ಕರ್ನಾಟಕ

karnataka

ETV Bharat / state

Phone Tapping case: ಬೆಲ್ಲದ್ ನೀಡಿದ್ದ ನಂಬರ್ ಯಾರದ್ದು ಗೊತ್ತಾ? - phone taping case

ಯುವರಾಜ್ ಸ್ವಾಮಿ ಹೆಸರಿನಲ್ಲಿ ಕರೆ ಮಾಡಿರುವುದಾಗಿ ಆರೋಪಿಸಿ ತನಿಖಾಧಿಕಾರಿಗಳಿಗೆ ಬೆಲ್ಲದ್ ಹೈದರಾಬಾದ್ ಮೂಲದ ಅರ್ಚಕರ ನಂಬರ್ ಕೊಟ್ಟಿದ್ದರು. ಇದರ ಜಾಡು ಹಿಡಿದು ಹೊರಟ ಪೊಲೀಸರು ಅಲ್ಲಿನ ಮುಶೀರಾಬಾದ್ ನಿವಾಸಿ ಜಿತೇಂದ್ರ ಪ್ರಖ್ಯಾತ್ ಎಂಬುವರನ್ನು ಪತ್ತೆ ಹಚ್ಚಿದ್ದರು‌.

mla-arvind-bellad
ಶಾಸಕ ಅರವಿಂದ್ ಬೆಲ್ಲದ್

By

Published : Jul 1, 2021, 3:58 PM IST

ಬೆಂಗಳೂರು: ಫೋನ್ ಟ್ಯಾಪಿಂಗ್ ಆರೋಪ ಪ್ರಕರಣ ಸಂಬಂಧ ನಗರ ಕೇಂದ್ರ ವಿಭಾಗದ ಅಧಿಕಾರಿಗಳು ನೀಡಿದ್ದ ನೋಟಿಸ್​ಗೆ ಶಾಸಕ ಅರವಿಂದ್ ಬೆಲ್ಲದ್ ಕೊನೆಗೂ ಹಾಜರಾಗಿ ವಿಚಾರಣೆ ಎದುರಿಸಿದ್ದಾರೆ. ಬುಧವಾರ ವಿಚಾರಣೆಗೆ ಹಾಜರಾಗಿ ತನಿಖಾಧಿಕಾರಿಗಳ‌ ಪ್ರಶ್ನೆಗಳಿಗೆ‌ ಉತ್ತರಿಸಿದ್ದಾರೆ.

'ಕೆಲ‌‌ ದಿನಗಳ ಹಿಂದೆ ಸ್ವಾಮಿ ಹೆಸರಿನಲ್ಲಿ‌ ಕರೆ ಬಂದಿತ್ತು. ಈ ನಂಬರ್ ಡೈರಿಯಲ್ಲಿ ನಮ್ಮ‌ ಹುಡುಗರು ಬರೆದುಕೊಂಡಿದ್ದರು. ತಪ್ಪಾಗಿ ಗ್ರಹಿಸಿ ಸ್ವಾಮಿ ಹೆಸರಿನ‌ ಮುಂದೆ ಹೈದರಾಬಾದ್ ನ‌ ನಲ್ಲಿರುವ ಗೊತ್ತಿರುವ ಅರ್ಚಕರ‌‌ ಮೊಬೈಲ್ ನಂಬರ್ ಬರೆದುಕೊಂಡಿದ್ದಾರೆ. ಇದರಿಂದ ಗೊಂದಲದಲ್ಲೇ ನಿಮಗೂ ನಂಬರ್ ಕೊಟ್ಟಿದ್ದೇನೆ. ಮತ್ತೊಮ್ಮೆ‌ ಪರಿಶೀಲಿಸಿ ನನಗೆ ಕರೆ ಬಂದಿದ್ದ ಮೊಬೈಲ್ ನಂಬರ್ ಕೊಡುವುದಾಗಿ' ವಿಚಾರಣೆ ವೇಳೆ ತನಿಖಾಧಿಕಾರಿಗಳ ಮುಂದೆ ಹೇಳಿದ್ದಾರೆ ಎನ್ನಲಾಗ್ತಿದೆ.

ಫೋನ್ ನಂಬರ್ ಹುಡುಕಿ ಹೊರಟಿದ್ದ ಪೊಲೀಸರಿಗೆ ಶಾಕ್..

ಯುವರಾಜ್ ಸ್ವಾಮಿ ಹೆಸರಿನಲ್ಲಿ ಕರೆ ಮಾಡಿರುವುದಾಗಿ ಆರೋಪಿಸಿ ತನಿಖಾಧಿಕಾರಿಗಳಿಗೆ ಬೆಲ್ಲದ್ ಹೈದರಾಬಾದ್ ಮೂಲದ ಅರ್ಚಕರ ನಂಬರ್ ಕೊಟ್ಟಿದ್ದರು. ಇದರ ಜಾಡು ಹತ್ತಿದ ಪೊಲೀಸರು ಅಲ್ಲಿನ ಮುಶೀರಾಬಾದ್ ನಿವಾಸಿ ಜಿತೇಂದ್ರ ಪ್ರಖ್ಯಾತ್ ಎಂಬುವರನ್ನು ಪತ್ತೆ ಹಚ್ಚಿದ್ದರು‌ ಎಂದು ತಿಳಿದುಬಂದಿದೆ.

ರಾಷ್ಟ್ರೀಯ ಸ್ವಯಂಸೇವಾ ಸಂಘ (ಆರ್ ಎಸ್ ಎಸ್)ದಲ್ಲಿ ಸಕ್ರಿಯರಾಗಿರುವ ಜಿತೇಂದ್ರ ಪ್ರಖ್ಯಾತ್ ನಿವಾಸಕ್ಕೆ ಪೊಲೀಸರು ತೆರಳಿ ಪ್ರಶ್ನಿಸಿದ್ದಾರೆ. ನಂತರ ಬೆಲ್ಲದ್ ಸೇರಿದಂತೆ ಹಲವು ರಾಜಕೀಯ ನಾಯಕರಿಂದ ಒತ್ತಡ ಕೇಳಿ ಬಂದ‌ ಹಿನ್ನೆಲೆ ಬೆಂಗಳೂರು ಪೊಲೀಸರು ವಾಪಸ್ ಆಗಿದ್ದರು.‌ ಜಿತೇಂದ್ರ ಆರ್ ಎಸ್ ಎಸ್ ಹಾಗೂ ಬಿಜೆಪಿ‌ ನಾಯಕರೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ತಿಳಿದುಬಂದಿದೆ.

ಓದಿ:Unlock 3.O: ನಾಳೆ ಚಿತ್ರಮಂದಿರ, ಮಾಲ್​, ಸ್ವಿಮ್ಮಿಂಗ್​ ಪೂಲ್​ ಆರಂಭಕ್ಕೆ ಸಿಗುತ್ತಾ ಗ್ರೀನ್​ ಸಿಗ್ನಲ್?​

ABOUT THE AUTHOR

...view details