ಬೆಂಗಳೂರು: ಆರು ದಶಕಕ್ಕೂ ಹೆಚ್ಚು ಕಾಲ ಪತ್ರಿಕಾ ಛಾಯಾಗ್ರಾಹಕರಾಗಿದ್ದುಕೊಂಡು, ಕರ್ನಾಟಕದ, ದೇಶದ ಅಪರೂಪದ ಘಟನೆಗಳನ್ನು ದಾಖಲಿಸಿದ ಟಿ.ಎಲ್ ರಾಮಸ್ವಾಮಿ ನಿಧನರಾಗಿದ್ದಾರೆ.
ಖ್ಯಾತ ಛಾಯಾಗ್ರಾಹಕ ಟಿ.ಎಲ್ ರಾಮಸ್ವಾಮಿ ನಿಧನ - Photographer TL Ramaswamy Died
ಖ್ಯಾತ ಪತ್ರಿಕಾ ಛಾಯಾಗ್ರಾಹಕ ಟಿ.ಎಲ್ ರಾಮಸ್ವಾಮಿ ಬೆಂಗಳೂರಿನ ಮಗನ ನಿವಾಸದಲ್ಲಿ ನಿಧನ ಹೊಂದಿದ್ದಾರೆ.
![ಖ್ಯಾತ ಛಾಯಾಗ್ರಾಹಕ ಟಿ.ಎಲ್ ರಾಮಸ್ವಾಮಿ ನಿಧನ Photographer TL Ramaswamy Died](https://etvbharatimages.akamaized.net/etvbharat/prod-images/768-512-6644170-201-6644170-1585904624861.jpg)
ಖ್ಯಾತ ಛಾಯಾಗ್ರಾಹಕ ಟಿ.ಎಲ್ ರಾಮಸ್ವಾಮಿ ನಿಧನ
89 ವರ್ಷದ ಟಿ.ಎಲ್ ರಾಮಸ್ವಾಮಿ, ಅರಕೆರೆಯ ಮಗನ ಮನೆಯಲ್ಲಿ ಇಂದು ಮುಂಜಾನೆ ನಿಧನಹೊಂದಿದ್ದಾರೆ. 1950 ರಿಂದ 1985 ರವರೆಗೆ ಡೆಕ್ಕನ್ ಹೆರಾಲ್ಡ್, ಪ್ರಜಾವಾಣಿ ಬಳಗದಲ್ಲಿ ಮುಖ್ಯ ಛಾಯಾಚಿತ್ರ ವರದಿಗಾರರಾಗಿ ಕಾರ್ಯನಿರ್ವಹಿಸಿದ್ದರು. ಬಳಿಕ ಮುಕ್ತ ಪತ್ರಿಕಾ ಛಾಯಾಗ್ರಾಹಕರಾಗಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ಪತ್ರಿಕೆಗಳಿಗೂ ಕೆಲಸ ಮಾಡಿದ್ದಾರೆ. ಅಲ್ಲದೆ ಜಮ್ಮು ಮತ್ತು ಪಂಜಾಬ್ ಗಡಿಗಳಲ್ಲಿ ಯುದ್ಧ ವರದಿಯ ತರಬೇತಿ ಪಡೆದಿದ್ದಾರೆ.
ಇವರ ಸಾಧನೆ ಗುರುತಿಸಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಮಾಧ್ಯಮ ಅಕಾಡೆಮಿ ಗೌರವ ಪ್ರಶಸ್ತಿ ಸೇರಿದಂತೆ ಅನೇಕ ಗೌರವ ಸನ್ಮಾನಗಳು ದೊರೆತಿದ್ದವು.