ಕರ್ನಾಟಕ

karnataka

ETV Bharat / state

ನಾಳೆ ರಾಜ್ಯಕ್ಕೆ ಪ್ರಧಾನಿ ಮೋದಿ ಆಗಮನ: ಬೆಂಗಳೂರು‌ ಪೊಲೀಸರಿಂದ ಬಿಗಿ ಭದ್ರತೆ - ಬೆಂಗಳೂರು ಭದ್ರತೆ

ಪ್ರಧಾನಿ ನರೇಂದ್ರ ಮೋದಿ ನಾಳೆ, ನಾಡಿದ್ದು ಎರಡು ದಿನ ರಾಜ್ಯ ಪವಾಸ ಕೈಗೊಳ್ಳಲಿದ್ದು ಬೆಂಗಳೂರು ಪೊಲೀಸರು ಭದ್ರತೆಗೆ ಸಜ್ಜಾಗಿದ್ದಾರೆ.

police alert in bengaluru
ಬೆಂಗಳೂರಿನಲ್ಲಿ ಪೊಲೀಸ್ ಭದ್ರತೆ

By

Published : Jun 19, 2022, 10:59 AM IST

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಎರಡು ದಿನಗಳ ರಾಜ್ಯ ಪ್ರವಾಸದ ಹಿನ್ನೆಲೆಯಲ್ಲಿ ಬೆಂಗಳೂರು ಪೊಲೀಸರು ಭದ್ರತೆಗೆ ಸಜ್ಜಾಗಿದ್ದಾರೆ. ನಾಳೆ ಬೆಂಗಳೂರಿನ ಕೆಂಗೇರಿ ಬಳಿಯ ಕೊಮ್ಮಘಟ್ಟದ ಬಳಿಯ ಮೈದಾನದಲ್ಲಿ ಬಹಿರಂಗ ಸಭೆ ನಡೆಯಲಿದೆ. ಭದ್ರತೆಗಾಗಿ ಸುಮಾರು ಎರಡು ಸಾವಿರಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಲಾಗಿದೆ.

ಕಮಿಷನರ್ ಪ್ರತಾಪ್ ರೆಡ್ಡಿ ನೇತೃತ್ವದಲ್ಲಿ ಭದ್ರತೆಗೆ ಪೊಲೀಸರು ನಿಯೋಜನೆಗೊಂಡಿದ್ದು ಅಧಿಕಾರಿಗಳು, ಸಿಬ್ಬಂದಿಯ ಸಂಖ್ಯಾಬಲ‌ ಈ ಕೆಳಗಿನಂತಿದೆ.

  • ಹೆಚ್ಚುವರಿ ಆಯುಕ್ತರು -02.
  • ಜಂಟಿ ಆಯುಕ್ತರು-02.
  • ಡಿಸಿಪಿ-08.
  • ಎಸಿಪಿ-25.
  • ಇನ್ಸ್​ಪೆಕ್ಟರ್‌-123.
  • ಸಬ್ ಇನ್ಸ್​​ಪೆಕ್ಟರ್-125.
  • ಎಎಸ್ಐ - ಸಿಬ್ಬಂದಿ-1,736
  • ಒಟ್ಟು -2,100.

ಇದನ್ನೂ ಓದಿ:ಸೋಮವಾರ ಬೆಂಗಳೂರಿಗೆ ಮೋದಿ: ಈ ಮಾರ್ಗದಲ್ಲಿರುವ ಕಾಲೇಜುಗಳಿಗೆ ರಜೆ ಘೋಷಣೆ

ಈ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಪ್ರಧಾನಿ ಕಾರ್ಯಕ್ರಮದ ವೇದಿಕೆ ಹಾಗೂ ಹೆಲಿಪ್ಯಾಡ್ ಸುತ್ತಮುತ್ತ ಬಂದೋಬಸ್ತ್​ ಹೊಣೆ ನೀಡಲಾಗಿದೆ. ಗಣ್ಯರು ಸಂಚರಿಸುವ ರಸ್ತೆಗಳಲ್ಲಿ ನೂರಾರು ಪೊಲೀಸರ ಸರ್ಪಗಾವಲಿರಲಿದೆ. ಸಿಎಆರ್, ಕೆಎಸ್​ಆರ್​ಪಿ, ಗರುಡ ಪಡೆ QRT ಟೀಂ ಕೂಡ ವಿಶೇಷವಾಗಿ ಭದ್ರತೆಗೆ ನಿಯೋಜನೆಗೊಂಡಿವೆ.

ABOUT THE AUTHOR

...view details