯನಿರತ ಪೊಲೀಸರೊಂದಿಗೆ ರಂಪಾಟ ಮಾಡಿದ್ದ ಇಬ್ಬರು ಯುವತಿಯರನ್ನು ಜೀವನಭೀಮಾ ನಗರ ಪೊಲೀಸರು ಬಂಧಿಸಿದ್ದಾರೆ.
ಶಕ್ತಿ ನಾಯರ್(33) ಹಾಗೂ ಮಧುಮಿತಾ(29) ಬಂಧಿತ ಯುವತಿಯರು. ಮಂಡ್ಯ ಜಿಲ್ಲಾಧಿಕಾರಿಯವರ ಕಚೇರಿಯಿಂದ ಅಗತ್ಯ ಸೇವೆ ಹೆಸರಿನಲ್ಲಿ ಇವರು ಪಾಸ್ ಪಡೆದಿದ್ದರು.

ರಾತ್ರಿ ಶಕ್ತಿ ನಾಯರ್ಗೆ ಸೇರಿದ್ದ ಫ್ಲ್ಯಾಟ್ನಲ್ಲಿ ಮದ್ಯ ಸೇವಿಸಿ ಪಾರ್ಟಿ ಮಾಡಿದ್ದರು ಎನ್ನಲಾಗ್ತಿದೆ. ಮರುದಿನ ಬೆಳಗ್ಗೆಯಿಂದಲೂ ನಗರದಾದ್ಯಂತ ಜಾಲಿ ರೈಡ್ ಮಾಡಿದ್ದರು. ಮಧ್ಯಾಹ್ನ 12:45ರ ಸುಮಾರಿಗೆ ಲೀಲಾ ಪ್ಯಾಲೇಸ್ ಬಳಿ ರಂಪಾಟ ಮಾಡಿಕೊಂಡು ಪೊಲೀಸರೊಂದಿಗೆ ಅನುಚಿತ ವರ್ತನೆ ತೋರಿ ಪರಾರಿಯಾಗಿದ್ದರು.
ಈ ಸಂಬಂಧ ಇಬ್ಬರನ್ನು ಬಂಧಿಸಿ ಐಪಿಸಿ ಸೆಕ್ಷನ್ 353, NDMA ಕಾಯ್ದೆ ಹಾಗೂ ವೇಗದ ಚಾಲನೆಯಡಿ ಪ್ರಕರಣ ದಾಖಲಾಗಿದೆ.