ಕರ್ನಾಟಕ

karnataka

ETV Bharat / state

ಪೋನ್​ ಟ್ಯಾಪಿಂಗ್ ಕೇಸ್​: ಐಪಿಎಸ್​ ಅಧಿಕಾರಿಯೊಬ್ಬರ ವಿಚಾರಣೆ ನಡೆಸಲಿರುವ ಸಿಬಿಐ

ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದ ಪೋನ್ ಕದ್ದಾಲಿಕೆ ಪ್ರಕರಣದ ತನಿಖೆಯನ್ನು ಸಿಬಿಐ ಚುರುಕುಗೊಳಿಸಿದ್ದು, ಕಳೆದ ಒಂದು ವಾರದಿಂದ ನಗರದಲ್ಲಿ ಮೊಕ್ಕಾಂ ಹೂಡಿರುವ ಎಸ್​ಪಿ ಕಿರಣ್​ ನೇತೃತ್ವದ ಸಿಬಿಐ ತಂಡ ಇದೀಗ ಐಪಿಎಸ್​ ಅಧಿಕಾರಿಯೊಬ್ಬರ ವಿಚಾರಣೆ ನಡೆಸಲು ಸಿದ್ಧತೆ ನಡೆಸುತ್ತಿದೆ.

CBI ,ಸಿಬಿಐ

By

Published : Sep 7, 2019, 1:43 PM IST

ಬೆಂಗಳೂರು :ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದ ಪೋನ್ ಕದ್ದಾಲಿಕೆ ಪ್ರಕರಣದ ತನಿಖೆಯನ್ನು ಸಿಬಿಐ ಚುರುಕುಗೊಳಿಸಿದ್ದು, ಕಳೆದ ಒಂದು ವಾರದಿಂದ ನಗರದಲ್ಲಿ ಮೊಕ್ಕಾಂ ಹೂಡಿರುವ ಎಸ್​ಪಿ ಕಿರಣ್​ ನೇತೃತ್ವದ ಸಿಬಿಐ ತಂಡ ಇದೀಗ ಐಪಿಎಸ್​ ಅಧಿಕಾರಿಯೊಬ್ಬರ ವಿಚಾರಣೆ ನಡೆಸಲು ಸಿದ್ಧತೆ ನಡೆಸುತ್ತಿದೆ.

ಕಳೆದ ವಾರ ಆಡುಗೋಡಿಯಲ್ಲಿರುವ ಸಿಸಿಬಿ ಟೆಕ್ನಿಕಲ್​ ಸೆಲ್​ಗೆ ಭೇಟಿ ನೀಡಿ ಪ್ರಕರಣದ ಮಾಹಿತಿ ಪಡೆದುಕೊಂಡ ಸಿಬಿಐ ಇನ್​ಸ್ಟೆಕ್ಟರ್​ ಮಾಲತೇಶ್​ ಹಾಗೂ ಮಿರ್ಜಾ ಆಲಿ ಸೇರಿದಂತೆ ಅಲ್ಲಿನ ಸಿಬ್ಬಂದಿ ವಿಚಾರಣೆ ನಡೆಸಿತ್ತು. ವಿಚಾರಣೆಯಲ್ಲಿ ಹಿಂದಿನ ಕಮಿಷನರ್​ ಅಲೋಕ್​ ಕುಮಾರ್​ ಅವರಿಗೆ ಟ್ಯಾಪ್​ ಮಾಡಲಾಗಿದ್ದ ಕರೆಗಳ ವಿವರ ಸೇರಿದಂತೆ ಅಗತ್ಯ ಮಾಹಿತಿ ಒಳಗೊಂಡಿರುವ ಪೆನ್​ಡ್ರೈವ್​ವನ್ನು ಐಪಿಎಸ್ ಅಧಿಕಾರಿಯೊಬ್ಬರಿಗೆ ನೀಡಿರುವುದಾಗಿ ಹೇಳಿಕೆ ನೀಡಿದ್ದರು ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಸಿಸಿಬಿ ಹೆಚ್ಚುವರಿ ಪೊಲೀಸ್​ ಅಯುಕ್ತರಾಗಿದ್ದ ಅಲೋಕ್​ ಕುಮಾರ್​ ಅವರನ್ನು ಕರೆಯಿಸಿ ಪ್ರಕರಣದ ಕುರಿತಂತೆ ಸಿಬಿಐ ಪ್ರಶ್ನಿಸಿಲು ಸಿದ್ಧತೆ ನಡೆಸುತ್ತಿದೆ ಎಂಬುದು ತಿಳಿದು ಬಂದಿದೆ.

ABOUT THE AUTHOR

...view details