ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿ ಭೌತಿಕ ತರಗತಿ ಆರಂಭಿಸಿ ಯಶಸ್ಸು ಕಾಣ್ತಾ ಸರ್ಕಾರ? 2ನೇ ದಿನ ದುಪ್ಪಟ್ಟಾದ ವಿದ್ಯಾರ್ಥಿಗಳ ಹಾಜರು ಸಂಖ್ಯೆ.! - Physical Classes started in Karantaka

ಮೊದಲ ದಿನಕ್ಕೆ ತಕ್ಕಮಟ್ಟಿಗೆ ವಿದ್ಯಾರ್ಥಿಗಳು ಆಗಮಿಸಿದರು. ಆದರೆ, ಎರಡನೇ ದಿನಕ್ಕೆ ಆ ಸಂಖ್ಯೆ ದುಪ್ಪಟ್ಟ ಆಗಿದೆ. ಈ ಮೂಲಕ ನಿಧಾನಗತಿಯಲ್ಲಿ ಶಾಲೆಗೆ ಬರುವವರ ಸಂಖ್ಯೆ ಹೆಚ್ಚಾಗ್ತಿದೆ. ಇದರಿಂದ ಕೊರೊನಾ ಮಧ್ಯೆಯು ಶಾಲಾ - ಕಾಲೇಜು ಆರಂಭಿಸಿ ಯಶಸ್ಸು ಕಾಣುವ ದಾರಿ ಹಿಡಿದಿದೆ.‌‌

Physical Classes started in Karantaka
ಎರಡನೇ ದಿನ ದುಪ್ಪಟ್ಟಾದ ವಿದ್ಯಾರ್ಥಿಗಳ ಹಾಜರು ಸಂಖ್ಯೆ.

By

Published : Aug 24, 2021, 9:29 PM IST

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಎರಡನೇ ಅಲೆಯ ಕಾರಣಕ್ಕಾಗಿ ಶಾಲಾ-ಕಾಲೇಜು ಆರಂಭವಾಗುತ್ತಾ/ಇಲ್ಲವಾ ಎಂಬ ಚರ್ಚೆಗಳು ನಡೆದಿದ್ದವು. ಇವೆಲ್ಲದರ ಮಧ್ಯೆ ಶಿಕ್ಷಣ ಇಲಾಖೆ ಹಾಗೂ ಸರ್ಕಾರ ದೃಢ ನಿರ್ಧಾರ ಮಾಡಿ, ಯಶಸ್ವಿಯಾಗಿ ಎಸ್ಎಸ್ಎಲ್​ಸಿ, ಡಿಗ್ರಿ ಹಾಗೂ ಟಿಇಟಿ ಪರೀಕ್ಷೆಯನ್ನೂ ಯಶಸ್ವಿಯಾಗಿ ಮುಗಿಸಿದೆ‌.

ಸದ್ಯ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ನಡೆಯುತ್ತಿದ್ದು, ಇದರ ನಡುವೆಯೇ ಶಾಲಾ - ಕಾಲೇಜು ಆರಂಭ ಮಾಡಿದೆ.‌ ಇದಕ್ಕೂ ಮೊದಲು ಟ್ರಯಲ್ ರೀತಿಯಲ್ಲಿ ಪದವಿ ಕಾಲೇಜುಗಳನ್ನ ಆರಂಭಿಸಿದ್ದ ಸರ್ಕಾರ ಇದೀಗ ನಿನ್ನೆಯಿಂದ 9 ರಿಂದ 12 ನೇ ಕ್ಲಾಸ್​ ವರೆಗೆ ಭೌತಿಕ ತರಗತಿ ಆರಂಭಿಸಿದೆ.‌

ಮೊದಲ ದಿನಕ್ಕೆ ತಕ್ಕಮಟ್ಟಿಗೆ ವಿದ್ಯಾರ್ಥಿಗಳು ಆಗಮಿಸಿದ್ದರು. ಆದರೆ, ಎರಡನೇ ದಿನಕ್ಕೆ ಆ ಸಂಖ್ಯೆ ದುಪ್ಪಟ್ಟ ಆಗಿದೆ. ಈ ಮೂಲಕ ನಿಧಾನಗತಿಯಲ್ಲಿ ಶಾಲೆಗೆ ಬರುವವರ ಸಂಖ್ಯೆ ಹೆಚ್ಚಾಗ್ತಿದೆ. ಇದರಿಂದ ಕೊರೊನಾ ಮಧ್ಯೆಯು ಶಾಲಾ - ಕಾಲೇಜು ಆರಂಭಿಸಿ ಯಶಸ್ಸು ಕಾಣುವ ದಾರಿ ಹಿಡಿದಿದೆ.‌‌

ಕೊರೊನಾ ಕಾರಣಕ್ಕೆ ವಿದ್ಯಾರ್ಥಿಗಳು ಶಾಲಾ - ಕಾಲೇಜು ಬಾಗಿಲು ತಟ್ಟುತ್ತಾರೋ/ಇಲ್ಲವೋ ಅನುಮಾನ‌ ಇತ್ತು. ಆದರೆ, ಕಲಿಕೆ‌ ದೃಷ್ಟಿಯಿಂದ ಇದೀಗ ಶಾಲೆ - ಕಾಲೇಜಿನತ್ತ ವಿದ್ಯಾರ್ಥಿಗಳು ಹೆಜ್ಜೆ ಹಾಕಿದ್ದಾರೆ.

ರಾಜ್ಯಾದ್ಯಂತ ಎರಡನೇ ದಿನವಾದ ಇಂದು 9ನೇ ತರಗತಿಯಲ್ಲಿ 3,58,393 (ಶೇ41.17) ವಿದ್ಯಾರ್ಥಿಗಳು, 10ನೇ ತರಗತಿಗೆ 3,82,147 (ಶೇ 43.86) ವಿದ್ಯಾರ್ಥಿಗಳು ಹಾಜರಾಗಿದ್ದಾರೆ.‌
ರಾಜ್ಯದಲ್ಲಿ ಶೇ. 49.79ರಷ್ಟು ಶಾಲೆಗಳು ಆರಂಭವಾಗಿದ್ದರೆ, ಶೇ.50.21 ಶಾಲೆಗಳು ಶುರುವಾಗಿಲ್ಲ. ಡೆಂಜರ್ ಜೋನ್​ನಲ್ಲಿರುವ ದಕ್ಷಿಣ ಕನ್ನಡ, ಉಡುಪಿ, ಕೊಡುಗು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಶಾಲೆಗಳು ಆರಂಭವಾಗಿಲ್ಲ.

ದ್ವಿತೀಯ ಪಿಯು ತರಗತಿಗೆ 3 ಲಕ್ಷಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಗೈರು ಹಾಜರು:

ಇನ್ನು, ಪ್ರಥಮ ಪಿಯುಸಿ ದಾಖಲಾತಿ ಮುಂದುವರೆದಿರುವುದರಿಂದ ಆ ವಿದ್ಯಾರ್ಥಿಗಳಿಗೆಲ್ಲ ಆನ್​ಲೈನ್ ತರಗತಿ ಮಾತ್ರ ನಡೆಯುತ್ತಿದೆ. ಸದ್ಯ ಎಲ್ಲೂ ಭೌತಿಕ ತರಗತಿ ಶುರುವಾಗಿಲ್ಲ. ಇನ್ನು ಎರಡನೇ ದಿನ ದ್ವಿತೀಯ ಪಿಯುಸಿಗೆ ರಾಜ್ಯಾದ್ಯಂತ ಶೇ.37.54 ರಷ್ಟು ವಿದ್ಯಾರ್ಥಿಗಳು ಹಾಜರಾಗಿದ್ದಾರೆ. ರಾಜ್ಯದಲ್ಲಿ 6,06,154 ವಿದ್ಯಾರ್ಥಿಗಳಲ್ಲಿ ಆನ್​ಲೈನ್ ಕ್ಲಾಸ್​ಗೆ 60,424 ಹಾಗೂ ಆಫ್​ಲೈನ್ ಕ್ಲಾಸ್ (ಭೌತಿಕ ತರಗತಿ) 1,67,129 ಒಟ್ಟಾರೆ 2,27,553 ವಿದ್ಯಾರ್ಥಿಗಳು ಹಾಜರಾಗಿದ್ದರೆ. 3,78,601 ಗೈರು ಹಾಜರಾಗಿದ್ದಾರೆ.

ಓದಿ:ಇಲಾಖೆಗಳ ಅಗತ್ಯದ ಕನಿಷ್ಠ ಶೇ.25 ರಷ್ಟು ವಸ್ತ್ರ ಕೈಮಗ್ಗ ನಿಗಮದಿಂದ ಖರೀದಿ: ಸಿಎಂ ಸೂಚನೆ

ABOUT THE AUTHOR

...view details