ಬೆಂಗಳೂರು:ನಗರದ ಹಲವೆಡೆ ಮನೆಗಳ್ಳತನ ನಡೆಸಿ ತಲೆಮರೆಸಿಕೊಂಡಿದ್ದ ಖದೀಮನನ್ನು ಪೊಲೀಸರು ಬಂಧಿಸಿದ್ದಾರೆ.ಬಂಧಿತನಿಂದ ಚಿನ್ನ-ಬೆಳ್ಳಿ ವಶಕ್ಕೆ ಪಡೆಯಲಾಗಿದೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್, ಅಂತರ್ ರಾಜ್ಯ ಮನೆಗಳ್ಳತನ ಪ್ರಕರಣದ ಬಗ್ಗೆ ಮಾಹಿತಿ ನೀಡಿದರು. ನೋಯ್ಡಾ ಮೂಲದ ಖುರ್ಷದ್ ಖಾನ್ ಬಂಧಿತ ಅರೋಪಿಯಾಗಿದ್ದು, ಬಂಧಿತನಿಂದ ಒಂದು ಪಿಸ್ತೂಲ್ 5 ಜೀವಂತ ಗುಂಡು ವಶಕ್ಕೆ ಪಡೆದಿದ್ದೇವೆ, ಒಟ್ಟು 61 ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ ಎಂದರು.
ನಾನಾ ಪೊಲೀಸ್ ಠಾಣೆಯಲ್ಲಿ 15 ಪ್ರಕರಣಗಳು ಬೆಳಕಿಗೆ ಬಂದಿವೆ, ನಗರದಲ್ಲಿ ಒಟ್ಟು 15 ಮನೆ ಕಳ್ಳತನ ಮಾಡಿದ್ದ ಎಂದು ತಿಳಿಸಿದರು. ಈ ಹಿಂದೆ ಹರಿಯಾಣದಲ್ಲಿ ಆರ್ಮ್ಸ್ ಆಯ್ಟ್ ಅಡಿ ಅರೆಸ್ಟ್ ಆಗಿದ್ದ ಆರೋಪಿ, ನಂತರ ಬೆಂಗಳೂರು ಕಡೆಗೆ ಬಂದು ಕಳ್ಳತನ ಮಾಡುತ್ತಿದ್ದ, 2013ರಿಂದ ಕರ್ನಾಟಕದಲ್ಲಿ ಕಳ್ಳತನ ಮಾಡಿರುವ ಮಾಹಿತಿ ದೊರೆತಿದೆ ಎಂದರು.