ಕರ್ನಾಟಕ

karnataka

ETV Bharat / state

ಫೋಟೋ ಮಾರ್ಫಿಂಗ್ ಗ್ಯಾಂಗ್ ಕಿಂಗ್​ಪಿನ್​​ ಅರೆಸ್ಟ್​: ಈತನ ಕಥೆ ಕೇಳಿ ಬಿಚ್ಚಿಬಿದ್ದ ಪೊಲೀಸರು!

ವಿಶ್ವಾಸಿಯಾಗಿರ್ತಾನೆ ಅಂತ ವಾಟ್ಸ್​ಆ್ಯಪ್​ ಗ್ರೂಪ್​ನಲ್ಲಿ ಆ್ಯಡ್ ಮಾಡಿದ್ರೆ ಗ್ರೂಪ್​ನಲ್ಲಿರುವವರ ನಂಬರ್ ಇಟ್ಕೊಂಡ್ ಅವರ ಫೇಸ್​ಬುಕ್​ ಸರ್ಚ್ ಮಾಡಿ ಅಲ್ಲಿಂದ ಫೋಟೋ ತಗೊಂಡು ಅಶ್ಲೀಲವಾಗಿ ಮಾರ್ಫಿಂಗ್ ಮಾಡುತ್ತಿದ್ದ. ಅಷ್ಟೇ ಅಲ್ಲ, ಅದನ್ನ ಅವರಿಗೆ ಕಳಿಸಿ ಹಣಕ್ಕೆ ಬೇಡಿಕೆ ಇಡುತ್ತಿದ್ದ. ಈಗ ಅಂತಹ ಜಾಗವನ್ನು ಬೇಧಿಸಿರುವ ಪೊಲೀಸರು, ಖತರ್ನಾಕ್​ ಆರೋಪಿಯನ್ನು ಬಂಧಿಸಿದ್ದಾರೆ.

Photo Morphing Gang Kingpin Arrested
ಫೋಟೋ ಮಾರ್ಫಿಂಗ್ ಗ್ಯಾಂಗ್ ಕಿಂಗ್​ಪಿನ್​​ ಅರೆಸ್ಟ್

By

Published : Oct 10, 2020, 8:08 PM IST

ಬೆಂಗಳೂರು : ಇದು ಕೋಳಿ ಫಾರಂನಿಂದ ಫೋಟೋ ಮಾರ್ಫಿಂಗ್ ವರೆಗಿನ ಭಯಾನಕ ಕಥೆ. ನಾರ್ಮಲ್ ಕೇಸ್ ಎಂದು ತನಿಖೆ ನಡೆಸುತ್ತಿದ್ದ ಪೊಲೀಸರೇ ಕಥೆ ಕೇಳಿ ಬೆಚ್ಚಿ ಬಿದ್ದಿದ್ದಾರೆ. ಹೌದು, ನಿಮಗೆ ಯಾರಾದರೂ ಕಾಲ್ ಅಥವಾ ಮೆಸೇಜ್ ಮಾಡಿ ಹಾಯ್, ನಿಮ್ಮ ಫೋಟೋ ಕಳಿಸ್ತೀವಿ ನೋಡಿ ಎಂದು ಹೇಳೋ ಗ್ಯಾಂಗ್, ನಿಮ್ಮ ಪೋಟೋಗಳನ್ನ ಮಾರ್ಫಿಂಗ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಡ್ತೀವಿ ಅಂತ ಬೆದರಿಕೆ ಹಾಕಬಹುದು. ನಿಮ್ಮಿಂದ ಹಣ ಕೀಳಬಹುದು. ಹೀಗೆ ಬೆದರಿಕೆ ಹಾಕಿ ಹಣ ಎಗರಿಸುತ್ತಿದ್ದ ಗ್ಯಾಂಗ್ ಕಿಂಗ್​ಪಿನ್​​ ಇವತ್ತು ವೈಟ್ ಫೀಲ್ಡ್ ಪೊಲೀಸರ ಅತಿಥಿಯಾಗಿದ್ದಾನೆ. ಆತನ ಹೆಸರೇ ವಿಶ್ವನಾಥ್.

ವಿಶ್ವಾಸಿಯಾಗಿರ್ತಾನೆ ಅಂತ ವಾಟ್ಸ್​​ಆ್ಯಪ್​ ಗ್ರೂಪ್​ನಲ್ಲಿ ಆ್ಯಡ್ ಮಾಡಿದ್ರೆ ಗ್ರೂಪ್​ನಲ್ಲಿರುವವರ ನಂಬರ್ ಇಟ್ಕೊಂಡ್ ಅವರ ಫೇಸ್​ಬುಕ್​ ಸರ್ಚ್ ಮಾಡಿ ಅಲ್ಲಿಂದ ಫೋಟೋ ತಗೊಂಡು ಅಶ್ಲೀಲವಾಗಿ ಮಾರ್ಫಿಂಗ್ ಮಾಡುತ್ತಿದ್ದ. ಅಷ್ಟೇ ಅಲ್ಲ, ಅದನ್ನ ಅವರಿಗೆ ಕಳಿಸಿ ಹಣಕ್ಕೆ ಬೇಡಿಕೆ ಇಡುತ್ತಿದ್ದ. ಮೂಲತಃ ಅಸ್ಸೋಂನವನಾದ ಈ ವಿಶ್ವಾಸ್, ಚಿಕ್ಕಜಾಲ ಸಮೀಪ ಕೋಳಿ ಫಾರಂ ಇಟ್ಟುಕೊಂಡಿದ್ದು, ಇದರ ಜೊತೆ ಜೊತೆಗೆ ಈ ಮೋಸದಾಟಕ್ಕೂ ಇಳಿದಿದ್ದನು.

ಕೋಳಿ ಫಾರಂನಲ್ಲಿ ಎಷ್ಟು ಮಹಾ ದುಡ್ಡು ಬರುತ್ತೆ ಅಂತ ತಿಳಿದು ಹಣದ ಭಂಡಾರವಾದ ಮಾರ್ಫಿಂಗ್ ವ್ಯವಹಾರಕ್ಕೆ ಕೈ ಹಾಕಿದ್ದನು. ಹೀಗೆ ನಗರದ ಓರ್ವ ಪ್ರಾಧ್ಯಾಪಕನ​​ ಫೋಟೋವನ್ನು ಅಶ್ಲೀಲವಾಗಿ ಎಡಿಟ್ ಮಾಡಿ ಕಳಿಸಿದ್ದ. ಈ ಬಗ್ಗೆ ಆ ಪ್ರಾಧ್ಯಾಪಕ ಸೈಬರ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರು ದಾಖಲಾಗುತ್ತಿದ್ದಂತೆ ನಾರ್ಮಲ್ ಕೇಸ್ ಅಂತ ತನಿಖೆಗಿಳಿದಿದ್ದ ಪೊಲೀಸರು ಈ ಜಾಲದ ಹಿಂದಿನ ಕಥೆ ಕೇಳಿ ಅವರೇ ಬೆಚ್ಚಿ ಬಿದ್ದಿದ್ದಾರೆ.

ವೈಟ್ ಫೀಲ್ಡ್ ಡಿಸಿಪಿ ದೇವರಾಜ್

ನಗರದ ಚಿಕ್ಕಜಾಲದಲ್ಲಿ ಸೈಬರ್ ಹ್ಯಾಕರ್ಸ್ ಇರುವ ಬಗ್ಗೆ ತಿಳಿದ ಪೊಲೀಸರು, ಕೂಡಲೇ ದಾಳಿ ನಡೆಸಿ ವ್ಯಕ್ತಿಯನ್ನು ಬಂಧಿಸಿ ಕರೆತಂದಿದ್ದಾರೆ. ಆತನ ಬಳಿಯಿದ್ದ ಮೊಬೈಲ್​ ಫೋನ್ ವಶ ಪಡಿಸಿಕೊಂಡಿದ್ದಾರೆ. ಮೊಬೈಲ್​ ಪರಿಶೀಲನೆ ನಡೆಸಿ ನೋಡಿದಾಗ ಈತ 4 ಪಬ್ಲಿಕ್ ಗ್ರೂಪ್​ಗಳನ್ನು ಮಾಡಿದ್ದು, ಅದ್ರಲ್ಲಿದ್ದ ಮೆಂಬರ್ಸ್​ಗೆ ಹೀಗೆ ಅಶ್ಲೀಲ ಫೋಟೋಗಳನ್ನ ಕಳಿಸುತ್ತಿದ್ದದ್ದು, ಈ ಎಲ್ಲದರ ಮಾಹಿತಿ ಹೊರ ಬಿದ್ದಿದೆ. ಸದ್ಯ ಆರೋಪಿಯ ಮೊಬೈಲ್​ನಲ್ಲಿ ಹಲವರ ಫೋಟೋ ಜಪ್ತಿಯಾಗಿದೆ. ಆರೋಪಿಯನ್ನ ಬಂಧಿಸಿರುವ ವೈಟ್ ಫೀಲ್ಡ್ ಡಿಸಿಪಿ ದೇವರಾಜ್ ಟೀಂ, ಪಬ್ಲಿಕ್ ಗ್ರೂಪ್​ಗಳಲ್ಲಿ ಯಾರಾದರೂ ಮೆಂಬರ್ಸ್ ಆಗಿದ್ರೆ, ಅಲ್ಲಿ ನಿಮ್ಮ ಪರ್ಸನಲ್ ಫೋಟೋಗಳನ್ನ ಶೇರ್ ಮಾಡುತ್ತಿದ್ದರೆ ಹುಷಾರಾಗಿರಿ ಎಂದು ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.

ABOUT THE AUTHOR

...view details