ಬೆಂಗಳೂರು: ಬಿಬಿಎಂಪಿಯ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷದ ಆಡಳಿತ ಆರಂಭಿಸಿದ್ದ ಪಿಂಕ್ ಬೇಬಿ ಯೋಜನೆ, ಮಹಾಲಕ್ಷ್ಮೀ ಯೋಜನೆಗಳನ್ನು ಈ ಬಾರಿ ಬಜೆಟ್ನಲ್ಲಿ ಮುಂದುವರಿಸದಿರಲು ಪಾಲಿಕೆ ಚಿಂತನೆ ನಡೆಸಿದೆ ಎನ್ನಲಾಗಿದೆ.
ಹೊಸ ವರ್ಷದ ಮೊದಲ ದಿನ ಜನಿಸುವ ಹೆಣ್ಣು ಮಗುವಿನ ಹೆಸರಿನಲ್ಲಿ ಐದು ಲಕ್ಷ ಬಾಂಡ್ ಇಡುವ ಪಿಂಕ್ ಬೇಬಿ ಯೋಜನೆ ಜಾರಿಯಲ್ಲಿತ್ತು. ಬಳಿಕ ಇಡೀ ವರ್ಷದಲ್ಲಿ ಪಾಲಿಕೆ ಆಸ್ಪತ್ರೆಯಲ್ಲಿ ಜನಿಸುವ ಎಲ್ಲಾ ಹೆಣ್ಣು ಮಕ್ಕಳಿಗೆ ಒಂದು ಲಕ್ಷ ರೂ ಬಾಂಡ್ ವಿತರಿಸುವ ಮಹಾಲಕ್ಷ್ಮೀ ಯೋಜನೆಯನ್ನು 2019-20 ನೇ ಸಾಲಿನಲ್ಲಿ ಜಾರಿಗೆ ತರಲು 60 ಕೋಟಿ ರೂ ಮೀಸಲಿಡಲಾಗಿತ್ತು. ಆದರೆ ಇದೇ ಯೋಜನೆಯನ್ನು 2020-21 ನೇ ಸಾಲಿನಲ್ಲಿ ಮುಂದುವರಿಸಬೇಕೋ ಬೇಡವೋ ಎಂಬ ಬಗ್ಗೆ ಬಿಬಿಎಂಪಿಯಲ್ಲಿ ಚರ್ಚೆ ನಡೆದಿದೆ.