ಬೆಂಗಳೂರು:ರಾಜ್ಯ ಸರ್ಕಾರ ನೆರೆ ಸಂತ್ರಸ್ತರಿಗೆ ಪರಿಹಾರ ಕಲ್ಪಿಸುವ ವಿಚಾರದಲ್ಲಿ ತಾತ್ಸಾರ ಧೋರಣೆ ತಾಳಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಪಿಎಂ ಮೋದಿ ಫೇಕು, ಸಿಎಂ ಬಿಎಸ್ವೈ ವೀಕು: ಕಾಂಗ್ರೆಸ್ - ಬೆಂಗಳೂರು ರಾಜ್ಯ ಸರ್ಕಾರ
ರಾಜ್ಯ ಸರ್ಕಾರ ನೆರೆ ಸಂತ್ರಸ್ತರಿಗೆ ಪರಿಹಾರ ಕಲ್ಪಿಸುವ ವಿಚಾರದಲ್ಲಿ ತಾತ್ಸಾರ ಧೋರಣೆ ತಾಳಿದೆ ಎಂದು ಟ್ವೀಟ್ ಮಾಡಿ ಆರೋಪಿಸಿರುವ ಕಾಂಗ್ರೆಸ್ ಪಕ್ಷ, ನೆರೆ ಪರಿಹಾರದ ಬಗ್ಗೆ ರಾಜ್ಯ ಸಚಿವ ಸಂಪುಟ ಸಭೆ ನಿರ್ಣಾಯಕ ತೀರ್ಮಾನ ಕೈಗೊಳ್ಳದಿರುವುದು ಅತ್ಯಂತ ನಾಚಿಕೆಗೇಡಿನ ವಿಚಾರ ಎಂದಿದೆ.
ಪಿಎಂ ಮೋದಿ ಫೇಕು; ಸಿಎಂ ಬಿಎಸ್ವೈ ವೀಕು: ಕಾಂಗ್ರೆಸ್
ಈ ಸಂಬಂಧ ಟ್ವೀಟ್ ಮಾಡಿರುವ ಕಾಂಗ್ರೆಸ್ ಪಕ್ಷ, ನೆರೆ ಪರಿಹಾರದ ಬಗ್ಗೆ ರಾಜ್ಯ ಸಚಿವ ಸಂಪುಟ ಸಭೆ ನಿರ್ಣಾಯಕ ತೀರ್ಮಾನ ಕೈಗೊಳ್ಳದಿರುವುದು ಅತ್ಯಂತ ನಾಚಿಕೆಗೇಡಿನ ವಿಚಾರ ಎಂದಿದೆ.
ಆಪರೇಷನ್ ಕಮಲಕ್ಕೆ ರಾತ್ರೋರಾತ್ರಿ ಒರ್ವ ಶಾಸಕರಿಗೆ 40, 50 ಕೋಟಿ ರೂ. ಖರ್ಚು ಮಾಡಲು ಸಾಧ್ಯವಾಗಿತ್ತು. ಆದರೆ ನೆರೆ ಪರಿಹಾರ ನೀಡಲು 60 ದಿನಗಳು ಸಾಲದೆ? ಪಿಎಂ ನರೇಂದ್ರ ಮೋದಿ ಫೇಕು, ಸಿಎಂ ಬಿಎಸ್ವೈ ವೀಕು ಎಂದು ಕಾಲೆಳೆದಿದೆ.