ಕರ್ನಾಟಕ

karnataka

ETV Bharat / state

ಆನ್​ಲೈನ್​​ ಬೆಟ್ಟಿಂಗ್ ನಿಷೇಧ ಕೋರಿ ಪಿಐಎಲ್​​: ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್! - A public interest petition seeking to ban online betting

ರಾಜ್ಯದಲ್ಲಿ ಸೂಕ್ತ ನಿಯಮಾವಳಿ ರೂಪಿಸುವ ತನಕ ಎಲ್ಲಾ ರೀತಿಯ ಆನ್​ಲೈನ್​ ಬೆಟ್ಟಿಂಗ್ ನಿಷೇಧಿಸುವಂತೆ ಕೋರಿ ದಾವಣಗೆರೆ ನಿವಾಸಿ ಡಿ. ಶಾರದಾ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ, ಜನವರಿ 12ರೊಳಗೆ ಪ್ರತಿಕ್ರಿಯೆ ನೀಡುವಂತೆ ಸರ್ಕಾರಕ್ಕೆ ನಿರ್ದೇಶಿಸಿದೆ.

High Court
ಹೈಕೋರ್ಟ್

By

Published : Dec 4, 2020, 9:47 PM IST

ಬೆಂಗಳೂರು:ಆನ್​ಲೈನ್​ ಬೆಟ್ಟಿಂಗ್​ ನಿಷೇಧ ಕೋರಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿರುವ ಹೈಕೋರ್ಟ್ ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.

ರಾಜ್ಯದಲ್ಲಿ ಸೂಕ್ತ ನಿಯಮಾವಳಿ ರೂಪಿಸುವ ತನಕ ಎಲ್ಲಾ ರೀತಿಯ ಆನ್​ಲೈನ್​ ಬೆಟ್ಟಿಂಗ್ ನಿಷೇಧಿಸುವಂತೆ ಕೋರಿ ದಾವಣಗೆರೆ ನಿವಾಸಿ ಡಿ. ಶಾರದಾ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ, ಜನವರಿ 12ರೊಳಗೆ ಪ್ರತಿಕ್ರಿಯೆ ನೀಡುವಂತೆ ಸರ್ಕಾರಕ್ಕೆ ನಿರ್ದೇಶಿಸಿದೆ.

ಇದನ್ನೂ ಓದಿ:ಮರಾಠ ನಿಗಮದ ವಿರುದ್ಧ ಕನ್ನಡಿಗರ ಕಿಚ್ಚು: ಬಂದ್ ಯಶಸ್ವಿಯಾಗುತ್ತಾ? ಪ್ರತಿಭಟನೆಗೆ ಮಾತ್ರವೇ ಸೀಮಿತವಾಗುತ್ತಾ?

ಅರ್ಜಿದಾರರು, ಆನ್​ಲೈನ್​ ಜೂಜು ನಿಯಂತ್ರಿಸಲು ಸರ್ಕಾರ ಯಾವುದೇ ನಿಯಮ ಅಥವಾ ಕಾನೂನು ರೂಪಿಸಿಲ್ಲ. ಇದರಿಂದಾಗಿ ಯುವಕರು ಮೋಸ ಹೋಗುತ್ತಿದ್ದಾರೆ. ಇದನ್ನು ನಿಯಂತ್ರಿಸುವ ವಿಧಾನಗಳನ್ನು ಅಧ್ಯಯನ ನಡೆಸಲು ಗುಜರಾತ್ ಹಾಗೂ ತಮಿಳುನಾಡು ಹೈಕೋಟ್​ಗಳು ತಮ್ಮ ರಾಜ್ಯ ಸರ್ಕಾರಗಳಿಗೆ ನಿರ್ದೇಶಿಸಿವೆ.

ಆನ್​ಲೈನ್​ ಜೂಜು ಅದೃಷ್ಟದ ಆಟವೇ ಅಥವಾ ಕೌಶಲ್ಯ ಒಳಗೊಂಡಿರುವುದೇ ಎಂಬುದರ ಬಗ್ಗೆ ಮೇಲ್ವಿಚಾರಣೆ ನಡೆಸಲು ಯಾವುದೇ ಕಾರ್ಯವಿಧಾನ ಇಲ್ಲ. ಈ ಕುರಿತು ನಿಯಮ ರೂಪಿಸಲು ಸರ್ಕಾರವೂ ಮುಂದಾಗಿಲ್ಲ. ಆದ್ದರಿಂದ ಆನ್​ಲೈನ್​ ಜೂಜು ನಿಷೇಧಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.

ABOUT THE AUTHOR

...view details