ಕರ್ನಾಟಕ

karnataka

ETV Bharat / state

ಹಳೇ ನೋಟು ಕೊಟ್ಟು ಹೆಚ್ಚಿನ ಕಮಿಷನ್ ನೀಡುವುದಾಗಿ ವಂಚಿಸುತ್ತಿದ್ದ ನೌಟಂಕಿ ಕಳ್ಳರು ಅಂದರ್ - Bangalore crime latest news

ಈ ಹಳೇ ನೋಟುಗಳನ್ನು ಕಮೀಷನ್‌ಗೆ ತಾವೇ ರಿಸರ್ವ್ ಬ್ಯಾಂಕ್‌ನಲ್ಲಿ 3 ಪಟ್ಟು ಹೆಚ್ಚು ಅಂದ್ರೆ 30% ಹೊಸ ನೋಟು ಬದಲಾವಣೆ ಮಾಡಿಸಿಕೊಡುವುದಾಗಿ ಜನರಿಗೆ ನಂಬಿಸುತ್ತಿದ್ದರು..

Bangalore
Bangalore

By

Published : Jul 29, 2020, 2:52 PM IST

ಬೆಂಗಳೂರು :ಕೆಲಸ ಕಳೆದುಕೊಂಡ ಯುವಕರನ್ನು ಟಾರ್ಗೆಟ್ ಮಾಡಿ ಬ್ಯಾನ್ ಮಾಡಿದ ಹಳೇ ನೋಟುಗಳನ್ನು ಕೊಟ್ಟು ಚಲಾವಣೆಯಲ್ಲಿರುವ ನೋಟುಗಳನ್ನು ಕಮಿಷನ್‌ಗಾಗಿ ಸಾರ್ವಜನಿಕರಲ್ಲಿ ವಿನಿಮಯ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಉತ್ತರ ವಿಭಾಗ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಿರಣ್‌ಕುಮಾರ್, ಪ್ರವೀಣ್‌ಕುಮಾರ್ ಹಾಗೂ ಪವನ್‌ಕುಮಾರ್ ಬಂಧಿತ ಆರೋಪಿಗಳು. ಜಾಲಹಳ್ಳಿಯ ಹೆಚ್‌ಎಂಟಿ ಸರ್ವೀಸ್ ರಸ್ತೆಯಲ್ಲಿನ ಪ್ರೆಸ್ಟ್ರೀಜ್ ಕೆನ್ಸಿಂಗ್‌ಟನ್ ಅಪಾರ್ಟ್‌ಮೆಂಟ್ ಬಳಿ ಕಾರಿನಲ್ಲಿ ಬಂದು ಕೇಂದ್ರ ಸರ್ಕಾರ ನಿಷೇಧ ಮಾಡಿರುವ ಸಾವಿರ ಮುಖ ಬೆಲೆಯ ಹಳೇ ನೋಟುಗಳನ್ನು ಕೊಟ್ಟು ಹೆಚ್ಚು ಕಮಿಷನ್ ಕೊಡುವುದಾಗಿ ಸಾರ್ವಜನಿಕರಿಗೆ ನೀಡುತ್ತಿದ್ದರು.

ಈ ಕುರಿತಂತೆ ಮಾಹಿತಿ ಪಡೆದ ಉತ್ತರ ವಿಭಾಗದ ಜಾಲಹಳ್ಳಿ ಪೊಲೀಸರು, ದಾಳಿ‌ ನಡೆಸಿ ಆರೋಪಿಗಳನ್ನು ಬಂಧಿಸಿ ಸುಮಾರು 30 ಲಕ್ಷ ರೂ. ಹಣ ವಶಕ್ಕೆ ಪಡೆದಿದ್ದಾರೆ. ಆರೋಪಿಗಳು ಸಾರ್ವಜನಿಕರಿಗೆ‌ ಸಾವಿರದ ಹಳೇ ನೋಟು ಕೊಟ್ಟರೆ ಅದಕ್ಕೆ ಪ್ರತಿಯಾಗಿ 400 ಹೊಸ ನೋಟು ಪಡೆಯುತ್ತಿದ್ದರು. ಹಾಗೆ ಸಾರ್ವಜನಿಕರನ್ನು ನಂಬಿಸಿ ಹಳೇ ನೋಟುಗಳನ್ನು ಖರೀದಿಸಿ ನಮಗೆ ರಿಸರ್ವ್ ಬ್ಯಾಂಕ್‌ನಲ್ಲಿ ಅಧಿಕಾರಿಗಳು ಪರಿಚಯವಿದ್ದಾರೆ.

ಈ ಹಳೇ ನೋಟುಗಳನ್ನು ಕಮೀಷನ್‌ಗೆ ತಾವೇ ರಿಸರ್ವ್ ಬ್ಯಾಂಕ್‌ನಲ್ಲಿ 3 ಪಟ್ಟು ಹೆಚ್ಚು ಅಂದ್ರೆ 30% ಹೊಸ ನೋಟು ಬದಲಾವಣೆ ಮಾಡಿಸಿಕೊಡುವುದಾಗಿ ಜನರಿಗೆ ನಂಬಿಸುತ್ತಿದ್ದರು. ಸದ್ಯ ಆರೋಪಿಗಳನ್ನ ಬಂಧಿಸಿದ್ದು, ಇವರ ಹಿಂದಿರುವ ಮತ್ತಷ್ಟು ಜನರನ್ನು ಪತ್ತೆ ಹಚ್ಚಲು ಪೊಲೀಸರು ತನಿಖೆ ಕೈಕೊಂಡಿದ್ದಾರೆ.

ABOUT THE AUTHOR

...view details