ಕರ್ನಾಟಕ

karnataka

ETV Bharat / state

ಡಾರ್ಕ್‌ ವೆಬ್‌ ಮೂಲಕ ಡ್ರಗ್‌ ಖರೀದಿಸಿ ಮಾರಾಟ: ನೈಜೀರಿಯನ್ ಸೇರಿ 10 ವಿದ್ಯಾರ್ಥಿಗಳ ಬಂಧನ - ನೈಜೀರಿಯನ್ ಪ್ರಜೆ ಸೇರಿ 10 ಮಂದಿ ಬಂಧನ

ಡಾರ್ಕ್​ ವೆಬ್​ ಮೂಲಕ ಡ್ರಗ್ ಖರೀದಿಸಿ ಮಾರಾಟ ಮಾಡುತ್ತಿದ್ದ ವಿದ್ಯಾರ್ಥಿಗಳು ಸೇರಿ ಒಟ್ಟು 10 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

police-arrested-ten-accusers-of-drug-dealing-casepolice-arrested-ten-accusers-of-drug-dealing-case
ಡ್ರಗ್ ಸಪ್ಲೈ ಗ್ಯಾಂಗ್​​​ ಅಂದರ್

By

Published : Jul 6, 2021, 3:37 PM IST

Updated : Jul 6, 2021, 4:18 PM IST

ಬೆಂಗಳೂರು:ಕಾಲೇಜು ವಿದ್ಯಾರ್ಥಿಗಳಿಗೆ ಮಾದಕ ವಸ್ತು ಪೂರೈಕೆ ಮಾಡುತ್ತಿದ್ದ ನೈಜೀರಿಯಾ ಮೂಲದ ವ್ಯಕ್ತಿ ಸೇರಿ ಒಟ್ಟು 10 ಮಂದಿ ಕಾಲೇಜು ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಜೆ.ಸಿ ನಗರ ಮತ್ತು ಸಂಜಯನಗರ ಪೊಲೀಸರ ಜಂಟಿ ಕಾರ್ಯಾಚರಣೆ ವೇಳೆ ಪ್ರಕರಣ ಬೆಳಕಿಗೆ ಬಂದಿದೆ.

ಆರೋಪಿಗಳಿಂದ 60 ಗ್ರಾಂ ವೀಡ್ ಆಯಿಲ್​​, 1 ಕೆ.ಜಿ 100 ಗ್ರಾಂ​ ಗಾಂಜಾ, 127 ಎಂಡಿಎಂಎ ಮಾತ್ರೆ, 2.8 ಗ್ರಾಂ ಕೊಕೇನ್, 1 ಲ್ಯಾಪ್​​​ಟಾಪ್, 2 ಕಾರು​​​ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ಡ್ರಗ್ ಜಾಲದ ಕಿಂಗ್​​​ಪಿನ್ ನೈಜೀರಿಯನ್ ಮೂಲದ ನ್ವಾನ್ಯಾ ಫ್ರಾನ್ಸಿಸ್ ಬೋರ್ಟೆಂಗ್ ಸ್ಟೂಡೆಂಟ್ ವೀಸಾದಡಿ ಭಾರತಕ್ಕೆ ಬಂದು ವೀಸಾ ಅವಧಿ ಮುಗಿದರೂ ಆಕ್ರಮವಾಗಿ ನೆಲೆಸಿದ್ದ. ಕಮ್ಮನಹಳ್ಳಿಯ ಪ್ರದೀಪ್ ಕುಮಾರ್ ಅಲಿಯಾಸ್ ಸ್ಟೀವ್ ಡ್ರಗ್ ಪೆಡ್ಲರ್ ಆಗಿದ್ದ. ಮಂಗಳೂರು ಮೂಲದ ಪ್ರದೀಪ್ ಹೋಟೆಲ್ ಮ್ಯಾನೇಜ್ಮೆಂಟ್ ವಿದ್ಯಾಭ್ಯಾಸ ಮಾಡುತ್ತಿದ್ದು, ಇದ್ರ ಜೊತೆಗೆ ಖಾಸಗಿ ಬಸ್​ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದ ಎಂದು ತಿಳಿದುಬಂದಿದೆ.

ಡಾರ್ಕ್​​​​ವೆಬ್ & ವಿಕ್ಕರ್ ಮೆಸೆಂಜರ್ ಮೂಲಕ ಡ್ರಗ್ ಖರೀದಿ ಮಾಡಲಾಗುತ್ತಿತ್ತು. ಬಳಿಕ ತಮ್ಮ ಕಾಲೇಜು‌ ಸೇರಿ, ಇತರ ಕಾಲೇಜು ವಿದ್ಯಾರ್ಥಿಗಳಿಗೂ ಮಾರಾಟ ಮಾಡುತ್ತಿದ್ದರು ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

ಇದನ್ನೂ ಓದಿ:ವಾಯುವಿಹಾರ ಮಾಡುವ ಒಂಟಿ ಮಹಿಳೆಯರ ಸರ ಎಳೆಯುತ್ತಿದ್ದ ಆರೋಪಿಗಳ ಬಂಧನ

Last Updated : Jul 6, 2021, 4:18 PM IST

ABOUT THE AUTHOR

...view details