ಕರ್ನಾಟಕ

karnataka

ETV Bharat / state

ಪ್ಲೀಸ್​​ ನಮ್ಮ ಯಜಮಾನರಿಗೆ ರಕ್ಷಣೆ ಕೊಡಿಸಿ: ಬಿಎಸ್​​ವೈಗೆ ಶಾಸಕ ಸುಧಾಕರ್​​ ಪತ್ನಿ ಮನವಿ - ಸುಧಾಕರ್​​

ನಮ್ಮ ಯಜಮಾನರಿಗೆ ರಕ್ಷಣೆ ಕೊಡಿಸಿ ಅಂತ ಶಾಸಕ ಸುಧಾಕರ್ ಪತ್ನಿ ಯಡಿಯೂರಪ್ಪರಿಗೆ ಕರೆ ಮಾಡಿ ಮನವಿ ಮಾಡಿಕೊಂಡಿದ್ದಾರೆ. ಈ ಸಂಬಂಧ ಯಡಿಯೂರಪ್ಪ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ್ದು, ಶಾಸಕರನ್ನು ಕೂಡಿ ಹಾಕಿ ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಪ್ಲೀಸ್ ನಮ್ಮ ಯಜಮಾನರಿಗೆ ರಕ್ಷಣೆ ಕೊಡಿ; ಶಾಸಕ ಸುಧಾಕರ್ ಪತ್ನಿ ಪ್ರೀತಿ ಮನವಿ

By

Published : Jul 10, 2019, 7:30 PM IST

ಬೆಂಗಳೂರು: ರಾಜ್ಯ ರಾಜಕೀಯದ ಹೈಡ್ರಾಮಾ ಜೋರಾಗಿದ್ದು, ರಾಜೀನಾಮೆ ನೀಡಿ ಹೊರ ಬರುತ್ತಿದ್ದ ಶಾಸಕ ಸುಧಾಕರ್ ಶೆಟ್ಟಿಯವರನ್ನ ಕೈ ನಾಯಕರು ಸುತ್ತುವರೆದು ಸಂಧಾನಕ್ಕೆ ಕರೆದೊಯ್ಯುವಾಗ ಭಾರೀ ಹೈ ಡ್ರಾಮಾವೇ ನಡೆಯಿತು.

ಪ್ಲೀಸ್ ನಮ್ಮ ಯಜಮಾನರಿಗೆ ರಕ್ಷಣೆ ಕೊಡಿಸಿ; ಶಾಸಕ ಸುಧಾಕರ್ ಪತ್ನಿ ಪ್ರೀತಿ ಮನವಿ

ನಾಯಕರ ಗದ್ದಲ ಹಿನ್ನೆಲೆ ನಮ್ಮ ಯಜಮಾನರಿಗೆ ರಕ್ಷಣೆ ಕೊಡಿಸಿ ಅಂತ ಸುಧಾಕರ್ ಪತ್ನಿ ಯಡಿಯೂರಪ್ಪರಿಗೆ ಕರೆ ಮಾಡಿ ಮನವಿ ಮಾಡಿಕೊಂಡಿದ್ದಾರೆ. ಈ ಸಂಬಂಧ ಯಡಿಯೂರಪ್ಪ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ್ದು, ಶಾಸಕರನ್ನು ಕೂಡಿ ಹಾಕಿ ದಬ್ಬಾಳಿಕೆ ನಡೆಸುತ್ತಿದ್ದಾರೆ ಅಂತಾ ಕಿಡಿಕಾರಿದ್ದಾರೆ.

ಈ ಸಂಬಂಧ ಮಾತನಾಡಿರುವ ಯಡಿಯೂರಪ್ಪ, ನಾನು ಪೊಲೀಸ್ ಆಯುಕ್ತರು ಹಾಗೂ ರಾಜ್ಯಪಾಲರಿಗೆ ಮನವಿ ಮಾಡಿದ್ದೇನೆ. ತಕ್ಷಣ ಸುಧಾಕರ್​ಗೆ ರಕ್ಷಣೆ ಕೊಡಬೇಕು. ಅವರು ರಾಜಭವನಕ್ಕೆ ಬರಲು ಅವಕಾಶ ಮಾಡಿಕೊಡಬೇಕು. ಗೂಂಡಾಗಿರಿಗೂ ಒಂದು ಮಿತಿ ಇರುತ್ತದೆ. ಸಚಿವ ಪ್ರಿಯಾಂಕ್​​ ಖರ್ಗೆ, ಕಾಂಗ್ರೆಸ್ ಅಧ್ಯಕ್ಷ ದಿನೇಶ್​​ ಗುಂಡೂರಾವ್ ಅವರೇ ಮ್ಯಾನ್ ಹ್ಯಾಂಡ್ಲಿಂಗ್​ ಮಾಡಿದ್ದಾರೆ. ಶಾಸಕರು ರಾಜೀನಾಮೆ ಕೊಡುತ್ತಿದ್ದಂತೆಯೇ ಸರ್ಕಾರ ಬಹುಮತ ಕಳೆದುಕೊಂಡಿರುವುದನ್ನು ಅರ್ಥ ಮಾಡಿಕೊಂಡು ಕುಮಾರಸ್ವಾಮಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ ಅಂತಾ ಯಡಿಯೂರಪ್ಪ ಕಿಡಿಕಾರಿದ್ದಾರೆ.

ABOUT THE AUTHOR

...view details