ಬೆಂಗಳೂರು: ಕೊರೊನಾ ವಿರುದ್ಧದ ಸಮರದಲ್ಲಿ ಗೆದ್ದಿರುವ ನಗರ ಸಂಚಾರ ವಿಭಾಗದ ಎಸಿಪಿ ಪ್ಲಾಸ್ಮಾ ದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ.
ಬೆಂಗಳೂರು:ಕೊರೊನಾ ವಿರುದ್ಧ ಗೆದ್ದ ಎಸಿಪಿಯಿಂದ ಪ್ಲಾಸ್ಮಾ ದಾನ
ಕೊರೊನಾ ವಿರುದ್ಧ ಗೆದ್ದ ಬೆಂಗಳೂರಿನ ಎಸಿಪಿಯೊಬ್ಬರು ಪ್ಲಾಸ್ಮಾ ದಾನ ಮಾಡಿ ಎಲ್ಲರಿಗೂ ಮಾದರಿಯಾಗಿದ್ದಾರೆ.
ನಗರ ಈಶಾನ್ಯ ವಿಭಾಗದ ಎಸಿಪಿ ಸತೀಶ್ ಎಂಬುವವರಿಗೆ ಕಳೆದ ತಿಂಗಳು ಕೊರೊನಾ ಸೋಂಕು ತಗುಲಿತ್ತು. ಶ್ರೀರವಿಶಂಕರ್ ಗೂರೂಜಿ ಆಶ್ರಮದಲ್ಲಿ ಕ್ವಾರಂಟೈನ್ಗೆ ಒಳಗಾದ ಬಳಿಕ ಹೋಮ್ ಕ್ವಾರಂಟೈನ್ನಲ್ಲಿದ್ದರು. ಅಂತಿಮವಾಗಿ ಸ್ವ್ಯಾಬ್ ಟೆಸ್ಟ್ಗೆ ಒಳಪಡಿಸಿದಾಗ ವರದಿ ನಗೆಟಿವ್ ಬಂದಿದೆ. ಕೊರೊನಾ ರೋಗಿಗಳಿಗೆ ಪ್ಲಾಸ್ಮಾ ಚಿಕಿತ್ಸೆ ನೀಡಿದರೆ ಗುಣಮುಖರಾಗುವ ಸಾಧ್ಯತೆ ಹೆಚ್ಚಳ ಎಂಬ ಅಂಶ ಅರಿತ ಎಸಿಪಿ ಸತೀಶ್, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಪ್ಲಾಸ್ಮಾ ದಾನ ಮಾಡಿದ್ದಾರೆ.
ಇದುವರೆಗೂ ಐವರು ಮಾತ್ರ ಪ್ಲಾಸ್ಮಾ ದಾನ ಮಾಡಿದ್ದರು. ಮಾನವನ ರಕ್ತದಲ್ಲಿ ಪ್ಲಾಸ್ಮಾ ಕಣಗಳನ್ನು ದಾನ ಮಾಡಿರುವುದರಿಂದ ದಾನ ಮಾಡಿದ ವ್ಯಕ್ತಿಗೆ ಏನು ತೊಂದರೆಯಾಗುವುದಿಲ್ಲ. ಒಂದು ಬಾರಿ 650 ಮಿಲಿ ಗ್ರಾಂ ಪ್ಲಾಸ್ಮಾ ದಾನ ಮಾಡಬಹುದಾಗಿದೆ.