ಕರ್ನಾಟಕ

karnataka

ETV Bharat / state

ಬ್ರಾಂಡ್ ಬೆಂಗಳೂರು ಅಡಿ ಫ್ಲೈಓವರ್​ನ ಪಿಲ್ಲರ್​ಗಳಿಗೆ ಸಿಗುತ್ತಿದೆ ಮೇಕ್ ಓವರ್ - ಸಿಲಿಕಾನ್ ಸಿಟಿಯನ್ನು ಸುಂದರಗೊಳಿಸುವ ಪ್ರಯತ್ನ

ಬ್ರಾಂಡ್ ಬೆಂಗಳೂರಿನ ಅಡಿ ಫ್ಲೈಓವರ್​ನ ಪಿಲ್ಲರ್​ಗಳಿಗೆ ಕ್ರಿಕೆಟಿಗರ ಚಿತ್ರ ಬಿಡಿಸುವುದು ಸೇರಿದಂತೆ ನಗರವನ್ನು ಸುಂದರಗೊಳಿಸಲಾಗುತ್ತಿದೆ.

Pillar painted by cricketers pictures  cricketers pictures under brand Bengaluru  brand Bengaluru  ಬ್ರಾಂಡ್ ಬೆಂಗಳೂರಿನ ಅಡಿ  ಫ್ಲೈಓವರ್​ನ ಪಿಲ್ಲರ್​ಗಳಿಗೆ ಸಿಗುತ್ತಿದೆ ಮೇಕ್ ಓವರ್  ಫ್ಲೈಓವರ್​ನ ಪಿಲ್ಲರ್​ಗಳಿಗೆ ಕ್ರಿಕೆಟಿಗರ ಚಿತ್ರ  ಸಿಲಿಕಾನ್ ಸಿಟಿಯನ್ನು ಸುಂದರಗೊಳಿಸುವ ಪ್ರಯತ್ನ  ಶಾಂತಿನಗರದ ಡಬ್ಬಲ್ ರಸ್ತೆ
ಬ್ರಾಂಡ್ ಬೆಂಗಳೂರಿನ ಅಡಿಯಲ್ಲಿ ಫ್ಲೈಓವರ್​ನ ಪಿಲ್ಲರ್​ಗಳಿಗೆ ಸಿಗುತ್ತಿದೆ ಮೇಕ್ ಓವರ್

By ETV Bharat Karnataka Team

Published : Dec 9, 2023, 9:37 AM IST

Updated : Dec 9, 2023, 11:33 AM IST

ಬೆಂಗಳೂರು: ರಾಜ್ಯ ಸರ್ಕಾರ ಮತ್ತು ಪಾಲಿಕೆಯಿಂದ ಬ್ಯಾಂಡ್ - ಬೆಂಗಳೂರಿನ ಅಡಿ ಸಿಲಿಕಾನ್ ಸಿಟಿಯನ್ನು ಸುಂದರಗೊಳಿಸುವ ಪ್ರಯತ್ನ ನಡೆಯುತ್ತಿದೆ. ಇತ್ತೀಚೆಗೆ ಬೆಂಗಳೂರು ಹಬ್ಬವನ್ನು ಸಹ ಆಚರಿಸಿ ನಗರದ ಹಲವು ರಸ್ತೆಗಳು, ಜಂಕ್ಷನ್ ಕಟ್ಟಡಗಳನ್ನು ಸುಂದರಗೊಳಿಸಿ ವಿದ್ಯುತ್ ಅಲಂಕಾರದಿಂದ ಕಂಗೊಳಿಸುವಂತೆ ಮಾಡಲಾಗಿತ್ತು.

ಫ್ಲೈಓವರ್​ನ ಪಿಲ್ಲರ್​ಗಳಿಗೆ ಕ್ರಿಕೆಟಿಗರ ಚಿತ್ರ

ಫ್ಲೈ ಓವರ್ ಪಿಲ್ಲರ್​ಗಳ ಕೆಳಗೆ ಸಹ , ಕುಳಿತುಕೊಳ್ಳಲು ಆಸನಗಳು ಮತ್ತು ಮಕ್ಕಳಿಗೆ ಆಟವಾಡಲು ಅನುವು ಮಾಡಿಕೊಡಲಾಗಿದೆ. ಪಿಲ್ಲರ್​ಗಳಿಗೆ ಹಲವು ಚಿತ್ರಗಳನ್ನು ಸಹ ಬಿಡಿಸಿ ಸ್ಥಳವನ್ನು ಸುಂದರಗೊಳಿಸುವ ಕಾರ್ಯವನ್ನು ಸಹ ಮಾಡಲಾಗ್ತಿದೆ.

ಫ್ಲೈಓವರ್​ನ ಪಿಲ್ಲರ್​ಗಳಿಗೆ ಕ್ರಿಕೆಟಿಗರ ಚಿತ್ರ

ಮುಖ್ಯವಾಗಿ ಶಾಂತಿನಗರದ ಡಬ್ಬಲ್ ರಸ್ತೆಯ ಜಂಕ್ಷನ್ ಕ್ರೀಡಾ ಜನಾಕರ್ಷಣೆಯ ಕೇಂದ್ರವಾಗಿಸಿರುವುದು ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗುತ್ತಿದೆ. ಕನ್ನಡಿಗರ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕ್ರಿಕೆಟ್ ಪ್ರತಿನಿಧಿಸಿರುವವರಲ್ಲಿ ಪ್ರಾಮುಖ್ಯತೆ ಪಡೆದ 10 ಕ್ರಿಕೆಟ್ ಆಟಗಾರರ ಚಿತ್ರಗಳನ್ನು ಪ್ರೈಓವರ್ ಪಿಲ್ಲರ್‌ಗಳ ಮೇಲೆ ಬಿಡಿಸಲಾಗಿದೆ.

ಫ್ಲೈಓವರ್​ನ ಪಿಲ್ಲರ್​ಗಳಿಗೆ ಕ್ರಿಕೆಟಿಗರ ಚಿತ್ರ

ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕನಸಿನ ಯೋಜನೆ ಬೆಂಗಳೂರು ಬ್ಯಾಂಡ್ ಬೆಂಗಳೂರನ್ನು ಸುಂದರವನ್ನಾಗಿ ಮಾಡಲು ಮುಂದಾಗಿದ್ದು, ಸಾರ್ವಜನಿಕರಿಂದ ಬಂದ ಸಲಹೆಗಳನ್ನು ಅನುಷ್ಠಾನ ಮಾಡುತ್ತಿದ್ದಾರೆ. ಪ್ರಾಯೋಗಿಕವಾಗಿ ಶಾಂತಿನಗರದ ಡಬ್ಬಲ್ ರಸ್ತೆಯ ಪಿಲ್ಲರ್​ಗಳ ನಡುವೆ ಕ್ರಿಕೆಟ್​ನಲ್ಲಿ ಸಾಧನೆ ಮಾಡಿದವರ ಚಿತ್ರಗಳನ್ನು ಬಿಡಿಸಿದ್ದು, ಎಲ್ಲರನ್ನು ಆಕರ್ಷಿಸುತ್ತಿದೆ.

ಫ್ಲೈಓವರ್​ನ ಪಿಲ್ಲರ್​ಗಳಿಗೆ ಕ್ರಿಕೆಟಿಗರ ಚಿತ್ರ

ಸಿಲಿಕಾನ್ ಸಿಟಿಯ ಹೃದಯಭಾಗದಲ್ಲಿ ಪ್ರಮುಖ ಕ್ರೀಡಾಂಗಣಗಳಾದ ಚಿನ್ನಸ್ವಾಮಿ ಕ್ರೀಡಾಂಗಣ. ಚಿನ್ನಸ್ವಾಮಿ ಕ್ರೀಡಾಂಗಣ, ಕಂಠೀರವ ಕ್ರೀಡಾಂಗಣ, ಹಾಕಿ ಕ್ರೀಡಾಂಗಣ, ಟೇಬಲ್ ಕರ್ನಾಟಕ ಲಾನ್ ಟೆನ್ನಿಸ್​ ಅಸೋಸಿಯೇಷನ್ ಸೇರಿದಂತೆ ಹಲವು ಕ್ರೀಡಾ ಚಟುವಟಕೆಗಳು ಈ ಮೇಲ್ಸೇತುವೆಯಿಂದ 3 4 ಕಿ.ಮೀ. ಅಂತರದಲ್ಲಿವೆ. ಜೊತೆಗೆ ಈ ಜಂಕ್ಷನ್ ಸುತ್ತ ಮುತ್ತಲಿರುವ ಸಾಕಷ್ಟು ಶಾಲಾ - ಕಾಲೇಜುಗಳು ಆನೇಕ ಕ್ರೀಡಾಪಟುಗಳನ್ನು ಕ್ರೀಡಾ ಕ್ಷೇತ್ರಕ್ಕೆ ಕೊಡುಗೆಯಾಗಿ ನೀಡಿದೆ. ಹೀಗಾಗಿ ರಾಜ್ಯದ ಹೆಸರಾಂತ ಕ್ರಿಕೆಟ್ ಪಟುಗಳನ್ನು ಚಿತ್ರಿಸಲಾಗಿರುವ ಪ್ರದೇಶವನ್ನು ಕ್ರೀಡಾ ಜಂಕ್ಷನ್ ಎಂದೂ ಸಹ ಕರೆಯಲಾಗುತ್ತಿದೆ.

ಫ್ಲೈಓವರ್​ನ ಪಿಲ್ಲರ್​ಗಳಿಗೆ ಕ್ರಿಕೆಟಿಗರ ಚಿತ್ರ

ಸಾಮಾನ್ಯವಾಗಿ ಮೇಲ್ಸೇತುವೆ ಕೆಳಭಾಗದಲ್ಲಿ ಕಸ, ಗಲೀಜು ಮತ್ತು ಹಲವು ಪೋಸ್ಟರ್ ಅಂಟಿಸಿರುವುದು ಸೇರಿದಂತೆ ಸಾರ್ವಜನಿಕರು ಕಾಲಿಡಲು ಮುಜುಗರ ಪಡುವಂತೆ ಇರುತ್ತಿತ್ತು. ಅಲ್ಲಿ ಕಸದ ರಾಶಿಯನ್ನು ಡಂಪ್ ಮಾಡಲಾಗುತ್ತಿತ್ತು ಹಾಗೂ ಪಿಲ್ಲರ್‌ಗಳ ಮೇಲೆ ಪೋಸ್ಟರ್​ಗಳನ್ನು ಅಂಟಿಸಿ ನಗರದ ಸೌಂದರ್ಯಕ್ಕೆ ಕಳಂಕ ತರಲಾಗುತ್ತಿತ್ತು. ರಸ್ತೆ ಬದಿಗಳಲ್ಲಿನ ಪಿಲ್ಲರ್​ಗಳು ಆಕರ್ಷಕವಾಗಿ ಕಾಣುವಂತೆ ಮಾಡಬೇಕು ಎನ್ನುವು ಕೂಗು ವರ್ಷಗಳಿಂದ ಕೇಳಿ ಬರುತ್ತಿತ್ತು. ಸದ್ಯ ಇಲ್ಲಿ ಐದು ಪಿಲ್ಲರ್‌ಗಳಲ್ಲಿ ಕ್ರಿಕೆಟ್ ಕ್ಷೇತ್ರದ ಸಾಧಕರನ್ನು ಚಿತ್ರಿಸಲಾಗಿದೆ. ಇನ್ನೂ 12 ಪಿಲ್ಲರ್‌ಗಳು ಬಾಕಿಯಿದ್ದು, ಅವುಗಳಲ್ಲಿ ವಿವಿಧ ಕ್ರೀಡೆಗಳಲ್ಲಿ ರಾಜ್ಯವನ್ನು ಪ್ರತಿನಿಧಿಸಿದ ಕ್ರೀಡಾ ಸಾಧಕರನ್ನು ಚಿತ್ರಿಸುವ ಗುರಿ ಹೊಂದಲಾಗಿದೆ.

ಬೆಂಗಳೂರಿನ ಬಹುತೇಕ ಮೇಲ್ಸೇತುವೆಗಳ ಕೆಳಗಿನ ಪರಿಸ್ಥಿತಿ ಏನು ಎಂಬುದು ರಾಜಧಾನಿಯ ಜನರಿಗೆ ಗೊತ್ತಿದೆ. ಆದರೆ, ಬ್ಯಾಂಡ್ ಬೆಂಗಳೂರಿನ ಅಡಿ ನಗರವನ್ನು ಸುಂದರವಾಗಿ ಮಾಡಲು ಸರ್ಕಾರ ಯೋಜನೆ ಮಾಡಿದೆ. ಪಿಲ್ಲರ್​ಗಳ ನಡುವೆ ಸಾಧನೆ ಮಾಡಿದವರ ಚಿತ್ರ ಬಿಡಿಸಿರುವುದು ಕ್ರೀಡಾ ಅಭಿಮಾನಿಗಳಿಗೆ ಸ್ಫೂರ್ತಿಯನ್ನು ನೀಡಲಿದೆ ಎಂದು ಪಾಲಿಕೆಯ ಅಧಿಕಾರಿಗಳು ಮತ್ತು ಹಲವು ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳು ತಿಳಿಸಿದ್ದಾರೆ.

ಓದಿ:ತವರಿನಲ್ಲಿ ಮುಗ್ಗರಿಸಿದ ಬೆಂಗಳೂರು ಬುಲ್ಸ್: ಡೆಲ್ಲಿಗೆ ಮೊದಲ ಜಯ

Last Updated : Dec 9, 2023, 11:33 AM IST

ABOUT THE AUTHOR

...view details