ಬೆಂಗಳೂರು: ನಗರದಲ್ಲಿ ಹಲವು ಖಾಸಗಿ ಆಸ್ಪತ್ರೆಗಳಿವೆ. ಆದರೆ ಆ್ಯಂಬ್ಯುಲೆನ್ಸ್ ನಿಲುಗಡೆಗೆ ಸೂಕ್ತ ಸ್ಥಳಾವಕಾಶ ಇಲ್ಲ. ಹೀಗಾಗಿ ಆ್ಯಂಬ್ಯುಲೆನ್ಸ್ಗೆ ಪ್ರತ್ಯೇಕ ನಿಲುಗಡೆ ಸ್ಥಳ ಕಲ್ಪಿಸಲು ಪ್ರಶಾಂತ್ ರಾವ್ ಎಂಬುವರು ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.
ಆ್ಯಂಬ್ಯುಲೆನ್ಸ್ ನಿಲುಗಡೆಗೆ ಸ್ಥಳ ಕಲ್ಪಿಸುವಂತೆ ಕೋರಿ ಪಿಐಎಲ್: ಸರ್ಕಾರದ ಪ್ರತಿಕ್ರಿಯೆ ಕೇಳಿದ ಹೈಕೋರ್ಟ್ - ಸರ್ಕಾರದ ಪ್ರತಿಕ್ರಿಯೆ ಕೇಳಿದ ಕೋರ್ಟ್
ಆ್ಯಂಬ್ಯುಲೆನ್ಸ್ ಪಾರ್ಕಿಂಗ್ ಜಾಗದ ಕುರಿತು ಸಲ್ಲಿಸಿದ್ದ ಪಿಐಎಲ್ ವಿಚಾರಣೆ ನಡೆಸಿದ ಹೈಕೋರ್ಟ್, ಸರ್ಕಾರದ ಪ್ರತಿಕ್ರಿಯೆ ಕೇಳಿದೆ.
ಆ್ಯಂಬ್ಯುಲೆನ್ಸ್ ನಿಲುಗಡೆಗೆ ಸ್ಥಳ ಕಲ್ಪಿಸುವಂತೆ ಕೋರಿ ಪಿಐಎಲ್
ಓದಿ : ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣ: ವಿರೇನ್ ಖನ್ನಾಗೆ ಷರತ್ತುಬದ್ಧ ಜಾಮೀನು
ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಸರ್ಕಾರ, ಬಿಬಿಎಂಪಿ, ಬಿಡಿಎಗೆ ನೋಟಿಸ್ ನೀಡಿ ಆ್ಯಂಬ್ಯುಲೆನ್ಸ್ಗೆ ಪ್ರತ್ಯೇಕ ನಿಲುಗಡೆ ಸ್ಥಳ ಕಲ್ಪಿಸಲು ಸಾಧ್ಯವೇ ಎಂದು ಫೆ. 8ರೊಳಗೆ ನ್ಯಾಯಾಲಯಕ್ಕೆ ಪ್ರತಿಕ್ರಿಯೆ ನೀಡಲು ಸೂಚಿಸಿದೆ.