ಕರ್ನಾಟಕ

karnataka

ETV Bharat / state

ರಾಜ್ಯದ 47.86 ಲಕ್ಷ ರೈತರಿಗೆ ಸಿಎಂ ಕಿಸಾನ್ ಯೋಜನೆ 956.71 ಕೋಟಿ ಬಿಡುಗಡೆ - ಪ್ರಧಾನ ಮಂತ್ರಿ ಕಿಸಾನ್ ಹಣ ಬಿಡುಗಡೆ

ಸಿಎಂ ಕಿಸಾನ್ ಸಮ್ಮಾನ್​​​​​​​​​​, ಕರ್ನಾಟಕ ಯೋಜನೆಯಡಿ ರಾಜ್ಯ ಸರ್ಕಾರದಿಂದ ರಾಜ್ಯದ ಕಂತಾದ 2,000 ರೂ.ಗಳನ್ನು ಬಿಡುಗಡೆ ಮಾಡಲಾಗಿದೆ.

pm-kisan-project-rs-956-dot-71-crore-released-for-state-farmers
ರಾಜ್ಯದ 47.86 ಲಕ್ಷ ರೈತರಿಗೆ ಪಿಎಂ ಕಿಸಾನ್ ಯೋಜನೆ 956.71 ಕೋಟಿ ಬಿಡುಗಡೆ

By

Published : Jun 2, 2022, 4:48 PM IST

ಬೆಂಗಳೂರು:ಕಿಸಾನ್ ಸಮ್ಮಾನ ಕರ್ನಾಟಕ ಯೋಜನೆಯಡಿ ರಾಜ್ಯ ಸರ್ಕಾರ ರಾಜ್ಯದ ಕಂತಾದ 2,000 ರೂ.ಗಳನ್ನು ಬಿಡುಗಡೆ ಮಾಡಿದೆ. ಮುಖ್ಯಮಂತ್ರಿ ಬೊಮ್ಮಾಯಿ ಗೃಹ ಕಚೇರಿ ಕೃಷ್ಣಾದಲ್ಲಿ 47.86 ಲಕ್ಷ ರೈತರಿಗೆ ಒಟ್ಟು 956.71 ಕೋಟಿ ರೂ. ಮೊತ್ತವನ್ನು ರಾಜ್ಯದ ರೈತರ ಬ್ಯಾಂಕ್ ಖಾತೆಗಳಿಗೆ ಡಿಬಿಟಿ ಮೂಲಕ ಬಿಡುಗಡೆ ಮಾಡಿದರು.

ಇಲ್ಲಿಯವರೆಗೆ ರಾಜ್ಯ ಸರ್ಕಾರವು ಒಟ್ಟು 3861.66 ಕೋಟಿ ರೂ. ನೆರವನ್ನು ರೈತರಿಗೆ ಬಿಡುಗಡೆ ಮಾಡಿದೆ. ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ 2019ರಿಂದ ಮಾರ್ಚ್​ವರೆಗೆ 53.83 ಲಕ್ಷ ರೈತರಿಗೆ 8702.29 ಕೋಟಿ ರೂ. ನೆರವು ಬಿಡುಗಡೆಗೊಳಿಸಿದೆ.

ಮೇ 31ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ರಾಜ್ಯದ 49.30 ಲಕ್ಷ ರೈತರಿಗೆ 1279.86 ಕೋಟಿ ರೂ. ಬಿಡುಗಡೆ ಮಾಡಿದ್ದಾರೆ.

ಇದನ್ನೂ ಓದಿ:ನನ್ನ‌ ಹೆಸರು ಬಳಸಿಕೊಂಡು ಹಣ ಕೇಳಿದರೆ ಕೊಡಬೇಡಿ: ಚಂದ್ರಶೇಖರ ಕಂಬಾರ

ABOUT THE AUTHOR

...view details