ಬೆಂಗಳೂರು: ಸ್ಯಾಂಡಲ್ವುಡ್ಗೆ ಡ್ರಗ್ಸ್ ನಂಟು ಆರೋಪ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿರುವ ಬೆನ್ನಲ್ಲೇ ಪೊಲೀಸರು ಎಲ್ಲೆಡೆ ಅಲರ್ಟ್ ಆಗಿದ್ದಾರೆ. ಉತ್ತರ ವಿಭಾಗ ಪೊಲೀಸರು ಗಾಂಜಾ ಮಾರುತ್ತಿದ್ದ ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಗಾಂಜಾ ಮಾರಾಟ: ಆರೋಪಿಗಳನ್ನು ಬಂಧಿಸಿದ ಬೆಂಗಳೂರು ಪೊಲೀಸರು - sandalwood drugs case
ಉತ್ತರ ವಿಭಾಗ ಪೊಲೀಸರು ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನ ಬಂಧಿಸಿದ್ದಾರೆ. ಬಂಧಿತರಿಂದ 5 ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ.
![ಗಾಂಜಾ ಮಾರಾಟ: ಆರೋಪಿಗಳನ್ನು ಬಂಧಿಸಿದ ಬೆಂಗಳೂರು ಪೊಲೀಸರು Police arrest of Marijuana Sellers in Bangalore](https://etvbharatimages.akamaized.net/etvbharat/prod-images/768-512-8956256-thumbnail-3x2-nin.jpg)
ಗಾಂಜಾ ಮಾರಾಟ
ಬುಡೆನ್ ಸಾಬ್, ಚಂದ್ರಪ್ಪ, ಮಾರಪ್ಪ ಬಂಧಿತರು. ಆರ್. ಟಿ. ನಗರ ಠಾಣಾ ವ್ಯಾಪ್ತಿಯ ಬಳಿ ಕಾರ್ತಿಕ್ ಎಂಬ ಹುಡುಗ ಗಾಂಜಾ ಸೇವಿಸುತ್ತಿದ್ದ. ಈ ಬಗ್ಗೆ ಮಾಹಿತಿ ಕಲೆಹಾಕಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರಿಂದ 5 ಕೆ.ಜಿ ತೂಕದ ಗಾಂಜಾ ಹಾಗೂ 23 ಕೆಜಿ ತೂಕದ ಹಸಿ ಗಾಂಜಾ ಗಿಡಗಳನ್ನು ವಶಪಡಿಸಿಕೊಳ್ಳಲಾಗಿದೆ.