ಕರ್ನಾಟಕ

karnataka

ETV Bharat / state

ಫೋನ್​ ಕದ್ದಾಲಿಕೆ ಪ್ರಕರಣ: ಮುಂದುವರೆದ ಎಸಿಪಿ, ಇನ್ಸ್​ಪೆಕ್ಟರ್​ಗಳ ವಿಚಾರಣೆ - ಪೋನ್ ಕದ್ದಾಲಿಕೆ ಪ್ರಕರಣ ಸುದ್ದಿ

ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಟೆಲಿಫೋನ್ ಕದ್ದಾಲಿಕೆ ಪ್ರಕರಣದ ತನಿಖೆಯನ್ನು ಸಿಬಿಐ ಅಧಿಕಾರಿಗಳು ಮುಂದುವರೆಸಿದ್ದಾರೆ.

CBI , ಸಿಬಿಐ

By

Published : Nov 8, 2019, 8:14 PM IST

ಬೆಂಗಳೂರು: ರಾಜಕಾರಣಿಗಳು, ಮಠಾಧೀಶರು ಹಾಗು ಹಿರಿಯ ಅಧಿಕಾರಿಗಳ ಫೋನ್ ಕದ್ದಾಲಿಕೆ ಪ್ರಕರಣದ ತನಿಖೆಯನ್ನು ಸಿಬಿಐ ಅಧಿಕಾರಿಗಳು ಮುಂದುವರೆಸಿದ್ದಾರೆ.

ನಿ‌ನ್ನೆಯಷ್ಟೇ ಹಿರಿಯ ಐಪಿಎಸ್‌ ಅಧಿಕಾರಿ ಅಲೋಕ್ ಕುಮಾರ್ ಅವರನ್ನು ತನಿಖೆಗೆ ಹಾಜರಾಗುವಂತೆ ಸೂಚಿಸಿ ಸಿಬಿಐ ಅಧಿಕಾರಿಗಳು ಬುಲಾವ್ ನೀಡಿದ್ದರು. ಇಂದು ಮತ್ತೆ ನಗರದ ಕೆಲ ಠಾಣಾಧಿಕಾರಿಗಳು ಹಾಗೂ ಎಸಿಪಿಗಳನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

ಯಾವೆಲ್ಲಾ ಪ್ರಕರಣದಲ್ಲಿ ಎಫ್​ಐಆರ್?
154 ಜನರ ಫೋನ್ ಟ್ಯಾಪಿಂಗ್ ಮಾಡಲು ಸುಮಾರು 77 ಎಫ್‌ಐಆರ್​ಗಳನ್ನು ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಹಾಕಲಾಗಿದೆ. ಅಲ್ಲದೇ ಸಂಬಂಧವೇ ಇಲ್ಲದ ಎಫ್‌ಐಆರ್‌ಗಳನ್ನು ಬಳಸಿ ಟ್ಯಾಪಿಂಗ್ ಮಾಡಿರುವ ವಿಚಾರವೂ ತನಿಖೆ ವೇಳೆ ತಿಳಿದು ಬಂದಿದೆ ಎಂಬ ಮಾಹಿತಿ ಇದೆ.

ಕೊಲೆ ಯತ್ನ ಪ್ರಕರಣ, ಶ್ರೀಗಂಧದ ಮರ ಕಳ್ಳತನ, ಹವಾಲಾ ಸಾಗಾಟ,‌‌ ಮನೆ ಕಳ್ಳತನ ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸಿ ‌ಬಹಳಷ್ಟು ರಾಜಾಕಾರಣಿಗಳು, ಉದ್ಯಮಿಗಳು, ಸ್ವಾಮೀಜಿಗಳ ಫೋನ್​ ಟ್ಯಾಪಿಂಗ್ ಮಾಡಿರುವ ವಿಚಾರವೂ ಬಯಲಾಗಿದೆ.

ABOUT THE AUTHOR

...view details