ಕರ್ನಾಟಕ

karnataka

ಲಾಕ್‌ಡೌನ್‌ನಲ್ಲಿ ಗಾಂಜಾ ಸಾಗಾಟ: ಆರೋಪಿ ಬಂಧಿಸಿದ ಖಾಕಿ

By

Published : May 17, 2021, 3:34 PM IST

ರಾಮಮೂರ್ತಿ ನಗರ ಪೊಲೀಸರು ಕಾರ್ಯಾಚರಣೆ ನಡೆಸಿ ಸುಬ್ಬಾರೆಡ್ಡಿ ಎಂಬುವವನನ್ನು ಬಂಧಿಸಿದ್ದು, ಆರೋಪಿಯಿಂದ 6 ಲಕ್ಷ ಮೌಲ್ಯದ 20 ಕೆಜಿ ಗಾಂಜಾ ವಶಕ್ಕೆ ಪಡೆದಿದ್ದಾರೆ.

police-arrested-man
police-arrested-man

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ತೀವ್ರತೆ ತಡೆಗಟ್ಟಲು ಲಾಕ್‌ಡೌನ್ ಘೋಷಿಸಲಾಗಿದೆ. ಇನ್ನು ಈ ಲಾಕ್‌ಡೌನ್‌ ವೇಳೆ ಅಗತ್ಯ ವಸ್ತುಗಳ ಸಾಗಾಣಿಕೆಗೆ ಅವಕಾಶ ನೀಡಲಾಗಿದ್ದು, ಇದನ್ನೇ ಅವಕಾಶ ಮಾಡಿಕೊಂಡ ಭೂಪ ಆಂಧ್ರದಿಂದ‌ ಗೂಡ್ಸ್ ವಾಹನದಲ್ಲಿ ಗಾಂಜಾ ತರಿಸಿದ್ದಾನೆ.

ಇನ್ನು ಲಾಕ್‌ಡೌನ್ ಸಮಯದಲ್ಲಿ‌ ಮಾದಕ ವಸ್ತುಗಳನ್ನ ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿರುವವರ ಬಗ್ಗೆ ಮಾಹಿತಿ‌ ಕಲೆ ಹಾಕಿ ಪೊಲೀಸರು ಈ ವ್ಯಕ್ತಿಯನ್ನ ಬಂಧಿಸಿದ್ದಾರೆ. ರಾಮಮೂರ್ತಿ ನಗರ ಪೊಲೀಸರು ಕಾರ್ಯಾಚರಣೆ ನಡೆಸಿ ಸುಬ್ಬಾರೆಡ್ಡಿ ಎಂಬ ಬಂಧಿತ ಆರೋಪಿಯಿಂದ 6 ಲಕ್ಷ ಮೌಲ್ಯದ 20 ಕೆಜಿ ಗಾಂಜಾ‌ ವಶಕ್ಕೆ ಪಡೆದಿದ್ದಾರೆ.

ಗಾಂಜಾ ಸಾಗಾಟ ಮಾಡುತ್ತಿದ್ದ ಆರೋಪಿ ಬಂಧನ

ಲಾಕ್​ಡೌನ್ ಸಂದರ್ಭದಲ್ಲಿ 1ಕೆಜಿ‌ ಗಾಂಜಾವನ್ನ 25 ಸಾವಿರ‌ ರೂಪಾಯಿಗೆ ರಾಮಮೂರ್ತಿನಗರದ ವಿವಿಧ ಭಾಗಗಳಲ್ಲಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನ ಯಶಸ್ವಿಯಾಗಿ ಬಂಧಿಸಿದ್ದಾರೆ.

ಬಂಧಿತ ಆರೋಪಿ ಆಂಧ್ರದಿಂದ ಕರ್ನಾಟಕ ರಾಜ್ಯಕ್ಕೆ ಬರುವಾಗ ತನ್ನ ದ್ವಿಚಕ್ರ ವಾಹನದಲ್ಲಿ ಗಾಡಿ ಸ್ಟೆಪ್ನಿ‌ ಇರಿಸುವ ಸ್ಥಳ, ಸೀಟ್ ಕೆಳ ಭಾಗದಲ್ಲಿ ಯಾರಿಗೂ ಗೊತ್ತಾಗದ ಹಾಗೆ ಗಾಂಜಾ ಸಾಗಿಸಿ ನಗರಕ್ಕೆ ಬಂದಿದ್ದಾನೆ. ನಂತರ ನಗರಕ್ಕೆ ಈ ಗಾಂಜಾ ತರಿಸಿ ರಾಮಮೂರ್ತಿ ನಗರ ಸುತ್ತಾಮುತ್ತ ಪ್ಲಾಸ್ಟಿಕ್ ಕವರ್‌ನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ.

ಮಾಹಿತಿ ಮೇರೆಗೆ ಈತನನ್ನು ಬಂಧಿಸಿದ ಪೋಲಿಸರು, ಹೆಚ್ಚಿನ‌ ಮಾಹಿತಿ ಪಡೆಯಲು ವಶಕ್ಕೆ ಪಡೆದುಕೊಂಡಿದ್ದಾರೆ.

ABOUT THE AUTHOR

...view details