ಕರ್ನಾಟಕ

karnataka

ETV Bharat / state

ಬೆಂಗಳೂರು ಪೊಲೀಸರ ಭರ್ಜರಿ ಬೇಟೆ: 40 ಕೇಸ್​ಗಳಲ್ಲಿ ಬೇಕಾಗಿದ್ದ ದರೋಡೆ ಗ್ಯಾಂಗ್ ಅರೆಸ್ಟ್​ - ಬೆಂಗಳೂರು ಅಪರಾದ ಸುದ್ದಿ

ಗಿರಿನಗರ ಪೊಲೀಸರು ಕಾರ್ಯಾಚರಣೆ ಮಾಡಿ ಕುಖ್ಯಾತ ಮನೆಕಳ್ಳತನ, ಬೈಕ್ ಕಳ್ಳತನ ಸೇರಿದಂತೆ ಜನರನ್ನು ದರೋಡೆ ಮಾಡುತ್ತಿದ್ದ ಗ್ಯಾಂಗ್ಅನ್ನು ಪೊಲೀಸರು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

ರಾಬರಿ ಗ್ಯಾಂಗ್

By

Published : Oct 21, 2019, 3:19 PM IST

ಬೆಂಗಳೂರು:ಗಿರಿ ನಗರ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ, ಕುಖ್ಯಾತ ದರೋಡೆ ಗ್ಯಾಂಗ್ಅನ್ನು ಬಂಧಿಸಿದ್ದಾರೆ.

ಕಳ್ಳರ ಕೃತ್ಯ ಸಿಸಿಟಿವಿಯಲ್ಲಿ ಸೆರೆ

ನಾಗರಾಜ, ಕೌಶಿಕ್, ವಿಜಯಕುಮಾರ್, ಗಂಗಾಧರ, ವೇಣುಕುಮಾರನ್ನು ಬಂಧಿತ ಆರೋಪಿಗಳೆಂದು ಗುರುತಿಸಿದ್ದಾರೆ. ಸದ್ಯ ಗಿರಿನಗರ ವ್ಯಾಪ್ತಿಯಲ್ಲಿನ 40 ಪ್ರಕರಣ ಭೇದಿಸಿರುವ ಪೊಲೀಸರು ಬಂಧಿತರಿಂದ 21 ಬೈಕ್, 14 ಮೊಬೈಲ್, 200 ಗ್ರಾಂ ಆಭರಣ ವಶಪಡಿಸಿಕೊಂಡಿದ್ದಾರೆ.

ಇನ್ನು, ಈ ಗ್ಯಾಂಗ್ ಬೆಂಗಳೂರು ಸೌತ್​ನಲ್ಲಿ ಹೆಚ್ಚು ಆ್ಯಕ್ಟಿವ್ ಆಗಿ‌ ಕದ್ದ ಬೈಕ್​ಗಳನ್ನು ದಕ್ಷಿಣ ವಿಭಾಗದಲ್ಲಿ ಮಾರಾಟ ಮಾಡುತ್ತಿದ್ದರು. ಹೀಗಾಗಿ ದಕ್ಷಿಣ ವಿಭಾಗದ ಡಿಸಿಪಿ ರೋಹಿಣಿ ಕಟೋಚ್ ಅವರ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿತ್ತು. ಸದ್ಯ ಆರೋಪಿಗಳನ್ನು ಸಿಸಿಟಿವಿ ಆಧಾರದ ಮೇಲೆ ಬಂಧಿಸಿ‌ ತನಿಖೆ ಮುಂದುವರೆಸಿದ್ದಾರೆ.

ABOUT THE AUTHOR

...view details