ಬೆಂಗಳೂರು:ಕೊರೊನಾ ಸೋಂಕು ನಿಯಂತ್ರಣ ಮಾಡಲು ಒಂದು ವಾರದ ಲಾಕ್ಡೌನ್ ಹೇರಲಾಗಿತ್ತು. ಆದರೆ, ಇಂದಿಗೆ ಲಾಕ್ಡೌನ್ ಕೊನೆಗೊಂಡರೂ ಕೊರೊನಾ ಪ್ರಕರಣಗಳು ಮಾತ್ರ ಕಡಿಮೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ವಿವಿಧ ಠಾಣೆಯ ಪೊಲೀಸರು ಸುಮಾರು 15 ಭಾಷೆಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.
ವಿವಿಧ ಭಾಷೆಗಳ ಮೂಲಕ ಕೊರೊನಾ ಜಾಗೃತಿ ಮೂಡಿಸಿದ ಪೊಲೀಸರು - Bengaluru Police
ಸುಮಾರು 15 ಭಾಷೆಗಳ ಮೂಲಕ ಬೆಂಗಳೂರಿನ ವಿವಿಧ ಠಾಣಾ ಪೊಲೀಸರು ಕೊರೊನಾ ಜಾಗೃತಿ ಮೂಡಿಸಿದ್ದಾರೆ.
ಜಾಗ್ರತೆಯಿಂದ ಇರಿ ಎಂದು ಉತ್ತರ ವಿಭಾಗದ ಪೊಲೀಸರು ಜನರ ಆರೋಗ್ಯದ ದೃಷ್ಟಿಯಿಂದ ಕಾಳಜಿ ವಹಿಸಿಕೊಂಡು ಕನ್ನಡ, ಇಂಗ್ಲಿಷ್, ಹಿಂದಿ, ಉತ್ತರ ಕನ್ನಡ, ತುಳು, ಕೊಡವ, ಸಂಸ್ಕೃತ, ಭೋಜ್ಪುರಿ, ಲಂಬಾಣಿ, ತಮಿಳು, ತೆಲುಗು, ಮಲಯಾಳಂ, ಮರಾಠಿ, ಬೆಂಗಾಳಿ, ಪಂಜಾಬಿ ಭಾಷೆಯಲ್ಲಿ ಘೋಷಣೆಗಳನ್ನು ಕೂಗಿದ್ದಾರೆ.
"ಇದೀಗ ಲಾಕ್ಡೌನ್ ಮುಗಿದಿದೆ. ಆದರೆ ಅಗತ್ಯ ಸೇವೆಯಲ್ಲಿ ತಮ್ಮನ್ನ ತೊಡಗಿಸಿರುವ ಪೊಲೀಸರು ಮಾತ್ರ ನಿರಂತರವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಎಲ್ಲರೂ ಸ್ಯಾನಿಟೈಸರ್, ಮಾಸ್ಕ್ ಉಪಯೋಗಿಸಬೇಕು. ಅನಾವಶ್ಯಕ ಹೊರಗಡೆ ಓಡಾಡಬೇಡಿ. ಎಲ್ಲರೂ ನಿಯಮಗಳನ್ನು ಪಾಲಿಸಿ" ಎಂದು ಮನವಿ ಮಾಡಿದ್ದಾರೆ.