ಕರ್ನಾಟಕ

karnataka

ETV Bharat / state

ಕೋವಿಡ್ ಚಿಕಿತ್ಸೆಯ ವಿಳಂಬ ತಡೆಯಲು ಪ್ಲಾನ್​​: ಬೆಂಗಳೂರಿಗೆ ಮುಂಬೈ ಮಾದರಿ ಅಳವಡಿಕೆ - ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ

ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ಚಿಕಿತ್ಸೆಯಲ್ಲಿನ ವಿಳಂಬ ತಡೆಯಲು ಬೆಂಗಳೂರಿನಲ್ಲಿ ಮುಂಬೈ ಮಾದರಿ ಅನುಸರಿಸಲು ಕರ್ನಾಟಕ ಸರ್ಕಾರ ನಿರ್ಧರಿಸಿದೆ. ಬೆಂಗಳೂರಿನ 198 ವಾರ್ಡ್‌ಗಳಲ್ಲಿ ತುರ್ತು ಸ್ಪಂದನಾ ಸಮಿತಿ ವ್ಯವಸ್ಥೆಗೆ ಮುಂದಾಗಿದೆ.

Adoption of Mumbai Model for Bangalore
ಬೆಂಗಳೂರಿಗೆ ಮುಂಬೈ ಮಾದರಿ ಅಳವಡಿಕೆ

By

Published : May 9, 2021, 5:29 PM IST

ಬೆಂಗಳೂರು: ರಾಜಧಾನಿಯಲ್ಲಿ ಕೋವಿಡ್​ ಆರ್ಭಟ ಮುಂದುವರಿದಿದೆ. ಈ ಹಿನ್ನೆಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಮುಂಬೈ ಮಾದರಿಯನ್ನು ಅನುಸರಿಸಲು ಸರ್ಕಾರ ಮುಂದಾಗಿದೆ. ಸಮಿತಿಯನ್ನು ಕೂಡಲೇ ಚಾಲ್ತಿಗೆ ತರುವ ಸಂಬಂಧ ಸಚಿವ ಅರವಿಂದ ಲಿಂಬಾವಳಿ ಅಧ್ಯಕ್ಷತೆಯಲ್ಲಿ ವರ್ಚುವಲ್ ಸಭೆ ನಡೆಯಿತು.

ಸಭೆಯಲ್ಲಿ ಮಾತನಾಡಿರುವ ಅವರು, ಬಿಬಿಎಂಪಿಯ ವಾರ್ಡ್ ಮಟ್ಟದಲ್ಲಿ ಕೋವಿಡ್ ನಿರ್ವಹಣೆ ದೃಷ್ಟಿಯಿಂದ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ನಗರದಲ್ಲಿ ಸಾಕಷ್ಟು ಕೋವಿಡ್ ಪ್ರಕರಣಗಳು ಕಂಡುಬರುತ್ತಿದ್ದು, ಮುಂಬೈ ಹಾಗೂ ಚನ್ನೈನಲ್ಲಿ ತೆಗೆದುಕೊಂಡಿರುವ ನಿಯಮಗಳನ್ನು ಅನುಸರಿಸಿ ನಿಯಂತ್ರಣಕ್ಕೆ ತರಲು ಕ್ರಮವಹಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳ ಜೊತೆಗೆ ಸ್ವಯಂಸೇವಕರು, ಎನ್‌ಜಿಒ, ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು ಹಾಗೂ ಸಾರ್ವಜನಿಕರು ಇದರಲ್ಲಿ ಕೈಜೋಡಿಸಿ ಕೋವಿಡ್ ಹೋಗಲಾಡಿಸಬೇಕು. ನಗರದಲ್ಲಿ ಕೋವಿಡ್ ಪಾಸಿಟಿವ್ ಬಂದವರು ನೇರವಾಗಿ ಆಸ್ಪತ್ರೆಯಲ್ಲಿ ಹಾಸಿಗೆ ಬೇಕು ಎನ್ನುತ್ತಿದ್ದಾರೆ. ಆದರೆ ಎಲ್ಲರೂ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯುವ ಅವಶ್ಯಕತೆಯಿಲ್ಲ. ಮನೆಯಲ್ಲಿ ವ್ಯವಸ್ಥೆ ಇಲ್ಲದವರು ಕೋವಿಡ್ ಆರೈಕೆ ಕೇಂದ್ರ ಅಥವಾ ಸ್ಥಿರೀಕರಣ ಕೇಂದ್ರಗಳಲ್ಲಿ ಹೋಗಿ ಆರೈಕೆ ಪಡೆಯಬಹುದು ಎಂದರು.

ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಮಾತನಾಡಿ, ಬಿಬಿಎಂಪಿ ವ್ಯಾಪ್ತಿಯ ವಾರ್ಡ್ ಮಟ್ಟದಲ್ಲಿ ಪರಿಣಾಮಕಾರಿಯಾಗಿ ಕೋವಿಡ್ ನಿಯಂತ್ರಿಸುವ ಸಲುವಾಗಿ ರಾಜ್ಯ ಸರ್ಕಾರ ತುರ್ತು ಸ್ಪಂದನಾ ಸಮಿತಿಯನ್ನು ರಚಿಸಿದೆ. ಈ ಪೈಕಿ ಎಲ್ಲರೂ ಸೇರಿಕೊಂಡು ಸಮರೋಪಾದಿಯಲ್ಲಿ ಕೆಲಸ ಮಾಡಬೇಕು. ಸದ್ಯ ನಗರದಲ್ಲಿ ಪ್ರತಿನಿತ್ಯ ಸುಮಾರು 20,000 ಕೋವಿಡ್ ಪಾಸಿಟಿವ್ ಪ್ರಕರಣಗಳು ಕಂಡುಬರುತ್ತಿವೆ. ಈ ನಿಟ್ಟಿನಲ್ಲಿ ವಲಯಗಳ ವಾರ್ ರೂಮ್​ಗಳನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ವಾರ್ ರೂಮ್​ ವಿಕೇಂದ್ರಿಕರಣ ಮಾಡಿದಾಗ ನಾಗರಿಕರಿಗೆ ತ್ವರಿತವಾಗಿ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು ಸಾಧ್ಯ. ಜೊತೆಗೆ ಪರಿಣಾಮಕಾರಿಯಾಗಿ ಕೋವಿಡ್ ತಡೆಯಲು ಸಾಧ್ಯವಾಗುತ್ತದೆ. ಆದ್ದರಿಂದ ವಾರ್ಡ್​​ ಮಟ್ಟದಲ್ಲಿ ಇದನ್ನು ಕಾರ್ಯಗತ ಮಾಡುವ ನಿಟ್ಟಿನಲ್ಲಿ ಎಲ್ಲರೂ ಕಾರ್ಯಪ್ರವೃತ್ತರಾಗಬೇಕು ಎಂದು ಸೂಚಿಸಿದರು.

ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಎನ್ ಮಂಜುನಾಥ ಪ್ರಸಾದ್ ಮಾತನಾಡಿ, ಎಲ್ಲ ನಾಗರಿಕರಿಗೂ, ಮುಖ್ಯವಾಗಿ ಆರೋಗ್ಯ ವ್ಯವಸ್ಥೆಯ ಸೌಲಭ್ಯ ಅಥವಾ ಮಾಹಿತಿ ಇಲ್ಲದ ದುರ್ಬಲ ಸಮುದಾಯದವರಿಗೆ ವಾರ್ಡ್ ಸಮಿತಿಗಳೊಂದಿಗಿನ ಸಮನ್ವಯದ ಮೂಲಕ ಆರೋಗ್ಯ ಸೇವೆಗಳನ್ನು ಒದಗಿಸುವುದು ಇದರ ಉದ್ದೇಶ ಎಂದು ತಿಳಿಸಿದರು.

ಇದನ್ನು ಓದಿ:ಪ್ರಧಾನಿಗೆ ಪತ್ರ ಬರೆದ ಮಲ್ಲಿಕಾರ್ಜುನ್ ಖರ್ಗೆ.. ಕೋವಿಡ್​ ಎದುರಿಸಲು ನೀಡಿದ್ರು ಈ ಆರು ಸಲಹೆ

ABOUT THE AUTHOR

...view details