ಬೆಂಗಳೂರು:ಕೊರೊನಾ ಭೀತಿಯಲ್ಲಿ ನ್ಯಾಯಾಲಯಗಳಿಗೆ ರಜೆ ಘೋಷಿಸಿರುವ ಪರಿಣಾಮ ಸಾಕಷ್ಟು ವಕೀಲರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ವಕೀಲರಿಗೆ ತಲಾ 50 ಸಾವಿರ ರುಪಾಯಿ ನೆರವು ನೀಡುವಂತೆ ರಾಜ್ಯ ವಕೀಲರ ಪರಿಷತ್ತಿಗೆ ನಿರ್ದೇಶಿಸಬೇಕು ಎಂದು ಕೋರಿ ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.
ಹೈಕೋರ್ಟ್ನ ಹಿರಿಯ ವಕೀಲ ಎಚ್.ಸಿ. ಶಿವರಾಮ ಅವರು ಈ ಪಿಐಎಲ್ ಸಲ್ಲಿಸಿದ್ದಾರೆ. ಅರ್ಜಿಯಲ್ಲಿ, ರಾಜ್ಯ ವಕೀಲರ ಪರಿಷತ್ನಿಂದ ಸನ್ನದು ಪಡೆದಿರುವ ವಕೀಲರು ಕಾಲಕಾಲಕ್ಕೆ ಕಲ್ಯಾಣ ನಿಧಿಗೆ ಹಣ ಪಾವತಿ ಮಾಡುತ್ತಿದ್ದಾರೆ. ಹೀಗೆ ಸಲ್ಲಿಕೆಯಾದ ಕೋಟ್ಯಂತರ ರೂಪಾಯಿ ಹಣವನ್ನು ವಿವಿಧ ಬ್ಯಾಂಕುಗಳಲ್ಲಿ ನಿಶ್ಚಿತ ಠೇವಣಿ ಇರಿಸಲಾಗಿದೆ. ಈ ಮೊತ್ತದಲ್ಲಿ ತಲಾ 50 ಸಾವಿರ ರೂಪಾಯಿ ಹಣವನ್ನು ಯಾರಿಗೆ ಅಗತ್ಯವಿದೆಯೊ ಅಂತಹ ವಕೀಲರಿಗೆ ಎಕ್ಸ್ಗ್ರೇಷಿಯಾ ಮೊತ್ತ ಎಂದು ಪರಿಗಣಿಸಿ ತಕ್ಷಣವೇ ಬಿಡುಗಡೆ ಮಾಡಲು ರಾಜ್ಯ ವಕೀಲರ ಪರಿಷತ್ಗೆ ನಿರ್ದೇಶಿಸಬೇಕು.