ಕರ್ನಾಟಕ

karnataka

ETV Bharat / state

4 ಕಿಲೋ ಮೀಟರ್ ಚೇಸ್... ಹಲ್ಲೆಗೆ ಮುಂದಾದ ರೌಡಿಶೀಟರ್​ ಕಾಲಿಗೆ ಗುಂಡೇಟು! - Police arrested Rowdisheater in bengalore

ಬೇಗೂರು ಠಾಣೆಗೆ ಬೇಕಾಗಿದ್ದ ರೌಡಿಶೀಟರ್ ಮದನ್ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಕಾನ್ಸ್​ಸ್ಟೇಬಲ್​​ ಮೇಲೆ ತಿರುಗಿಬಿದ್ದಿದ್ದರಿಂದ ಆತ್ಮರಕ್ಷಣೆಗೆ ಮುಂದಾದ‌ ಪಿಎಸ್ಐ ಈಶ್ವರ್,​ ಆರೋಪಿ ಎಡಗಾಲಿಗೆ ಬುಲೆಟ್ ನುಗ್ಗಿಸಿ ತಮ್ಮ‌ ಸುಪರ್ದಿಗೆ ತೆಗೆದುಕೊಂಡಿದ್ದಾರೆ.

police-arrested-rowdisheater-by-shot-his-leg-in-bengalore
ರೌಡಿಶೀಟರ್ ಮೇಲೆ ಪೊಲೀಸರಿಂದ ಗುಂಡಿನ ಪ್ರತಿದಾಳಿ

By

Published : Feb 14, 2021, 8:37 PM IST

ಬೆಂಗಳೂರು: ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ರೌಡಿಶೀಟರ್ ಕಾಲಿಗೆ ಬೇಗೂರು ಪೊಲೀಸರು ಗುಂಡು ಹೊಡೆದು ಬಂಧಿಸಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಮದನ್ ಗುಂಡೇಟು ತಿಂದ ರೌಡಿಶೀಟರ್‌. ಘಟನೆಯಲ್ಲಿ ಕಾನ್ಸ್​​ಸ್ಟೇಬಲ್​ ರವಿ ಹಲ್ಲೆಗೊಳಗಾಗಿದ್ದು, ಇಬ್ಬರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.‌ ಮಡಿವಾಳ, ಎಲೆಕ್ಟ್ರಾನಿಕ್ ಸಿಟಿ, ಬೇಗೂರು ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ 9ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿದ್ದ‌ ಆರೋಪಿ, ಎಲೆಕ್ಟ್ರಾನಿಕ್ ಸಿಟಿ ಠಾಣಾ ವ್ಯಾಪ್ತಿಯ ಬೋಳಗುಡ್ಡ ರಸ್ತೆ ಬಳಿ ಅಡಗಿಕೊಂಡಿದ್ದಾನೆ ಎಂಬ ಖಚಿತ ಮಾಹಿತಿ ಮೇರೆಗೆ ಪಿಎಸ್ಐ ಈಶ್ವರ್ ನೇತೃತ್ವದ ತಂಡ ಸ್ಥಳಕ್ಕೆ ತೆರಳಿದೆ. ಖಾಕಿ ಪಡೆ ಕಾಣುತ್ತಿದ್ದಂತೆ ಎಸ್ಕೇಪ್ ಆಗಲು ಪ್ರಯತ್ನಿಸಿದ ಆರೋಪಿಯನ್ನು ಛಲ ಬಿಡದೆ ನಾಲ್ಕು ಕಿಲೋ ಮೀಟರ್ ಚೇಸ್ ಮಾಡಿ ಹಿಡಿಯಲು ಮುಂದಾದಾಗ ಮಚ್ಚಿನಿಂದ ಕಾನ್ಸ್​ಸ್ಟೇಬಲ್ ರವಿ ಎಂಬುವರ ಕೈಗೆ ಹಲ್ಲೆ ನಡೆಸಿದ್ದಾನೆ. ಆತ್ಮರಕ್ಷಣೆಗಾಗಿ‌ ಪಿಎಸ್ಐ ಈಶ್ಚರ್, ಆರೋಪಿ ಎಡಗಾಲಿಗೆ ಬುಲೆಟ್ ನುಗ್ಗಿಸಿ ತಮ್ಮ‌ ಸುಪರ್ದಿಗೆ ತೆಗೆದುಕೊಂಡಿದ್ದಾರೆ.

ಪಿಎಸ್ಐ ಈಶ್ವರ್

ಓದಿ:ಗೋ ಹತ್ಯೆ ಪ್ರಕರಣ: ಬಂಧಿಸಲು ಹೋದ ಪೊಲೀಸರ ಮೇಲೆಯೇ ಗುಂಡಿನ ದಾಳಿ

ಜ. 31ರ ಬೆಳಗ್ಗೆ ಸಹಚರರೊಂದಿಗೆ ಬಾರ್‌ಗೆ ನುಗ್ಗಿದ ಆರೋಪಿ ಮದನ್​ ಸಿಬ್ಬಂದಿಗೆ ಚೂರಿ ತೋರಿಸಿ ಬೆದರಿಸಿದ್ದಾನೆ. ನಂತರ ಕ್ಯಾಶ್ ಡ್ರಾಯರ್​ಗೆ ಕೈ ಹಾಕಿ 25 ಸಾವಿರ ನಗದು, 6 ಸಾವಿರ ರೂ. ಮೌಲ್ಯದ ಬಾಟಲಿಗಳನ್ನು ತೆಗೆದುಕೊಂಡು ಹೋಗಿದ್ದಾನೆ. ಈ ವಿಚಾರ ಏನಾದರೂ ಪೊಲೀಸರಿಗೆ ತಿಳಿಸಿದರೆ 6 ತಿಂಗಳಲ್ಲಿ ಜೈಲಿನಿಂದ ಬಂದು ನಿನಗೊಂದು ಗತಿ ಕಾಣಿಸುತ್ತೇನೆ ಎಂದು ಮನೋಹರ್‌ಗೆ ಬೆದರಿಸಿದ್ದಾನೆ ಎನ್ನಲಾಗಿದೆ. ಈ ಸಂಬಂಧ ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ABOUT THE AUTHOR

...view details