ಬೆಂಗಳೂರು: ನಾಳೆಯಿಂದ ಬೆಂಗಳೂರು ಅನ್ಲಾಕ್ ಮಾಡುವುದಾದರೆ ಚಿಕ್ಕಪೇಟೆಯಲ್ಲೂ ವ್ಯಾಪಾರಕ್ಕೆ ಅನುಮತಿ ನೀಡಿ ಎಂದು ಬೆಂಗಳೂರು ಹೋಲ್ಸೆಲ್ ಬಟ್ಟೆ ವ್ಯಾಪಾರಿಗಳ ಸಂಘದ ಅಧ್ಯಕ್ಷ ಪ್ರಕಾಶ್ ಪಿರ್ಗಲ್ ಮುಖ್ಯಮಂತ್ರಿಗೆ ಮನವಿ ಮಾಡಿದ್ದಾರೆ.
‘ಅನ್ಲಾಕ್ ಮಾಡುವುದಾದರೆ ನಮಗೂ ವ್ಯಾಪಾರಕ್ಕೆ ಅವಕಾಶ ಕೊಡಿ’: ಚಿಕ್ಕಪೇಟೆ ವ್ಯಾಪಾರಸ್ಥರ ಮನವಿ - CM BS Yeddyurappa
ಸರ್ಕಾರದ ನಿಯಮಗಳನ್ನು ಪಾಲಿಸಿ ನಾವು ದೈನಂದಿನ ವ್ಯಾಪಾರ ಮಾಡುತ್ತೇವೆ. ಅಲ್ಲದೆ ಬೆಂಗಳೂರು ಪೂರ್ತಿ ವ್ಯಾಪಾರ ವಹಿವಾಟಿಗೆ ಮುಖ್ಯಮಂತ್ರಿಗಳು ಅನುಮತಿ ನೀಡುವಂತೆ ಪ್ರಕಾಶ್ ಪಿರ್ಗಲ್ ಮನವಿ ಮಾಡಿದ್ದಾರೆ.
ಒಂದು ವೇಳೆ ನಾಳೆಯಿಂದ ಬೆಂಗಳೂರು ಅನ್ಲಾಕ್ ಮಾಡುವುದಾದರೆ ನಮಗೂ ವ್ಯಾಪಾರಕ್ಕೆ ಅನುಮತಿ ನೀಡಿ. ಕಳೆದ 27 ದಿನಗಳಿಂದ ಚಿಕ್ಕಪೇಟೆ ಸೀಲ್ಡೌನ್ ಆಗಿದೆ. ಸೀಲ್ಡೌನ್ಗೂ ಮೊದಲು ಚಿಕ್ಕಪೇಟೆಯಿಂದಲೇ ಹೆಚ್ಚು ಕೊರೊನಾ ಹರಡುತ್ತಿದೆ ಎನ್ನಲಾಗಿತ್ತು. ಇದರಿಂದ ನಾವು ಸಹ ಸೀಲ್ಡೌನ್ಗೆ ಬೆಂಬಲ ನೀಡಿದ್ದೆವು. ಆದರೆ ಚಿಕ್ಕಪೇಟೆ ಸೀಲ್ಡೌನ್ ಆದಮೇಲೆ ಸೋಂಕಿತ ಪ್ರಕರಣಗಳ ಸಂಖ್ಯೆಯೇನೂ ಕಡಿಮೆಯಾಗಿಲ್ಲ. ಒಂದು ತಿಂಗಳಷ್ಟು ಕಾಲ ಚಿಕ್ಕಪೇಟೆ ಸೀಲ್ಡೌನ್ನಲ್ಲಿದೆ ಎಂದಿದ್ದಾರೆ.
ಅಲ್ಲದೆ ಸರ್ಕಾರದ ನಿಯಮಗಳನ್ನು ಪಾಲಿಸಿ ನಾವು ದೈನಂದಿನ ವ್ಯಾಪಾರ ಮಾಡುತ್ತೇವೆ. ಇನ್ನು ಬೆಂಗಳೂರು ಪೂರ್ತಿ ವ್ಯಾಪಾರ ವಹಿವಾಟಿಗೆ ಮುಖ್ಯಮಂತ್ರಿಗಳು ಅನುಮತಿ ನೀಡುವಂತೆ ಪ್ರಕಾಶ್ ಪಿರ್ಗಲ್ ಮನವಿ ಮಾಡಿದ್ದಾರೆ.