ಬೆಂಗಳೂರು: ನಗರಗಳ ದಿನದ ಅಂಗವಾಗಿ ಬೆಂಗಳೂರು ಸ್ಮಾರ್ಟ್ ಸಿಟಿ ಲಿ. ಯೋಜನೆ ವತಿಯಿಂದ ಪಾಲಿಕೆ ವ್ಯಾಪ್ತಿಯಲ್ಲಿ ಅಭಿವೃದ್ಧಿ ಪಡಿಸುತ್ತಿರುವ ರಾಜಭವನ ರಸ್ತೆಯ ಪಾದಚಾರಿ ಮಾರ್ಗದಲ್ಲಿ ಆಯುಕ್ತರು ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ವಿಶ್ವ ನಗರಗಳ ದಿನದ ಅಂಗವಾಗಿ ಸ್ಮಾರ್ಟ್ ಸಿಟಿ ಯೋಜನೆಯಡಿ ಸಸಿ ನೆಡುವ ಕಾರ್ಯ - World Cities Day
ವಿಶ್ವ ಸಂಸ್ಥೆಯು ಅಕ್ಟೋಬರ್ 31 ಅನ್ನು ವಿಶ್ವ ನಗರಗಳ ದಿನವನ್ನಾಗಿ ಘೋಷಿಸಿದೆ. ಜಾಗತೀಕರಣ, ದೇಶಗಳ ನಡುವಿನ ಸಹಕಾರ ಮತ್ತು ವಿಶ್ವದ ಸುಸ್ಥಿರ ನಗರ ಅಭಿವೃದ್ಧಿಗೆ ಈ ದಿನವನ್ನು ಗುರುತುಪಡಿಸಿದೆ..
ವಿಶ್ವ ಸಂಸ್ಥೆಯು ಅಕ್ಟೋಬರ್ 31 ಅನ್ನು ವಿಶ್ವ ನಗರಗಳ ದಿನವನ್ನಾಗಿ ಘೋಷಿಸಿದೆ. ಜಾಗತೀಕರಣ, ದೇಶಗಳ ನಡುವಿನ ಸಹಕಾರ ಮತ್ತು ವಿಶ್ವದ ಸುಸ್ಥಿರ ನಗರ ಅಭಿವೃದ್ಧಿಗೆ ಈ ದಿನವನ್ನು ಗುರುತುಪಡಿಸಿದೆ. ಒಂದು ವಾರ ಪೂರ್ತಿ "ಟುಲಿಪ್" ಕಾರ್ಯಕ್ರಮದಡಿಯಲ್ಲಿ ವಿಶ್ವ ನಗರಗಳ ದಿನದ ಬಗ್ಗೆ ಮಾಹಿತಿ ನೀಡಲು ಅಭಿಯಾನವನ್ನು ಅಯೋಜಿಸಿದೆ.
ವರ್ಲ್ಡ್ ಎಕನಾಮಿಕ್ ಫೋರಂ ಸಹಯೋಗದೊಂದಿಗೆ ಇಂದು ಬೆಳಗ್ಗೆ ರಾಜಭವನ ಮತ್ತು ಜವಾಹರಲಾಲ್ ನೆಹರು ತಾರಲಯದ ರಸ್ತೆಯಲ್ಲಿ 100 ಸಸಿಗಳನ್ನು ನೆಡಲಾಯಿತು. "ಪ್ಲಾಂಟೇಷನ್" ಎನ್ನುವ ಕಾರ್ಯಕ್ರಮವನ್ನು ಬಿಬಿಎಂಪಿ ಆಯುಕ್ತರಾದ ಮಂಜುನಾಥ್ ಪ್ರಸಾದ್ ಮತ್ತು ಬೆಂಗಳೂರು ಸ್ಮಾರ್ಟ್ ಸಿಟಿಯ ವ್ಯವಸ್ಥಾಪಕ ನಿರ್ದೇಶಕರಾದ ಶ್ಹೆಪ್ಸಿಬಾ ರಾಣಿ ಕೊರ್ಲಪಾಟಿ ಉದ್ಘಾಟಿಸಿದರು.