ಬೆಂಗಳೂರು:ಕಾಲೇಜು ಹುಡುಗರು ಕ್ರಿಕೆಟ್ ಆಡುವ ವೇಳೆ ಗುರಾಯಿಸಿದ್ರು ಅಂತಾ ಹಲ್ಲೆ ನಡೆಸಿದ್ದ ಹುಡುಗನನ್ನು ಕೊಲೆಗೈದ ಆರೋಪಿಗಳನ್ನು ಪೊಲೀಸರು ಪೊಲೀಸರು ಬಂಧಿಸಿದ್ದಾರೆ.
ಚಂದನ್@ಎಬಿಸಿಡಿ ಚಂದ್ರು ಮತ್ತು ರೋಹಿತ್ ಎಂಬ ಆರೋಪಿಗಳನ್ನು ಪೊಲೀಸರು ಶೂಟೌಟ್ ಮಾಡಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಇದೇ 21 ರಂದು ನಂದಿನಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಉಮಾ ಮಹೇಶ್ವರ್ ಎಂಬ ಹುಡುಗನನ್ನು ಚಂದನ್ ಹಾಗೂ ರೋಹಿತ್ ಕ್ರಿಕೆಟ್ ಆಡುವ ವೇಳೆ ಗುರಾಯಿಸಿದ್ದರು. ಹೀಗಾಗಿ ಉಮಾ ಮಹೇಶ್ವರ್ ಇಬ್ಬರ ಮೇಲೂ ಹಲ್ಲೆ ಮಾಡಿದ್ದ. ನಂತ್ರ ಹಲ್ಲೆಗೊಳಗಾದವರು ಅದೇ ರಾತ್ರಿ ಅವನನ್ನು ಕರೆದು ಚಾಕು ಇರಿದು ಕೊಲೆ ಮಾಡಿದ್ದರು ಎನ್ನಲಾಗಿದೆ. ಈ ಸಂಬಂಧ ನಂದಿನಿ ಲೇಔಟ್ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆರೋಪಿಗಳು ನಿನ್ನೆ ರಾಜಗೋಪಾಲನಗರ ಪೊಲೀಸ್ ಠಾಣಾ ವ್ಯಾಪ್ತಿಯ ಜಿಕೆಡಬ್ಲೂ ಲೇಔಟ್ನಲ್ಲಿ ಇರುವ ಮಾಹಿತಿ ಮೇರೆಗೆ ನಂದಿನಿ ಲೇಔಟ್ ಇನ್ಸ್‌ಪೆಕ್ಟರ್ ಲೋಹಿತ್, ಹಂತಕರನ್ನ ಹಿಡಿಯಲು ಹೋಗಿದ್ದಾರೆ. ಆರೋಪಿಗಳಿಬ್ಬರನ್ನು ಬಂಧಿಸಲು ಹೋದಾಗ ಪಿಎಸ್ಐ ನಿತ್ಯಾನಂದ ಹಾಗೂ ಪೇದೆ ಬಸವಣ್ಣ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ. ಈ ವೇಳೆ ಇನ್ಸ್‌ಪೆಕ್ಟರ್ ಲೋಹಿತ್ ಆತ್ಮರಕ್ಷಣೆಗಾಗಿ ಹಂತಕರ ಕಾಲಿಗೆ ಗುಂಡು ಹೊಡೆದು ಬಂಧಿಸಿದ್ದಾರೆ.
ಸದ್ಯ ಗಾಯಾಳು ಆರೋಪಿಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ನಂದಿನಿ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇನ್ನು ಬಂಧಿತ ಇಬ್ಬರು ಆರೋಪಿಗಳ ಮೇಲೆ ಉತ್ತರ ವಿಭಾಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೊಲೆ ಯತ್ನ, ಡಕಾಯಿತಿ, ರಾಬರಿ ಪ್ರಕರಣಗಳು ದಾಖಲಾಗಿದ್ದು, ಸದ್ಯ ಪ್ರಕರಣದ ತನಿಖೆ ಮುಂದುವರೆದಿದೆ.
ಕೊಲೆಯಾದ ಉಮಾ ಮಹೇಶ್ ಮೂಲತಃ ಆಂಧ್ರ ಮೂಲದವನಾಗಿದ್ದು ಈತ ಬೆಂಗಳೂರಿನ ನಂದಿನಿ ಲೇಔಟ್ನ ಸರಸ್ವತಿ ಬಡಾವಣೆಯ ನಿವಾಸಿ. ಖಾಸಗಿ ಕಾಲೇಜ್‌ನಲ್ಲಿ ಬಿಸಿಎ ದ್ವಿತೀಯ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.