ಬೆಂಗಳೂರು:ಮಹಿಳೆಯರಲ್ಲಿನ ಸ್ತನ ಕ್ಯಾನ್ಸರ್ನ ಉಚಿತ ತಪಾಸಣೆಗೆ ಬೆಂಗಳೂರು ರೋಟರಿ ಅತ್ಯಾಧುನಿಕ ಉಪಕರಣಗಳುಳ್ಳ ಪಿಂಕ್ ಎಕ್ಸ್‌ಪ್ರೆಸ್ ಮೊಬೈಲ್ ವಾಹನವನ್ನು ರೋಟರಿ ಅಧ್ಯಕ್ಷ ರಿತೇಶ್ ಗೋಯಲ್ ಉದ್ಘಾಟಿಸಿದರು.
ಸ್ತನ ಕ್ಯಾನ್ಸರ್ ಜಾಗೃತಿಗೆ ಪಿಂಕ್ ಎಕ್ಸ್‌ಪ್ರೆಸ್ ಸಂಚಾರಿ ಬಸ್ ಸೇವೆ ಆರಂಭ.. - undefined
ಶಿಕ್ಷಣ, ಪರಿಸರ ಮತ್ತು ವೃತ್ತಿಪರ ಕ್ಷೇತ್ರಗಳನ್ನು ಒಳಗೊಂಡ ಅನೇಕ ಸಮುದಾಯ ಸೇವಾ ಆಧಾರಿತ ಕಾರ್ಯಗಳಲ್ಲಿ ರೋಟರಿ ತೊಡಗಿಕೊಂಡಿದೆ. ಇಂದು ರೋಟರಿ ಸಂಸ್ಥೆ ಮಹಿಳೆಯರ ಆರೋಗ್ಯ ರಕ್ಷಣೆ ದೃಷ್ಟಿಯಿಂದ ವಾಹನವನ್ನು ಒದಗಿಸಿದೆ.
ಈ ಸಂದರ್ಭದಲ್ಲಿ ಮಾತನಾಡಿದ ರಿತೇಶ್ ಗೋಯಲ್, ಶಿಕ್ಷಣ, ಪರಿಸರ ಮತ್ತು ವೃತ್ತಿಪರ ಕ್ಷೇತ್ರಗಳನ್ನು ಒಳಗೊಂಡ ಅನೇಕ ಸಮುದಾಯ ಸೇವಾ ಆಧಾರಿತ ಕಾರ್ಯಗಳಲ್ಲಿ ರೋಟರಿ ತೊಡಗಿಕೊಂಡಿದೆ. ಇಂದು ರೋಟರಿ ಸಂಸ್ಥೆ ಮಹಿಳೆಯರ ಆರೋಗ್ಯ ರಕ್ಷಣೆ ದೃಷ್ಟಿಯಿಂದ ವಾಹನವನ್ನು ನೀಡುತ್ತಿದೆ ಎಂದರು.
ಇತ್ತೀಚಿನ ದಿನಗಳಲ್ಲಿ ದೇಶದ ಮಹಿಳೆಯರನ್ನು ಕಾಡುತ್ತಿರುವ ದೊಡ್ಡ ಸಮಸ್ಯೆ ಸ್ತನ ಕ್ಯಾನ್ಸರ್. ಅರಿವಿನ ಕೊರತೆಯೇ ಇದಕ್ಕೆ ಕಾರಣ. ಪಿಂಕ್ ಎಕ್ಸ್‌ಪ್ರೆಸ್‌ನಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ವಾಹನವನ್ನು ಸಿದ್ಧಪಡಿಸಲಾಗಿದೆ. ಸ್ಕ್ರೀನಿಂಗ್ ಥರ್ಮಲ್ ಇಮೇಜಿಂಗ್‌ನ ವ್ಯವಸ್ಥೆಯನ್ನು ನಾವು ಆಧರಿಸಿದ್ದೇವೆ. ಇದು ಸ್ಪರ್ಶ ರಹಿತ, ನೋವು ರಹಿತ ವಿನೂತನ ಪ್ರಕ್ರಿಯೆಯಾಗಿದೆ. ಹೆಚ್ಚಿನ ಮಹಿಳೆಯರು ಈ ಪರೀಕ್ಷೆಗೆ ಒಳಗಾಗಲು ಪ್ರೋತ್ಸಾಹಿಸುವ ಮೂಲಕ ಸಾಮಾಜಿಕ ಜಾಗೃತಿ ಮೂಡಿಸುವ ಉದ್ದೇಶ ನಮ್ಮದು ಎಂದು ಅವರು ತಿಳಿಸಿದರು.