ಬೆಂಗಳೂರು:ಕನ್ನಡ ಸಾಹಿತ್ಯ ಲೋಕದ ಹಿರಿಯ ಕವಿ ಕೆ.ಎಸ್.ನಿಸಾರ್ ಅಹಮದ್ (83) ಬೆಂಗಳೂರಿನ ಪದ್ಮನಾಭನಗರದ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಕಳೆದ ಕೆಲ ವರ್ಷಗಳಿಂದ ಇವರು ಕ್ಯಾನ್ಸರ್ನಿಂದ ಕಾಯಿಲೆಯಿಂದ ಬಳಲುತ್ತಿದ್ದರು.
'ನಿತ್ಯೋತ್ಸವ' ಕವಿ ಪ್ರೊ.ಕೆ.ಎಸ್.ನಿಸಾರ್ ಅಹಮದ್ ಇನ್ನಿಲ್ಲ - ಕೆ ನಿಸಾರ್ ಅಹ್ಮದ್
13:42 May 03
ಕನ್ನಡದ ಹಿರಿಯ ಕವಿ ನಿಸಾರ್ ಅಹಮದ್ ವಿಧಿವಶ
ಕನ್ನಡಿಗರ ಮನಸ್ಸಿನಲ್ಲಿ ಅಚ್ಚಳಿಯದೇ ನೆಲೆಸಿರುವಂಥ ಶ್ರೇಷ್ಠ ಕವಿ ಕೆಎಸ್ನ 73ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರೂ ಆಗಿದ್ದರು. ಕಾವ್ಯವೇ ಅವರ ಮೊದಲ ಪ್ರೀತಿಯಾದರೂ, ಸೊಗಸಾದ ಗದ್ಯವನ್ನೂ ಬರೆದಿದ್ದಾರೆ.
ಬೆಂಗಳೂರು, ಶಿವಮೊಗ್ಗ, ಗುಲ್ಬರ್ಗ ಮತ್ತಿತರೆಡೆ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದು, ಮನಸು ಗಾಂಧಿ ಬಜಾರು(1960), ನೆನೆದವರ ಮನದಲ್ಲಿ(1964), ಸುಮಹೂರ್ತ(1967), ಸಂಜೆ ಐದರ ಮಳೆ(1970), ನಾನೆಂಬ ಪರಕೀಯ(1972), ಆಯ್ದ ಕವಿತೆಗಳು(1974), ನಿತ್ಯೋತ್ಸವ (1976), ಸ್ವಯಂ ಸೇವೆಯ ಗಿಳಿಗಳು (1977), ಅನಾಮಿಕ ಆಂಗ್ಲರು(1982), ಬರಿರಂತರ(1990), ಸಮಗ್ರ ಕವಿತೆಗಳು(1991), ನವೋಲ್ಲಾಸ(1994), ಆಕಾಶಕ್ಕೆ ಸರಹದ್ದುಗಳಿಲ್ಲ (1998), ಅರವತ್ತೈದರ ಐಸಿರಿ (2001), ಸಮಗ್ರ ಭಾವಗೀತೆಗಳು(2001), ಪ್ರಾತಿನಿಧಿಕ ಕವನಗಳು(2002).
ಪ್ರಶಸ್ತಿಗಳು : ಸೋವಿಯತ್ ನೆಹರೂ ಪುರಸ್ಕಾರ, ಕರ್ನಾಟಕ ವಿವಿಯ ಡಾಕ್ಟರೇಟ್, ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ, ರಾಜ್ಯೋತ್ಸವ ಪ್ರಶಸ್ತಿ, ಮಾಸ್ತಿ, ಅನಕೃ ಪ್ರಶಸ್ತಿ, ಎನ್ಸಿಆರ್ಟಿ ರಾಷ್ಟ್ರೀಯ ಬಹುಮಾನ ಇತ್ಯಾದಿ.