ಬೆಂಗಳೂರು:ಕಳೆದ ತಿಂಗಳು ಕೊರೊನಾ ಸೋಂಕಿನಿಂದ ಸಂಪೂರ್ಣ ಗುಣಮುಖರಾದ ಕುಣಿಗಲ್ ಶಾಸಕ ಡಾ. ರಂಗನಾಥ್ ಹಾಗೂ ಅವರ ಸಹೋದರ ಡಾ. ರಾಮಚಂದ್ರ ಪ್ರಭು ಪ್ಲಾಸ್ಮಾವನ್ನು ಕೊರೊನಾ ರೋಗಿಗಳಿಗೆ ದಾನ ಮಾಡಿದ್ದಾರೆ.
ಶಾಸಕ ರಂಗನಾಥ್ ಹಾಗೂ ಸಹೋದರನಿಂದ ಹೆಚ್ಸಿಜಿ ಆಸ್ಪತ್ರೆಯಲ್ಲಿ ಪ್ಲಾಸ್ಮಾ ದಾನ - Legislator plasma donation
ಬೆಂಗಳೂರಿನ ಕಾರ್ಪೋರೇಷನ್ ಕೇಂದ್ರ ಕಚೇರಿ ಹಿಂಭಾಗದಲ್ಲಿರುವ ಹೆಚ್ಸಿಜಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಶಾಸಕ ಡಾ. ರಂಗನಾಥ್ ಬುಧವಾರ ಪ್ಲಾಸ್ಮಾ ದಾನ ಮಾಡಿದ್ದಾರೆ. ಇದರೊಂದಿಗೆ ಪ್ಲಾಸ್ಮಾ ದಾನ ಮಾಡಿದ ದೇಶದ ಮೊದಲ ಶಾಸಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಬೆಂಗಳೂರಿನ ಕಾರ್ಪೋರೇಷನ್ ಕೇಂದ್ರ ಕಚೇರಿ ಹಿಂಭಾಗದಲ್ಲಿರುವ ಹೆಚ್ಸಿಜಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಶಾಸಕರು ಬುಧವಾರ ಪ್ಲಾಸ್ಮಾ ದಾನ ಮಾಡಿದ್ದಾರೆ. ಇದರೊಂದಿಗೆ ಪ್ಲಾಸ್ಮಾ ದಾನ ಮಾಡಿದ ದೇಶದ ಮೊದಲ ಶಾಸಕ ಎಂಬ ಹೆಗ್ಗಳಿಕೆಗೆ ಡಾ. ರಂಗನಾಥ್ ಪಾತ್ರರಾಗಿದ್ದಾರೆ.
ಪ್ಲಾಸ್ಮಾ ದಾನದ ಸಂದರ್ಭ ಶಾಸಕ ರಂಗನಾಥ್ ಮಾಧ್ಯಮಗಳ ಜೊತೆ ಮಾತನಾಡಿದ್ದು, ಕೊರೊನಾ ಪಾಸಿಟಿವ್ ಆಗಿ ಗುಮಮುಖನಾದ ನಂತರ ಬಹಳ ಸಾರಿ ಯೋಚಿಸುತ್ತಿದ್ದೆ. ದೇಶದ ವೈದ್ಯರು ಹಾಗೂ ವಿಜ್ಞಾನಿಗಳು ಮಾಡುತ್ತಿದ್ದ ಪ್ಲಾಸ್ಮಾ ಥೆರಫಿ ಗಮನ ಸೆಳೆದಿತ್ತು. ನಾನು ಓದಿರುವ ವಿಷಯಗಳಲ್ಲಿ ಇದೂ ಒಂದು. ಕೋವಿಡ್ ರೋಗಿಗಳಿಗೆ ರೋಗ ತಡೆಯಲು ಹೇಗೆ ಸಾಧ್ಯ ಎಂದು ಚಿಂತಿಸಿದ ಸಂದರ್ಭ ಪ್ಲಾಸ್ಮಾ ದಾನದತ್ತ ಆಸಕ್ತಿ ಹೊಂದಿದ್ದೆ. ಕೋವಿಡ್ ನೆಗೆಟಿವ್ ಬಂದ ನಂತರ ನನ್ನ ಶರೀರದ ಇಮ್ಯುನಿಟಿ ಹೇಗಿದೆ ಎಂದು ತಪಾಸಣೆಗೆ ಒಳಗಾದಾಗ ರೋಗನಿರೋಧಕ ಶಕ್ತಿ ಅತ್ಯುತ್ತಮವಾಗಿದೆ ಎಂದು ತಿಳಿದು ಬಂತು. ನನ್ನ ಸಹೋದ್ಯೋಗಿಗಳಲ್ಲಿ ಹಲವರದ್ದು ಕಡಿಮೆ ಇತ್ತು. ಪ್ಲಾಸ್ಮಾ ಚಿಕಿತ್ಸೆಯಿಂದ ಸೋಂಕಿತರು ಗುಣಮುಖರಾಗುತ್ತಾರೆಂದಾಗ ನನ್ನಿಂದ ಕೆಲವರಿಗೆ ಅನುಕೂಲವಾಗಲಿ ಎಂದು ನಾನು ಮತ್ತು ನನ್ನ ಅಣ್ಣ ರಾಮಚಂದ್ರ ಪ್ರಭು ಇಬ್ಬರೂ ಪ್ಲಾಸ್ಮಾ ದಾನ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.