ಕರ್ನಾಟಕ

karnataka

ETV Bharat / state

ಪಾರಿವಾಳ ಹಿಡಿಯಲು ಹೋಗಿ ಹೈಟೆನ್ಶನ್ ವೈರ್‌ ಸ್ಪರ್ಶ; ಇಬ್ಬರು ಬಾಲಕರು ಗಂಭೀರ - ETv Bharat Kannada news

ಬೆಂಗಳೂರಿನಲ್ಲಿ ಪಾರಿವಾಳ ಹಿಡಿಯಲು ಹೋಗಿದ್ದ ಬಾಲಕರಿಗೆ ಹೈ ಟೆನ್ಷನ್ ವೈರ್‌ ತಗುಲಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ.

Pigeon that brought the life of the boys
ಬಾಲಕರ ಜೀವಕ್ಕೆ ಕುತ್ತು ತಂದ ಪರಿವಾಳ

By

Published : Dec 2, 2022, 7:29 AM IST

ಬೆಂಗಳೂರು:ಪಾರಿವಾಳ ಸಾಕುವುದು ಇತ್ತೀಚಿಗಿನ ದಿನಗಳಲ್ಲಿ ಒಂದು ರೀತಿಯ ಕ್ರೇಜ್​ ಆಗಿದೆ. ಇದೇ ಕ್ರೇಜ್ ಇಬ್ಬರು ಬಾಲಕರ ಜೀವಕ್ಕೆ ಕುತ್ತು ತಂದಿದೆ.​ ಪಾರಿವಾಳ ಹಿಡಿಯಲು ಹೋಗಿದ್ದ ಬಾಲಕರಿಗೆ ಹೈ ಟೆನ್ಷನ್ ವೈರ್ ತಗುಲಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ.

ನಂದಿನಿ ಲೇಔಟ್​ನ ವಿಜಯನಂದ ನಗರದಲ್ಲಿ ಗುರುವಾರ ಮಧ್ಯಾಹ್ನ 11 ವರ್ಷದ ಬಾಲಕರಿಬ್ಬರು ಮನೆಯ ಮೇಲೆ ಏರಿ ಪಾರಿವಾಳ ಹಿಡಿಯಲು ಮುಂದಾಗಿದ್ದರು.‌ ಈ ಸಂದರ್ಭದಲ್ಲಿ ಕಬ್ಬಿಣದ ರಾಡ್‌ನಿಂದ ಹಕ್ಕಿಯನ್ನು ಹಾರಿಸುವಾಗ ಹೈ ಟೆನ್ಷನ್ ವೈರ್‌ ತಗುಲಿ ಗಾಯಗೊಂಡಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ಬಾಲಕರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂಓದಿ:ಪಾರಿವಾಳ ಹಿಡಿಯಲು ಹೋಗಿ 4ನೇ ಮಹಡಿಯಿಂದ ಆಯತಪ್ಪಿ ಬಿದ್ದು ಯುವಕ ಸಾವು

ABOUT THE AUTHOR

...view details