ಕರ್ನಾಟಕ

karnataka

ETV Bharat / state

ಮಾಜಿ ಸಿಎಂ ಬಿಎಸ್​ವೈ ಗುಣಗಾನ ಮಾಡಿದ ಪಿಎಂ ಮೋದಿ.. ನೂತನ ಸಿಎಂಗೆ ಶುಭಕೋರಿಕೆ - Karnataka BJP leaders

ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಿರುವ ಬಸವರಾಜ ಬೊಮ್ಮಾಯಿ ಮತ್ತು ಬಿಎಸ್​ ಯಡಿಯೂರಪ್ಪ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

PM Modi
ಪಿಎಂ ಮೋದಿ

By

Published : Jul 28, 2021, 12:39 PM IST

ನವದೆಹಲಿ: ಇಂದು ಕರ್ನಾಟಕದ ನೂತನ ಸಿಎಂ ಆಗಿ ಬಸವರಾಜ ಬೊಮ್ಮಾಯಿ ಪ್ರಮಾಣ ವಚನ ಸ್ವೀಕರಿಸಿರುವ ಶುಭ ಕೋರಿರುವ ಪಿಎಂ ಮೋದಿ, ಮಾಜಿ ಸಿಎಂ ಹಾಗೂ ಪಕ್ಷದ ಹಿರಿಯ ನಾಯಕ ಬಿಎಸ್​ ಯಡಿಯೂರಪ್ಪ ಅವರನ್ನು ಗುಣಗಾನ ಮಾಡಿದ್ದಾರೆ.

"ಬಸವರಾಜ್ ಬೊಮ್ಮಾಯಿ ಅವರಿಗೆ ಅಭಿನಂದನೆಗಳು. ನಮ್ಮ ಸರ್ಕಾರವು ರಾಜ್ಯದಲ್ಲಿ ಮಾಡಿದ ಅಸಾಧಾರಣ ಕಾರ್ಯಗಳನ್ನು ಅವರು ಮುನ್ನಡೆಸುತ್ತಾರೆ ಎಂಬ ವಿಶ್ವಾಸ ನನಗಿದೆ" ಎಂದು ಹೇಳಿದ್ದಾರೆ.

ಬಿಎಸ್​ವೈ ಬಗ್ಗೆ ಮೆಚ್ಚುಗೆ:

ಇನ್ನು ಬಿಎಸ್​ ಯಡಿಯೂರಪ್ಪ ಬಗ್ಗೆಯೂ ಮಾತನಾಡಿದ ಅವರು, "ನಮ್ಮ ಪಕ್ಷಕ್ಕೆ ಮತ್ತು ಕರ್ನಾಟಕದ ಬೆಳವಣಿಗೆಗೆ ಬಿಎಸ್ ಯಡಿಯೂರಪ್ಪ ಅವರ ಕೊಡುಗೆ ಅಪಾರ. ಅವರ ಮಹತ್ವದ ಕೊಡುಗೆಗಳನ್ನ ಗುಣಗಾನ ಮಾಡಲು ಯಾವುದೇ ಪದಗಳು ಸಾಟಿಯಾಗುವುದಿಲ್ಲ. ದಶಕಗಳಿಂದ, ಅವರು ಕಷ್ಟಪಟ್ಟು ದುಡಿದರು. ಕರ್ನಾಟಕದ ಎಲ್ಲ ಭಾಗಗಳಲ್ಲಿ ಸಂಚರಿಸಿದರು. ಜನರೊಂದಿಗೆ ಸಂವಾದ ನಡೆಸಿದರು. ಅವರ ಸಮಾಜ ಕಲ್ಯಾಣಕ್ಕಾಗಿ,ಬದ್ಧತೆಗಾಗಿ ಜನರ ಮೆಚ್ಚುಗೆ ಪಡೆದಿದ್ದಾರೆ" ಎಂದು ಶಹಬ್ಬಾಷ್​​ಗಿರಿ ಕೊಟ್ಟಿದ್ದಾರೆ.

ಇನ್ನು ಮೋದಿ ಅವರ ಟ್ವೀಟ್​ಗೆ ಬಿಎಸ್​ವೈ ಸಹ ಧನ್ಯವಾದ ಸಲ್ಲಿಸಿದ್ದು, "ನಿಮ್ಮ ಮೆಚ್ಚುಗೆಯ ನುಡಿಗಳಿಗೆ ನನ್ನ ನಮನ" ಎಂದು ಹೇಳಿದ್ದಾರೆ.

ABOUT THE AUTHOR

...view details