ಕರ್ನಾಟಕ

karnataka

ETV Bharat / state

ಅರೆಬೆತ್ತಲೆ ವಿಡಿಯೋ ಮಾಡಿ ಹಣಕ್ಕೆ ಬೇಡಿಕೆ.. ತಾಯಿ-ಮಗುವನ್ನು ಇರಿದು ಕೊಂದಿದ್ದ ಆರೋಪಿ ಅಂದರ್..​​ - ಬೇಗೂರು ಡಬಲ್​ ಮರ್ಡರ್​ ಕೇಸ್​ಗೆ ಟ್ವಿಸ್ಟ್​

ಪ್ರಶಾಂತ್ ಮೂಲತಃ ಬಳ್ಳಾರಿ‌ ನಿವಾಸಿ. ಫೇಸ್‌ಬುಕ್​​​ನಲ್ಲಿ ಬೇಗೂರು ನಿವಾಸಿ ಚಂದ್ರಕಲಾ ಈತನಿಗೆ ಪರಿಚಯವಾಗಿದ್ದಾಳೆ. ಫೇಸ್ ಬುಕ್​​​​ನಲ್ಲಿನ ಪರಿಚಯ ಸಲುಗೆಗೆ ತಿರುಗಿದೆ. ಚಂದ್ರಕಲಾ ನಿಮ್ಮನ್ನು ನೋಡಬೇಕು ಮನೆಗೆ ಬನ್ನಿ ಎಂದು ಕರೆದಿದ್ದಾಳೆ. ಅದರಂತೆ ಪ್ರಶಾಂತ್​ ಬೇಗೂರ್​​ನ ಚೌಡೇಶ್ವರಿ ಲೇಔಟ್​​​ನಲ್ಲಿರುವ ಚಂದ್ರಕಲಾ ಮನೆಗೆ ಬಂದಿದ್ದನಂತೆ..

ತಾಯಿ-ಮಗುವನ್ನು ಕೊಂದಿದ್ದ ಆರೋಪಿ ಅಂದರ್​​
ತಾಯಿ-ಮಗುವನ್ನು ಕೊಂದಿದ್ದ ಆರೋಪಿ ಅಂದರ್​​

By

Published : Oct 11, 2021, 5:26 PM IST

ಬೆಂಗಳೂರು :ಬುಧವಾರ ಬೇಗೂರಿನಲ್ಲಿ ನಡೆದ ಡಬಲ್​ ಮರ್ಡರ್​ ಕೇಸ್​ಗೆ ಟ್ವಿಸ್ಟ್​ ಸಿಕ್ಕಿದೆ. ಫೇಸ್​ಬುಕ್ ಗೆಳೆಯನೇ ತಾಯಿ-ಮಗುವನ್ನು ಮರ್ಡರ್​ ಮಾಡಿದ್ದಾನೆ ಎನ್ನುವ ಮಾಹಿತಿ ಹೊರ ಬಿದ್ದಿದೆ.

ತಾಯಿ ಮತ್ತು ಮಗುವನ್ನು ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಬೆಂಗಳೂರು ನಗರದ ಬೇಗೂರು ಪೊಲೀಸರು ಬಂಧಿಸಿದ್ದಾರೆ. ಪ್ರಶಾಂತ್‌ ಬಂಧಿತ ಆರೋಪಿ. ಪ್ರಶಾಂತ್ ಮೃತ ಚಂದ್ರಕಲಾಳ ಫೇಸ್‌ಬುಕ್ ಗೆಳೆಯನಾಗಿದ್ದ.

ಹೀಗಾಗಿ, ಚಂದ್ರಕಲಾರನ್ನು ಹುಡುಕಿಕೊಂಡು ಪ್ರಶಾಂತ್ ಬೆಂಗಳೂರಿನ ಮನೆಗೆ ಬಂದಿದ್ದ. ತನಿಖೆ ವೇಳೆ ಚಂದ್ರಕಲಾ ಬ್ಲ್ಯಾಕ್​ಮೇಲ್​ ಮಾಡುತ್ತಿದ್ದಳು. ಹೀಗಾಗಿ, ಕೊಲೆ ಮಾಡಿರುವುದಾಗಿ ತಿಳಿಸಿದ್ದಾನಂತೆ.

ಪ್ರಕರಣದ ಹಿನ್ನಲೆ :ಪ್ರಶಾಂತ್ ಮತ್ತು ಚಂದ್ರಕಲಾ ಫೇಸ್‌ಬುಕ್​​​ನಲ್ಲಿ ಪರಿಚಿತರಾಗಿದ್ದರು. ಫೇಸ್‌ ಬುಕ್​​​ನ ಸ್ನೇಹ ಮನೆಯ ರೂಮ್​​​ನ ಒಳಗಡೆವರೆಗೂ ಬರುವಂತೆ ಮಾಡಿತ್ತು. ಮೊದಲು ಸ್ನೇಹವಾಗಿ ನಂತರ ಪ್ರೀತಿಗೆ ತಿರುಗಿ ಇದೀಗ ಡಬಲ್ ಮರ್ಡರ್​​ಗೆ ಕಾರಣವಾಗಿದೆ.

ಕೊಲೆಯಾದ ಸಮಯದಲ್ಲಿ ಮನೆಯ ಯಜಮಾನ ಗಾರ್ಮೆಂಟ್ಸ್ ಕೆಲ್ಸಕ್ಕೆ ಹೋಗಿದ್ದನಂತೆ. ಈ ವೇಳೆ ಮನೆಗೆ ಬಂದಿದ್ದ ಆರೋಪಿ ಸೈಲೆಂಟಾಗಿಯೇ ತಾಯಿ ಮತ್ತು‌ ನಾಲ್ಕು ವರ್ಷದ ಮಗಳನ್ನು ಇರಿದು ಕೊಲೆ ಮಾಡಿ ಪರಾರಿಯಾಗಿದ್ದ.

ಇದನ್ನೂ ಓದಿ : 20ಕ್ಕೂ ಹೆಚ್ಚು ಬಾರಿ ಇರಿದು ತಾಯಿ - ಮಗಳ ಭೀಕರ ಹತ್ಯೆ : ಬೆಂಗಳೂರಲ್ಲಿ ದುರಂತ

ಪ್ರಶಾಂತ್ ಮೂಲತಃ ಬಳ್ಳಾರಿ‌ ನಿವಾಸಿ. ಫೇಸ್‌ಬುಕ್​​​ನಲ್ಲಿ ಬೇಗೂರು ನಿವಾಸಿ ಚಂದ್ರಕಲಾ ಈತನಿಗೆ ಪರಿಚಯವಾಗಿದ್ದಾಳೆ. ಫೇಸ್ ಬುಕ್​​​​ನಲ್ಲಿನ ಪರಿಚಯ ಸಲುಗೆಗೆ ತಿರುಗಿದೆ. ಚಂದ್ರಕಲಾ ನಿಮ್ಮನ್ನು ನೋಡಬೇಕು ಮನೆಗೆ ಬನ್ನಿ ಎಂದು ಕರೆದಿದ್ದಾಳೆ. ಅದರಂತೆ ಪ್ರಶಾಂತ್​ ಬೇಗೂರ್​​ನ ಚೌಡೇಶ್ವರಿ ಲೇಔಟ್​​​ನಲ್ಲಿರುವ ಚಂದ್ರಕಲಾ ಮನೆಗೆ ಬಂದಿದ್ದನಂತೆ.

ಚಂದ್ರಕಲಾಳನ್ನು ಹುಡುಕಿ ಮನೆಗೆ ಬಂದಿದ್ದ ಪ್ರಶಾಂತ್, ಸುಸ್ತಾಗುತ್ತಿದೆ ಎಂದು ಹೇಳಿದ್ದ. ಹೀಗಾಗಿ, ರೂಮ್​ನಲ್ಲಿ ಮಲಗುವಂತೆ ಚಂದ್ರಕಲಾ ಹೇಳಿದ್ದಾರೆ. ಈ ವೇಳೆ ಅರೆಬೆತ್ತಲಾಗಿ ರೂಮ್‌ನಲ್ಲಿ ಮಲಗಿದ್ದ ಪ್ರಶಾಂತನ ವಿಡಿಯೋ ಮಾಡಿದ್ದ ಚಂದ್ರಕಲಾ, ಅರೆಬೆತ್ತಲೆ ವಿಡಿಯೋಗಳಿಂದ ಪ್ರಶಾಂತ್‌ಗೆ ಬ್ಲ್ಯಾಕ್‌ಮೇಲ್ ಮಾಡಿದ್ದಾಳೆ ಮತ್ತು ಪ್ರಶಾಂತ್ ಬಳಿ ಚಂದ್ರಕಲಾ 10 ಸಾವಿರ ರೂಪಾಯಿಗೆ ಬೇಡಿಕೆ ಇಟ್ಟಿದ್ದಳಂತೆ.

ಈ ವಿಚಾರಕ್ಕೆ ಪ್ರಶಾಂತ್ ಮತ್ತು ಚಂದ್ರಕಲಾ ಜಗಳವಾಡಿದ್ದಾರೆ. ಜಗಳವಾಡುವಾಗ ಚಂದ್ರಕಲಾ ಮಗು ಅಡ್ಡ ಬಂದಿದೆ. ಆಗ ಆ ಮಗುವನ್ನು ಪ್ರಶಾಂತ್ ತಳ್ಳಿದ್ದಾನೆ. ಇದರಿಂದ ಕೋಪಗೊಂಡ ಚಂದ್ರಕಲಾ ಅಡುಗೆ ಮನೆಯಿಂದ ಚಾಕು ತಂದಿದ್ದಾಳೆ. ಅದೇ ಚಾಕು ಕಸಿದುಕೊಂಡ ಪ್ರಶಾಂತ್ ಚಂದ್ರಕಲಾಗೆ ಇರಿದಿದ್ದಾನೆ.

ಈ ವೇಳೆ ಮಗು ಅಳುತ್ತಿದ್ದಾಗ, ಆ ಅಳು ನಿಲ್ಲಿಸಲು ಮಗುವಿಗೂ ಇರಿದು ಕೊಂದಿದ್ದಾನೆ. ಕೊಲೆಯ ಬಳಿಕ ಬಳ್ಳಾರಿಗೆ ತೆರಳಿದ್ದ ಪ್ರಶಾಂತ್‌ನನ್ನು ಅಲ್ಲಿಂದಲೇ ಪೊಲೀಸರು ಸೋಮವಾರ ಬಂಧಿಸಿ ಕರೆತಂದಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಆಗ್ನೇಯ ವಿಭಾಗದ ಡಿಸಿಪಿ ಶ್ರೀನಾಥ್ ಎಂ. ಜೋಶಿ, ಸದ್ಯ ಬೇಗೂರು ಪೊಲೀಸರು ಪ್ರಶಾಂತ್ ಮತ್ತು ಚಂದ್ರಕಲಾ ಮೊಬೈಲ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಪ್ರಶಾಂತ್​ನ ಫೇಸ್ ಬುಕ್ ಲಿಂಕ್​​ನ ಕತೆಯ ಸತ್ಯಾಸತ್ಯತೆಯ ಬಗ್ಗೆಯೂ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದಿದ್ದಾರೆ. ಸದ್ಯ ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಕುರಿತಂತೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ABOUT THE AUTHOR

...view details