ಕರ್ನಾಟಕ

karnataka

ETV Bharat / state

ಇಂಡಿಯನ್ ಎನರ್ಜಿ ವೀಕ್-2023 ಉದ್ಘಾಟಿಸಿದ ಪ್ರಧಾನಿ : ಹಸಿರು ಇಂಧನ ಕ್ಷೇತ್ರದಲ್ಲಿ ಬಹುಹಂತದ ಉಪಕ್ರಮಗಳಿಗೆ ಚಾಲನೆ - ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ತುಮಕೂರಿಗೆ ಆಗಮಿಸಿದ ಪ್ರಧಾನಿ ಮೋದಿಯ ಒಂದು ದಿನದ ಪ್ರವಾಸದ ಯೋಜನೆಗಳು ಹೀಗಿವೆ.

Inauguration of Indian Energy Week-2023
ಇಂಡಿಯನ್ ಎನರ್ಜಿ ವೀಕ್-2023 ಉದ್ಘಾಟನೆ

By

Published : Feb 6, 2023, 2:01 PM IST

ಬೆಂಗಳೂರು:ಒಂದು ದಿನದ ರಾಜ್ಯ ಪ್ರವಾಸಕ್ಕೆ ಆಗಮಿಸಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ 2023 ರ ಇಂಧನ ಸಪ್ತಾಹವನ್ನು ಉದ್ಘಾಟಿಸಿದ್ದು, ಮಧ್ಯಾಹ್ನ 3.30 ಕ್ಕೆ ತುಮಕೂರಿನಲ್ಲಿ ಎಚ್ಎಎಲ್ ಹೆಲಿಕಾಪ್ಟರ್ ಕಾರ್ಖಾನೆಯನ್ನು ದೇಶಕ್ಕೆ ಸಮರ್ಪಿಸಲಿದ್ದಾರೆ ಮತ್ತು ಹಲವಾರು ಅಭಿವೃದ್ದಿ ಯೋಜನೆಗಳಿಗೆ ಶಿಲಾನ್ಯಾಸ ನೆರವೇರಿಸಲಿದ್ದಾರೆ.

ತುಮಕೂರು ರಸ್ತೆಯಲ್ಲಿರುವ ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಆಯೋಜನೆಗೊಂಡಿದ್ದ2023 ರ [ಐಇಡಬ್ಲ್ಯೂ] ಭಾರತ ಇಂಧನ ಸಪ್ತಾಹವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ. ಇಂದಿನಿಂದ ರಿಂದ ಫೆ.8 ರ ವರೆಗೆ ಐಇಡಬ್ಲ್ಯೂ ಆಯೋಜನೆಗೊಂಡಿದ್ದು, ಇದು ಭಾರತದ ಬೆಳವಣಿಗೆಯಾಗುತ್ತಿರುವ ಇಂಧನ ಪರಿವರ್ತನೆಯ ಶಕ್ತಿ ಕೇಂದ್ರವಾಗಿರುವುದನ್ನು ಅನಾವರಣಗೊಳಿಸಲಿದೆ.

ಇಂಡಿಯನ್ ಎನರ್ಜಿ ವೀಕ್-2023 ಉದ್ಘಾಟನೆ

ಸಾಂಪ್ರದಾಯಿಕ ಮತ್ತು ಸಾಂಪ್ರದಾಯಿಕವಲ್ಲದ ಇಂಧನ ಕೈಗಾರಿಕೆ ವಲಯ, ಸರ್ಕಾರಗಳು ಮತ್ತು ಶೈಕ್ಷಣಿಕ ವಲಯದ ನಾಯಕರನ್ನು ಇದು ಒಟ್ಟಿಗೆ ತರಲಿದ್ದು, ಸವಾಲುಗಳು ಮತ್ತು ಜವಾಬ್ದಾರಿಯುತ ಇಂಧನ ಪರಿವರ್ತನೆಯ ಅವಕಾಶಗಳ ಕುರಿತು ಚರ್ಚಿಸಲಿದೆ. ಜಗತ್ತಿನಾದ್ಯಂತ 30ಕ್ಕೂ ಹೆಚ್ಚು ಸಚಿವರ ಸಮ್ಮುಖದಲ್ಲಿ, 30 ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು, ಒಂದು ಸಾವಿರ ಮಳಿಗೆಗಳು, 500 ಕ್ಕೂ ಹೆಚ್ಚು ಭಾಷಣಕಾರರು ಭಾರತದ ಇಂಧನ ಭವಿಷ್ಯ ಕುರಿತ ಸವಾಲುಗಳು ಮತ್ತು ಅವಕಾಶಗಳ ಬಗ್ಗೆ ಚರ್ಚಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಅವರು ಜಾಗತಿಕ ತೈಲ ಮತ್ತು ಅನಿಲ ವಲಯದ ಸಿಇಒಗಳ ದುಂಡು ಮೇಜಿನ ಸಭೆಯಲ್ಲಿ ಸಂವಾದದಲ್ಲಿ ಭಾಗವಹಿಸಲಿದ್ದಾರೆ. ಹಸಿರು ಇಂಧನ ಕ್ಷೇತ್ರದಲ್ಲಿ ಬಹುಹಂತದ ಉಪಕ್ರಮಗಳಿಗೆ ಅವರು ಚಾಲನೆ ನೀಡಲಿದ್ದಾರೆ. ಇಂಧನ ವಲಯದಲ್ಲಿ ಸ್ವಾವಲಂಬನೆ ಸಾಧಿಸಲು ಎಥನಾಲ್ ಮಿಶ್ರಣ ಪ್ರಮುಖವಾಗಿ ಕೇಂದ್ರೀರಿಸಿದ ವಲಯವಾಗಿದೆ. ಸರ್ಕಾರದ ಸುಸ್ಥಿರ ಪ್ರಯತ್ನಗಳಿಂದಾಗಿ 2013 -14 ರಿಂದ ಎಥನಾಲ್ ಉತ್ಪಾದನೆ ಆರು ಪಟ್ಟು ಏರಿಕೆಯಾಗಿದೆ.

ಇಂಡಿಯನ್ ಎನರ್ಜಿ ವೀಕ್-2023 ಉದ್ಘಾಟನೆ

ಎಥನಾಲ್ ಮಿಶ‍್ರಣ ಮತ್ತು ಜೈವಿಕ ಇಂಧನ ಕಾರ್ಯಕ್ರಮದಡಿ ಕಳೆದ ಎಂಟು ವರ್ಷಗಳ ಅವಧಿಯಲ್ಲಿ ಭಾರತದ ಸಾಧನೆಗಳು ಇಂಧನ ಭದ್ರತೆಯನ್ನು ಹೆಚ್ಚಿಸಿದೆಯಷ್ಟೇ ಅಲ್ಲದೇ 318 ಮೆಟ್ರಿಕ್ ಟನ್ ಗಳಷ್ಟು ಸಿಒ2 ಹೊರ ಸೂಸುವಿಕೆ ಮತ್ತು 54 ಸಾವಿರ ಕೋಟಿ ರೂಪಾಯಿ ಮೊತ್ತದ ವಿದೇಶಿ ವಿನಿಮಯ ಸೇರಿದಂತೆ ಇತರೆ ಪ್ರಯೋಜನಗೆಳಿಗೆ ಕಾರಣವಾಗಿದೆ. ಇದರ ಫಲವಾಗಿ 2014 ರಿಂದ 2022 ರ ಅವಧಿಯಲ್ಲಿ 81,800 ಕೋಟಿ ರೂಪಾಯಿ ಎಥನಾಲ್ ಪೂರೈಕೆದಾರರಿಗೆ ಪಾವತಿಸಲಾಗಿದೆ ಮತ್ತು ರೈತರಿಗೆ 49,000 ಕೋಟಿ ರೂಪಾಯಿ ಮೊತ್ತವನ್ನು ವರ್ಗಾಯಿಸಲಾಗಿದೆ.

ಎಥನಾಲ್ ಮಿಶ್ರಣ ಮಾರ್ಗನಕ್ಷೆಯಡಿ ಪ್ರಧಾನಮಂತ್ರಿ ಅವರು 11 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ತೈಲ ಮಾರುಕಟ್ಟೆ ಕಂಪೆನಿಗಳ 84 ಚಿಲ್ಲರೆ ಮಳಿಗೆಗಳಲ್ಲಿ ಇ20 ಇಂಧನ ಉಪಕ್ರಮವನ್ನು ಪ್ರಾರಂಭಿಸಲಿದ್ದಾರೆ. ಇ20 ಪೆಟ್ರೋಲ್ ನಲ್ಲಿ ಶೇ.20 ರಷ್ಟು ಎಥನಾಲ್ ಮಿಶ್ರಣ ಮಾಡಲಾಗುತ್ತದೆ. ಬರುವ 2025 ರ ವೇಳೆಗೆ ಶೇ.20 ರಷ್ಟು ಎಥನಾಲ್ ಮಿಶ್ರಣ ಮಾಡುವ ಗುರಿಯನ್ನು ಹೊಂದಲಾಗಿದೆ ಮತ್ತು ಇದರ ಪ್ರಗತಿಗಾಗಿ ತೈಲ ಮಾರುಕಟ್ಟೆ ಕಂಪೆನಿಗಳು 2ಜಿ -3ಜಿ ಎಥನಾಲ್ ಘಟಕಗಳನ್ನು ಪ್ರಾರಂಭಿಸಲಿವೆ.

ಉದ್ಘಾಟನಾ ಕಾರ್ಯಕ್ರಮದ ನಂತರ ಪ್ರಧಾನಮಂತ್ರಿ ಅವರು ಹಸಿರು ಸಾಗಣೆ ಜಾಥಾಗೆ ಚಾಲನೆ ನೀಡಿದರು. ಈ ಜಾಥ ಹಸಿರಿರುವ ಇಂಧನ ಮೂಲಗಳಿಂದ ಚಲಿಸುವ ವಾಹನಗಳ ಪಾಲ್ಗೊಳ್ಳುವಿಕೆಗೆ ಸಾಕ್ಷಿಯಾಗಲಿದೆ ಮತ್ತು ಹಸಿರು ಇಂಧನ ಕುರಿತು ಜಾಗೃತಿ ಮೂಡಿಸಲು ಸಹಾಯ ಮಾಡಲಿದೆ. ಇದಾದ ನಂತರ ಪ್ರಧಾನಮಂತ್ರಿ ಅವರು ಶೀಶೆ ರಹಿತ ಉಪಕ್ರಮದಡಿ ಸಮವಸ್ತ್ರಗಳನ್ನು ಬಿಡುಗಡೆ ಮಾಡಿದರು. ಏಕ ಬಳಕೆ ಪ್ಲಾಸ್ಟಿಕ್ ಅನ್ನು ಹಂತ ಹಂತವಾಗಿ ತೊಡೆದುಹಾಕಲು ಪ್ರಧಾನಮಂತ್ರಿ ಅವರ ದೂರದೃಷ್ಟಿಯ ಮಾರ್ಗದರ್ಶನದಿಂದ ಭಾರತೀಯ ತೈಲ ನಿಗಮ ಮರು ಬಳಕೆಯ ಪಾಲಿಯಸ್ಟರ್ [ಆರ್ ಪಿಇಟಿ] ಮತ್ತು ಹತ್ತಿಯಿಂದ ಉತ್ಪಾದಿಸಿದ ಸಮವಸ್ತ್ರವನ್ನು ಚಿಲ್ಲರೆ ವಲಯ ಮತ್ತು ಎಲ್.ಪಿ.ಜಿ ವಿತರಣಾ ಸಿಬ್ಬಂದಿಗೆ ಸಮವಸ್ತ್ರವನ್ನು ವಿತರಿಸುವುದನ್ನು ಇದರಡಿ ಅಳವಡಿಸಿಕೊಳ್ಳಲಾಗಿದೆ.

ಭಾರತೀಯ ತೈಲ ನಿಗಮದ ಪ್ರತಿಯೊಂದು ಸಮವಸ್ತ್ರಕ್ಕೆ 28 ಪೆಟ್ ಶೀಶೆಗಳ ಮರು ಬಳಕೆಯನ್ನು ಮಾಡಲಾಗುತ್ತದೆ. ಭಾರತೀಯ ತೈಲ ನಿಗಮದ ಈ ಉಪಕ್ರಮ ಶೀಶೆ ರಹಿತ ಉಪಕ್ರಮಕ್ಕೆ ಮತ್ತಷ್ಟು ಉತ್ತೇಜನ ನೀಡಲಿದ್ದು, ಸುಸ್ಥಿರ ಉಡುಪುಗಳ ಬ್ರ್ಯಾಂಡ್ ಗಳು, ಮರು ಬಳಕೆಯ ಪಾಲಿಯಸ್ಟರ್ ನಿಂದ ತಯಾರಿಸಿರುವ ಸರಕುಗಳಿಗಾಗಿ ಇದನ್ನು ಪ್ರಾರಂಭಿಸಲಾಗಿದೆ. ಈ ಬ್ರ್ಯಾಂಡ್ ನಡಿ ಭಾರತೀಯ ತೈಲ ನಿಗಮ ಇತರೆ ತೈಲ ಮಾರುಕಟ್ಟೆ ಕಂಪೆನಿಗಳ ಗ್ರಾಹಕರಿಗೆ ಸಮವಸ್ತ್ರದ ಅವಶ್ಯಕತೆಗಳನ್ನು ಪೂರೈಸುವ ಗುರಿ ಹೊಂದಿದೆ. ಸೇನೆಗೆ ಯುದ್ಧದ ಉದ್ದೇಶ ಹೊರತುಪಡಿಸಿದ ಸಮವಸ್ತ್ರಗಳು, ಸಂಸ್ಥೆಗಳಿಗೆ ಸಮವಸ್ತ್ರಗಳು, ಉಡುಪುಗಳು ಮತ್ತು ಚಿಲ್ಲರೆ ಗ್ರಾಹಕರಿಗೆ ಮಾರಾಟ ಮಾಡುವ ಉದ್ದೇಶವನ್ನು ಸಹ ಈ ಉಪಕ್ರಮದಡಿ ಹೊಂದಲಾಗಿದೆ.

ಇದಾದ ನಂತರ ಪ್ರಧಾನಮಂತ್ರಿ ಅವರು ಭಾರತೀಯ ತೈಲ ನಿಮಗದ ಒಳಾಂಗಣ ಸೌರ ಅಡುಗೆ ವ್ಯವಸ್ಥೆಯ ಅವಳಿ ಕುಕ್ ಟಾಪ್ ಮಾದರಿಯನ್ನು ಲೋಕಾರ್ಪಣೆ ಮಾಡಿದರು. ಇದರ ವಾಣಿಜ್ಯ ಚಟುವಟಿಕೆಗೆ ಚಾಲನೆ ನೀಡಿದರು. ಭಾರತೀಯ ತೈಲ ನಿಗಮ ಭಾರತೀಯ ತೈಲ ನಿಗಮ ಈ ಹಿಂದೆ ಒಂದೇ ಕುಕ್ ಟಾಪ್ ನೊಂದಿಗೆ ನವೀನ ಮತ್ತು ಹಕ್ಕುಸ್ವಾಮ್ಯ ಪಡೆದ ಒಳಾಂಗಣ ಅಡುಗೆ ವ್ಯವಸ್ಥೆಯನ್ನು ಅಭಿವೃದ್ದಿಪಡಿಸಿತ್ತು. ಇದರ ಆಧಾರದ ಮೇಲೆ ಸ್ವೀಕರಿಸಿದ ಅಭಿಪ್ರಾಯಗಳಂತೆ ಎರಡು ಕುಕ್ ಟಾಪ್ ಒಳಗೊಂಡ ಒಳಾಂಗಣ ಸೌರ ಅಡುಗೆ ವ್ಯವಸ್ಥೆಯ ವಿನ್ಯಾಸ ಹೆಚ್ಚು ಹೊಂದಾಣಿಕೆಯಾಗಲಿದೆ ಮತ್ತು ಸುಲಭವಾಗಿ ಬಳಸಬಹುದಾಗಿದೆ. ಇದು ಕ್ರಾಂತಿಕಾರಿ ಒಳಾಂಗಣ ಸೌರ ಅಡುಗೆಗೆ ಪರಿಹಾರವಾಗಿದ್ದು, ಸೌರ ಮತ್ತು ಸಹಾಯಕ ಶಕ್ತಿ ಮೂಲಗಳೆರೆಡರಲ್ಲೂ ಏಕಕಾಲದಲ್ಲಿ ಇದು ಕಾರ್ಯನಿರ್ವಹಿಸುತ್ತದೆ. ಭಾರತಕ್ಕೆ ಅಡುಗೆ ವಲಯದಲ್ಲಿ ಇದು ವಿಶ್ವಾಸಾರ್ಹ ಪರಿಹಾರವಾಗಿದೆ.

ಇನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಇಂಧನ ಹಾಗೂ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಆರ್.ಕೆ. ಸಿಂಗ್ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು

ಇದನ್ನೂ ಓದಿ:ಗುಬ್ಬಿ ಬಳಿ ಪ್ರಧಾನಿ ಕಾರ್ಯಕ್ರಮ; ಮೋದಿಗಾಗಿ ತಯಾರಾಗಿದೆ ವಿಶೇಷ ಅಡಿಕೆ ಪೇಟ

ABOUT THE AUTHOR

...view details