ಕರ್ನಾಟಕ

karnataka

ETV Bharat / state

ಒಲಿಂಪಿಕ್ ಕ್ರೀಡೆಗಳಲ್ಲಿ 'ಯೋಗ' ಸೇರಿಸಲು ಚಿಂತನೆ: ಸಿಎಂ ಬೊಮ್ಮಾಯಿ

ಯೋಗದಲ್ಲಿನ ಪ್ರತಿ ಆಸನವೂ ವಿಶಿಷ್ಟವಾದ ಚಿಕಿತ್ಸಾ ವಿಧಾನ ಹೊಂದಿದೆ.- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

CM Basavaraj Bommai
'ಯೋಗ ವಿಶ್ವಕಪ್' ವೇದಿಕೆಯಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ

By

Published : Dec 4, 2022, 9:20 AM IST

ಆನೇಕಲ್(ಬೆಂಗಳೂರು):ಯೋಗವನ್ನು ಒಲಿಂಪಿಕ್ ಕ್ರೀಡೆಗಳಲ್ಲಿ ಸೇರಿಸಲು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ನಿನ್ನೆಯಿಂದ(ಶನಿವಾರ) ಆರಂಭಗೊಂಡಿರುವ ಮೊದಲ 'ಯೋಗ ವಿಶ್ವಕಪ್' ವೇದಿಕೆಯಲ್ಲಿ ಪ್ರಮಖ ಅತಿಥಿಯಾಗಿ ಮಾತನಾಡುತ್ತಾ, ಒಲಿಂಪಿಕ್​​ನಲ್ಲಿ ಯೋಗ ಸೇರ್ಪಡೆ ಕುರಿತು ಪ್ರಸ್ತಾಪಿಸಿದರು.

ಯೋಗ ಇಂದು ವಿಶ್ವಮಟ್ಟದಲ್ಲಿ ಪ್ರಭಾವಿ, ಚೈತನ್ಯದಾಯಕ ಹೊಸ ಹುರುಪು ತಂದೊಡ್ಡುವಲ್ಲಿ ಯಶಸ್ವಿಯಾಗಿದೆ. ಕೆಲ ವ್ಯಾಯಾಮ‌ಗಳು ಸಾಮಾನ್ಯ ಔಷಧಿಗಳಿದ್ದಂತೆ. ಯೋಗದಲ್ಲಿನ ಪ್ರತಿ ಆಸನವೂ ಒಂದು‌ ವಿಶಿಷ್ಟವಾದ ಚಿಕಿತ್ಸಾ ವಿಧಾನ ಹೊಂದಿದೆ.

'ಯೋಗ ವಿಶ್ವಕಪ್' ವೇದಿಕೆಯಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ

ಮನುಷ್ಯನ ದೇಹವು ಒಂದು ವಿಶಿಷ್ಟವಾದ ದೇವರ ಸೃಷ್ಟಿ. ಹೊರ ಪ್ರಪಂಚದಲ್ಲಿ ಹೇಗೆ ಕಾಣ್ತೇವೋ ದೇಹದ ಅಂತರಂಗದಲ್ಲಿ ಇನ್ನೂ ಹೆಚ್ಚಿನದನ್ನು ಹೊಂದಿದ್ದೇವೆ. ಅದರಲ್ಲೂ ಜೀವಶಾಸ್ತ್ರ, ರಸಾಯನಶಾಸ್ತ್ರ ಮತ್ತು ಭೌತಶಾಸ್ತ್ರವಾಗಬಹುದು, ವಿದ್ಯುತ್ ಅಥವಾ ಎಲೆಕ್ಟ್ರಾನಿಕ್ ಆಗಬಹುದು. ಕೃತಕ ಬುದ್ದವಂತಿಕೆ ಎಲ್ಲವೂ ದೇಹದೊಳಗಡೆಯೇ ಇದೆ ಎಂದು ತಿಳಿಸಿದರು.

ಇತರೆ ಜೀವರಾಶಿಗೆ ಮನುಷ್ಯನನ್ನು ಹೋಲಿಸಿದರೆ ಓಟ, ನೋಟ, ಬೌದ್ದಿಕ ಮಟ್ಟ ಆಲೋಚನಾ ಪರಿ ಮನುಷ್ಯನಲ್ಲಿಯೇ ಹೆಚ್ಚಿದೆ. ಮನುಷ್ಯನನ್ನು ಸಹರಾ ಮರುಭೂಮಿಯಲ್ಲಿ 45 ಡಿಗ್ರಿ ಪ್ಲಸ್ ತಾಪಮಾನದಲ್ಲಿ ಬಿಟ್ಟರೂ ಬದುಕುತ್ತಾನೆ. ತಂಪಾದ ಧ್ರುವ ಪ್ರದೇಶದ ಮೈನಸ್ 45 ಡಿಗ್ರಿ ಶೀತದಲ್ಲಿ ಬಿಟ್ಟರೂ ಬದುಕುತ್ತಾನೆ. ಇದೆಲ್ಲಾ ಸಾಧ್ಯವಾಗುತ್ತಿರುವುದು ಮನುಷ್ಯನ ಒಳಗಿನ‌ ಆಂತರ್ಯ ಶಕ್ತಿಗಳಿಂದ‌. ಉದಾಹರಣೆಗೆ ಜ್ವರ ಬಂದರೆ ಏನೂ ಚಿಕಿತ್ಸೆ ಪಡೆಯದೇ ರೋಗ ನಿರೋಧಕ ಶಕ್ತಿಯಿಂದ ತನ್ನಷ್ಟಕ್ಕೆ ತಾನೇ ಗುಣಪಡಿಸಿಕೊಳ್ಳುವ ಸಾಮರ್ಥ್ಯವನ್ನು ಮಾನವ ಹೊಂದಿದ್ದಾನೆ ಎಂದು ಉದಾಹರಿಸಿದರು.

ಇಂತಹ ಶಕ್ತಿಯ ಸಾಮರ್ಥ್ಯವನ್ನು ದ್ವಿಗುಣಗೊಳಿಸುವುದೇ ಯೋಗ. ಅದು ಕೇವಲ‌ ಮಾಂಸ ಖಂಡಗಳನ್ನಷ್ಟೇ ನಿಯಂತ್ರಿಸುವುದಿಲ್ಲ‌. ಬದಲಿಗೆ ಇಡೀ ಮಾನವನ‌ ಹೊರ-ಒಳಗಿನ ಮಟ್ಟವನ್ನು ಹೆಚ್ಚಿಸುತ್ತದೆ. ಮನುಷ್ಯ ಆತನಿಗೆ ಲಭ್ಯವಿರುವ ಶಕ್ತಿಯ ಕೆಲ ಭಾಗವನ್ನಷ್ಟೇ ಉಪಯೋಗಿಸುತ್ತಿದ್ದಾನೆ ಎಂದು ತಿಳಿಸಿದರು.

ಸಾಮಾನ್ಯ ಮನುಷ್ಯ ಶೇ.6 ರಷ್ಟು ಮೆದುಳನ್ನು ಉಪಯೋಗಿಸುತ್ತಾನೆ. ಇನ್ನು ಕೆಲವು ತಜ್ಞರು ಶೇ. 10, ವಿಜ್ಞಾನಿಗಳು ಶೇ.22 ಮಾತ್ರ ಮೆದುಳನ್ನು ಬಳಸುತ್ತಾರೆ. ಉಳಿದ ಶೇ. 80 ರಷ್ಟು ಮೆದುಳಿನ ಸಾಮರ್ಥ್ಯವನ್ನು ಮನುಷ್ಯ ಬಳಸುತ್ತಿಲ್ಲ. ಇಷ್ಟು ಭಾಗದ ಮೆದುಳು ಕೆಲಸ ಮಾಡುವುದಕ್ಕೆ ಯೋಗ ಸಹಕರಿಸುತ್ತದೆ. ಆದ್ದರಿಂದ ಯೋಗ ಒಂದು ವಿಜ್ಞಾನ. ವಿಜ್ಞಾನ ಮತ್ತು ಚೈತನ್ಯ ಶಕ್ತಿಗಳು ಒಂದೇ ನಾಣ್ಯದ ಎರಡು ಮುಖಗಳಿಂದ್ದಂತೆ ಎಂದು ಸಿಎಂ ವಿವರಿಸಿದರು.

ಇದನ್ನೂ ಓದಿ:ಇದೇ ಮೊದಲ ಬಾರಿಗೆ ಯೋಗ ವಿಶ್ವಕಪ್ ಆಯೋಜನೆ

ABOUT THE AUTHOR

...view details