ಕರ್ನಾಟಕ

karnataka

ETV Bharat / state

ಪರಿಸರ ಉಳಿಸಿ ಅಂತಿದೆ ಚಿತ್ರಕಲೆ.... ಕುಂಚದಲ್ಲಿ ಅರಳಿದ  ಅದ್ಬುತ ಕಲೆ...!! - undefined

ಇತ್ತೀಚಿನ ದಿನಗಳಲ್ಲಿ ಅರಣ್ಯ ಪ್ರದೇಶಗಳು ಅಳಿವಿನಂಚಿನಲ್ಲಿದ್ದು, ಪರಿಸರ ಕಾಳಜಿ ಕುರಿತು ಜನರಲ್ಲಿ ಅರಿವು ಮೂಡಿಸುವ ಫೋಟೋಗಳ ಪ್ರದರ್ಶನ ಕಾರ್ಯಕ್ರಮ ನಗರದ ಚಿತ್ರಕಲಾ ಪರಿಷತ್​ನಲ್ಲಿ ನಡೆಸಲಾಯಿತು.

ಫೋಟೋ ಪ್ರದರ್ಶನ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಗಣ್ಯರು

By

Published : Apr 25, 2019, 9:12 AM IST

ಬೆಂಗಳೂರು:ನಗರದ ಚಿತ್ರಕಲಾ ಪರಿಷತ್​ನಲ್ಲಿ ಶ್ರೀಧರ ತುಮರಿ ಕ್ಲಿಕ್ಕಿಸಿದ ಫೋಟೋಗಳ ಪ್ರದರ್ಶನ ಕಾರ್ಯಕ್ರಮವನ್ನು ಹಿರಿಯ ನಟ, ಪರಿಸರವಾದಿ ಸುರೇಶ್ ಹೆಬ್ಳೀಕರ್ ಉದ್ಘಾಟಿಸಿದರು.

ನಗರದ ಚಿತ್ರಕಲಾ ಪರಿಷತ್​ನಲ್ಲಿ ಶ್ರೀಧರ ತುಮರಿ ಅವರು ತೆಗೆದಿರುವಂತಹ ಫೋಟೋಗಳ ಪ್ರದರ್ಶನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಅಥಿತಿಗಳಾಗಿ ಆಗಮಿಸಿದ್ದ ಹಿರಿಯ ನಟ, ಪರಿಸರವಾದಿ ಸುರೇಶ್ ಹೆಬ್ಳೀಕರ್, ಬಿ. ಎಸ್.ಶಂಕರ್, ಸೇರಿದಂತೆ ಇತರರು ಉದ್ಘಾಟನೆ ಮಾಡಿದರು.

ಫೋಟೋ ಪ್ರದರ್ಶನ ಕಾರ್ಯಕ್ರಮ

ಪರಿಸರದ ಕಾಳಜಿ ಹೊಂದಿರುವ ಶ್ರೀಧರ್​ ತಮರಿ ಅವರು ಮನುಷ್ಯನಿಂದ ಪರಿಸರಕ್ಕೆ ಆಗುತ್ತಿರುವ ಹಾನಿ, ಅಣುಬಾಂಬ್ ದಾಳಿಗೆ ಒಳಗಾದ ಪ್ರದೇಶದಲ್ಲಿನ‌ ಜನರ ನೋವು- ನರಳಾಟ, ಭೂಮಿಯನ್ನೇ ಛಿದ್ರಗೊಳಿಸುವ ಆಘಾತಕಾರಿ ಆವಿಷ್ಕಾರ, ಮುಂದೆ ಆಗಬಹುದಾದ ಪರಿಣಾಮ, ಕೇವಲ ಬಾಹ್ಯ ಸೌಂದರ್ಯಕ್ಕೆ ಸೀಮಿತವಾಗಿರದೇ ವೈಚಾರಿಕ ಚಿಂತನೆಗೆ ನೂಕುವ ಪರಿಣಾಮಕಾರಿ ದೃಶ್ಯಗಳನ್ನು ಕಲಾತ್ಮಕವಾಗಿ ಸೆರೆ ಹಿಡಿದಿದ್ದು, ತಮ್ಮದೇ ಆದ ರೀತಿಯಲ್ಲಿ ಛಾಯಾಚಿತ್ರದ ಮೂಲಕ ಬಿಂಬಿಸಿದ್ದಾರೆ.

ಈ ಛಾಯಾಚಿತ್ರ ಪ್ರದರ್ಶನ ಕುರಿತು ಮಾತಾನಾಡಿದ ಹಿರಿಯ ನಟ ಸುರೇಶ್ ಹೆಬ್ಳೀಕರ್​ , ಪಶ್ಚಿಮ ಘಟ್ಟಗಳ ಮರಗಳನ್ನು ಸೆರೆ ಹಿಡಿದು ಪ್ರದರ್ಶನಕ್ಕೆ ಇಟ್ಟಿದ್ದಾರೆ. ಜನರು ಕಾಡಿನ ಬಗ್ಗೆ ಅರ್ಥ ಮಾಡಿಕೊಳ್ಳುತ್ತಿಲ್ಲ. ಈ ಚಿತ್ರಗಳು ಅದನ್ನ ತಿಳಿಸುತ್ತವೆ. ಕಾಡು ಉಳಿಸುವ ಅವಶ್ಯಕತೆ ಇದ್ದು, ಆ ರೀತಿಯ ಕಾರ್ಯಕ್ರಮಗಳನ್ನು ನಿರಂತರವಾಗಿ ಮಾಡಬೇಕಾದ ಅವಶ್ಯಕತೆ ಇದೆ ಎಂದರು.

ಈ ಕಾರ್ಯಕ್ರಮದಲ್ಲಿ ಮಾಜಿ ಸಚಿವ ರೋಷನ್ ಬೇಗ್, ಕಲಾವಿದೆ ರೇಖಾ ಹೆಬ್ಬಾರ್ ರಾವ್ ಮೊದಲಾದವರು ಪಾಲ್ಗೊಂಡಿದ್ದರು.

For All Latest Updates

TAGGED:

ABOUT THE AUTHOR

...view details