ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆ ಪ್ರಧಾನಿ ಮೋದಿ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರೊಂದಿಗೆ ವರ್ಚುಯಲ್ ಮೂಲಕ ಸಂವಾದ ನಡೆಸಿದ್ದಾರೆ. ಈ ವೇಳೆ ಡಬಲ್ ಎಂಜಿನ ಸರ್ಕಾರದ ಯೋಜನೆ, ಅಭಿವೃದ್ಧಿ ಕಾರ್ಯಗಳ ಬಗ್ಗೆ ಕಾರ್ಯಕರ್ತರು ಕೇಳದ ಪ್ರಶ್ನೆಗೆ ಉತ್ತರಿಸಿದರು.
ಯುವಕರ ಸಬಲೀಕರಣವೇ ನಮ್ಮ ಉದ್ದೇಶ:ಕಾಯಕರ್ತರೊಬ್ಬರು ಡಬಲ್ ಎಂಜಿನ ಸರ್ಕಾರದ ಮೂಲ ಉದ್ದೇಶ ಏನು ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಇದರ ಉದ್ದೇಶ ದೇಶದ ಯುವಕರನ್ನು ಬಲಿಷ್ಠಗೊಳಿಸುವುದು, ದೇಶವನ್ನು ಅಭಿವೃದ್ಧಿ ಪಡಿಸುವುದಾಗಿದೆ. ರಾಜ್ಯ ಸೇರಿದಂತೆ ದೇಶ ಅಭಿವೃದ್ದಿ ಹೊಂದಬೇಕಾದರೆ ಡಬಲ್ ಎಂಜಿನ ಸರ್ಕಾರ ಆಯ್ಕೆ ಮಾಡಬೇಕಾಗಿದೆ. ಏಕೆಂದರೆ ಟ್ರ್ಯಾಕ್ಟರ್ಗೆ ಕಾರಿನ ಚಕ್ರ ಅಳವಡಿಸಿದರೇ ಹೇಗೆ ಅದು ಅಪಾಘಾತಕ್ಕಿಡಾಗುತ್ತದೋ ಹಾಗೆಯೇ ಬೇರೆ ಪಕ್ಷವನ್ನು ಅಧಿಕಾರಕ್ಕೆ ತರವುದರಿಂದ ಆಗುತ್ತದೆ. ಈ ಹಿನ್ನೆಲೆ ಡಬಲ್ ಇಂಜಿನ ಸರ್ಕಾರ ಅಧಿಕಾರದಲ್ಲಿದ್ದರೆ ಅಭಿವೃದ್ಧಿ ಕಾರ್ಯಗಳು ವೇಗಾವಗಿ ಆಗುತ್ತವೆ ಎಂದು ಹೇಳಿದರು.
ಈ ಹಿಂದೆ ಆರೋಗ್ಯ ಕ್ಷೇತ್ರ ಅಭಿವೃದ್ಧಿಯಲ್ಲಿ ಹಿಂದುಳಿದಿತ್ತು. ಇದೀಗ ಆರೋಗ್ಯ ಕ್ಷೇತ್ರವನ್ನು ಅಭಿವೃದ್ಧಿ ಪಡಿಸುವಲ್ಲಿ ಬಿಜೆಪಿ ಸರ್ಕಾರ ಯಶಸ್ವಿಯಾಗಿದೆ. ಕಾಂಗ್ರೆಸ್ ಆಡಳಿತದಲ್ಲಿದ್ದಾಗ 1956ರಲ್ಲಿ ದೇಶದಲ್ಲಿ ಮೊದಲ ಏಮ್ಸ್ ಆಸ್ಪತ್ರೆ ಸ್ಥಾಪನೆ ಮಾಡಲಾಗಿತ್ತು. ಅದಾದನಂತರ ಎರಡನೇ ಏಮ್ಸ್ ಸ್ಥಾಪನೆ ಮಾಡಲು 50 ರಿಂದ 60 ವರ್ಷಗಳ ಸಮಯ ಬೇಕಾಯಿತು. ಅದರಲ್ಲೂ 2003ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ ಅವಧಿಯಲ್ಲಿ ಏಮ್ಸ್ ಯೋಜನೆ ವೇಗ ಪಡೆದುಕೊಂಡಿತು.
2014ರ ವರೆಗೂ ದೇಶದಲ್ಲಿ ಏಮ್ಸ್ ಆಸ್ಪತ್ರೆ ಸಂಖ್ಯೆ 7 ಮಾತ್ರ ಇದ್ದವು. 2014ರಂದು ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಏಮ್ ಸಂಖ್ಯೆ 3 ಪಟ್ಟು ಹೆಚ್ಚಿಸಿದೆ. ಪ್ರಸ್ತುತ ದೇಶದಲ್ಲಿ 20 ಏಮ್ಸ್ಗಳನ್ನ ಸ್ಥಾಪನೆ ಮಾಡಲಾಗಿದೆ. ಅಲ್ಲದೇ ಇನ್ನೂ 3 ಏಮ್ಸ್ ನಿರ್ಮಾಣ ಕಾರ್ಯ ವೇಗವಾಗಿ ಸಾಗಿದೆ. ಈ ಬಗ್ಗೆ ಕಾಂಗ್ರೆಸ್ಗೆ ಪ್ರಶ್ನಿಸಿದರೆ ಉತ್ತರ ಕೊಡಲ್ಲ. ಅಲ್ಲದೇ ಮೆಡಿಕಲ್ ಕಾಲೇಜಗಳ ಸಂಖ್ಯೆಯೂ ವಿರಳವಾಗಿತ್ತು. ಅವೆಲ್ಲ ಸಮಸ್ಯೆಗಳನ್ನು ಒಂದೊಂದಾಗಿ ಬಗೆ ಹರಿಸುತ್ತಿದ್ದೇವೆ, ಸ್ವಾತಂತ್ರ ಸಿಕ್ಕಾಗಿನಿಂದಲೂ 2014ರ ವರೆಗೆ ದೇಶದಲ್ಲಿ ಮೆಡಿಕಲ್ ಕಾಲೇಜುಗಳ ಸಂಖ್ಯೆ 380 ಇದ್ದವು. ನಾವು ಅಧಿಕಾರಕ್ಕೆ ಬಂದ ನಂತರ ಕಳೆದ 9 ವರ್ಷಗಳಲ್ಲಿ ಮೆಡಿಕಲ್ ಕಾಲೇಜುಗಳ ಸಂಖ್ಯೆ 600ಕ್ಕೂ ಹೆಚ್ಚಾಗಿವೆ. ಇದು ಡಬಲ್ ಎಂಜಿನ್ ಸಕಾರ್ರದ ಅಭಿವೃದ್ಧಿ ಕೆಲಸಗಳಾಗಿವೆ ಎಂದು ಮೋದಿ ಬಣ್ಣಿಸಿದರು.