ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ವೇತನ ಶ್ರೇಣಿಗಳನ್ನು ಪರಿಷ್ಕರಿಸುವ ಸಂಬಂಧ ರಚನೆ ಮಾಡಿರುವ ಏಳನೇ ವೇತನ ಆಯೋಗ ಕಾರ್ಯನಿರ್ವಹಿಸಲು ಔಷಧ ನಿಯಂತ್ರಕರ ಹಳೆಯ ಕಚೇರಿ ಜಾಗದಲ್ಲಿ ಸ್ಥಳ ನೀಡಿ ಸರ್ಕಾರ ಆದೇಶಿಸಿದೆ.
ಔಷಧ ನಿಯಂತ್ರಕರ ಹಳೆಯ ಕಚೇರಿ ಕಟ್ಟಡದ ಮೂರನೇ ಮಹಡಿಯಲ್ಲಿ ಲಭ್ಯಲಿರುವ 2,500 ಚದರ ಅಡಿ, ಕಾರಿಡಾರ್ ಹಾಗೂ ಕೊಠಡಿಗಳನ್ನು ತಾತ್ಕಾಲಿಕವಾಗಿ ಕಾರ್ಯನಿರ್ವಹಿಸಲು ವೇತನ ಆಯೋಗಕ್ಕೆ ಒದಗಿಸುವಂತೆ ತಿಳಿಸಲಾಗಿದೆ. ಆಯೋಗ ಜಾರಿಯಲ್ಲಿರುವವರೆಗೆ ಈ ಕಚೇರಿಯನ್ನು ಬಳಸಬಹುದು. ಲೋಕೋಪಯೋಗಿ ಇಲಾಖೆ ನಿಗದಿಪಡಿಸುವ ಬಾಡಿಗೆ ದರವನ್ನು ಪಾವತಿಸಬೇಕು ಎಂದು ಸೂಚಿಸಲಾಗಿದೆ.