ಕರ್ನಾಟಕ

karnataka

ETV Bharat / state

ಕೈಗಾರಿಕಾ ಟೌನ್ ಶಿಪ್ ಸ್ಥಾಪನೆಗೆ ರಾಜ್ಯ ಸರ್ಕಾರದಿಂದ ತಾತ್ವಿಕ ಅನುಮೋದನೆ - ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮ

ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮ ಹಾಗೂ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮಗಳ ವತಿಯಿಂದ ಸಾರ್ವಜನಿಕ - ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಾಣವಾಗಲಿರುವ ಈ ಟೌನ್ ಶಿಪ್ ಗಳಿಂದ ಮುಂದಿನ ಮೂರು ವರ್ಷಗಳಲ್ಲಿ ಅಂದಾಜು 10 ಸಾವಿರ ಕೋಟಿ ರೂ.ಗಳ ಖಾಸಗಿ ಬಂಡವಾಳ ಆಕರ್ಷಿಸುವ ಮೂಲಕ ಐದು ಲಕ್ಷ ಉದ್ಯೋಗಾವಕಾಶ ಸೃಷ್ಟಿಸುವ ನಿರೀಕ್ಷೆ ಇದೆ ಎಂದು ಘೋಷಿಸಲಾಗಿದೆ.

ರಾಜ್ಯ ಸರ್ಕಾರ
ರಾಜ್ಯ ಸರ್ಕಾರ

By

Published : Oct 12, 2021, 8:55 PM IST

ಬೆಂಗಳೂರು : 2021-22 ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿರುವ ಬೆಂಗಳೂರು - ಮುಂಬೈ ಮತ್ತು ಬೆಂಗಳೂರು, ಚೆನ್ನೈ ಕೈಗಾರಿಕಾ ಕಾರಿಡಾರ್ ಗಳಲ್ಲಿ ಕೈಗಾರಿಕಾ ಟೌನ್ ಶಿಪ್ ಗಳನ್ನು ಸ್ಥಾಪಿಸಲು ರಾಜ್ಯ ಸರ್ಕಾರ ತಾತ್ವಿಕ ಅನುಮೋದನೆ ನೀಡಿದೆ.

ಬೆಂಗಳೂರು - ಮುಂಬೈ ಮತ್ತು ಬೆಂಗಳೂರು-ಚೆನ್ನೈ ಕೈಗಾರಿಕಾ ಕಾರಿಡಾರ್ ಗಳಲ್ಲಿ ಲಭ್ಯವಿರುವ ಅವಕಾಶಗಳನ್ನು ಬಳಸಿಕೊಂಡು ಎರಡು ಕಡೆಗಳಲ್ಲಿ ತಲಾ ಕನಿಷ್ಠ 500 ಎಕರೆ ಜಾಗದಲ್ಲಿ ಮುಖ್ಯಮಂತ್ರಿಗಳ ಮೆಗಾ ಸಂಯೋಜಿತ ಕೈಗಾರಿಕಾ ಟೌನ್ ಶಿಪ್ ಗಳನ್ನು ಸ್ಪಾಪಿಸಲಾಗುವುದು.

ಕೈಗಾರಿಕಾ ಟೌನ್ ಶಿಪ್ ಸ್ಥಾಪಿಸಲು ರಾಜ್ಯ ಸರ್ಕಾರದಿಂದ ತಾತ್ವಿಕ ಅನುಮೋದನೆ

ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮ ಹಾಗೂ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮಗಳ ವತಿಯಿಂದ ಸಾರ್ವಜನಿಕ - ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಾಣವಾಗಲಿರುವ ಈ ಟೌನ್ ಶಿಪ್ ಗಳಿಂದ ಮುಂದಿನ ಮೂರು ವರ್ಷಗಳಲ್ಲಿ ಅಂದಾಜು 10 ಸಾವಿರ ಕೋಟಿ ರೂ.ಗಳ ಖಾಸಗಿ ಬಂಡವಾಳ ಆಕರ್ಷಿಸುವ ಮೂಲಕ ಐದು ಲಕ್ಷ ಉದ್ಯೋಗಾವಕಾಶ ಸೃಷ್ಟಿಸುವ ನಿರೀಕ್ಷೆ ಇದೆ ಎಂದು ಘೋಷಿಸಲಾಗಿದೆ.

ಕೈಗಾರಿಕಾ ಟೌನ್ ಶಿಪ್ ಸ್ಥಾಪಿಸಲು ರಾಜ್ಯ ಸರ್ಕಾರದಿಂದ ತಾತ್ವಿಕ ಅನುಮೋದನೆ

ಅದರಂತೆ ಬೆಂಗಳೂರು - ಮುಂಬೈ ಕೈಗಾರಿಕಾ ಕಾರಿಡಾರಿನಲ್ಲಿ ಮತ್ತು ಬೆಂಗಳೂರು - ಚೆನ್ನೈ ಕೈಗಾರಿಕಾ ಕಾರಿಡಾರಿನಲ್ಲಿ ಲಭ್ಯವಿರುವ ಅವಕಾಶಗಳನ್ನು ಬಳಸಿಕೊಂಡು ಕನಿಷ್ಠ 500 ಎಕರೆ ಜಾಗದಲ್ಲಿ ಮುಖ್ಯಮಂತ್ರಿಗಳ ಮೆಗಾ ಸಂಯೋಜಿತ ಕೈಗಾರಿಕಾ ಟೌನ್​​​ಶಿಪ್​​​ಗಳನ್ನು ಸ್ಥಾಪಿಸುವ ಬಗ್ಗೆ, Director (MSME), KSSIDC, KSIIDC, KIADB ಹಾಗೂ ಸಂಬಂಧಿಸಿದ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದ್ದು, ಭೂಮಿ ಲಭ್ಯತೆ ಕುರಿತಾದ ವಿವರಗಳನ್ನು ಸಲ್ಲಿಸುವಂತೆ ಸೂಚಿಸಲಾಗಿದೆ.

ಈ ಹೊಸ ಯೋಜನೆ ಕಾರ್ಯಗತಗೊಳಿಸುವ ಕುರಿತಂತೆ ಕೆಳಕಂಡ ಅಂಶಗಳಿಗೆ ತಾತ್ವಿಕ ಅನುಮೋದನೆ ನೀಡುವಂತೆ ಆರ್ಥಿಕ ಇಲಾಖೆ ಮತ್ತು ಯೋಜನಾ ಇಲಾಖೆಯನ್ನು ಕೋರಿ ಅನುಮೋದನೆ ಪಡೆಯಲಾಗಿದೆ.

  • ಈ ಕಾರಿಡಾರ್​​​ಗಳ ಕಾರ್ಯವ್ಯಾಪ್ತಿಗೆ ಬರುವ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಕೈಗಾರಿಕೆಗಳ ಬೇಡಿಕೆ ಸಮೀಕ್ಷೆಯನ್ನು ಕೈಗೊಂಡು ಆದರ ವರದಿಯನ್ನು ಎಂ.ಡಿ, ಕೆ.ಎಸ್.ಎಸ್.ಐ.ಡಿ.ಸಿ ಅವರಿಗೆ ಸಲ್ಲಿಸುವುದು.
  • ಕೆ.ಎಸ್.ಎಸ್.ಐ.ಡಿ.ಸಿ ಸಂಸ್ಥೆಯು ಸರಳ ಯೋಜನಾ ವರದಿಯನ್ನು (Simple Project Report) ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಬೇಕು.
  • ಎಂ.ಡಿ., ಕೆ.ಎಸ್.ಐ.ಐ.ಡಿ.ಸಿ. ರವರು ಈ ಯೋಜನೆಯ ಸಾರ್ವಜನಿಕ ಖಾಸಗಿ ಸಹಭಾಗಿತ್ವ ಮಾದರಿಯ ಪರಿಕಲ್ಪನೆಯನ್ನು (Concept of PPP Model) ಸರ್ಕಾರಕ್ಕೆ ಸಲ್ಲಿಸುವುದು.
  • ಕೆ.ಎಸ್.ಐ.ಐ.ಡಿ.ಸಿ ಅವರು ಈ ಯೋಜನೆಗೆ ಸಮಾಲೋಚಕರನ್ನು ಕೆ.ಟಿ.ಪಿ.ಪಿ, ಕಾಯ್ದೆಯನ್ವಯ ನೇಮಿಸಲು ಕ್ರಮ ವಹಿಸುವುದು.
  • ಈ ಯೋಜನೆಯನ್ನು ಜಾರಿಗೆ ತರಲು ಲಭ್ಯವಿರುವ ಲ್ಯಾಂಡ್ ಬ್ಯಾಂಕ್​​​ನ ವಿವರವನ್ನು ಕೆ.ಐ.ಎ.ಡಿ.ಬಿ. ಅವರು ಸರ್ಕಾರಕ್ಕೆ ಸಲ್ಲಿಸುವುದು.
  • ಈ ಎರಡು ಕಾರಿಡಾರ್ ಗಳಲ್ಲಿ ಯಾವ ಯಾವ ವಿಧದ ಕೈಗಾರಿಕೆಗಳನ್ನು ಸ್ಥಾಪಿಸಬಹುದು. ಎಂಬುದರ ಬಗ್ಗೆ ವಿಶ್ಲೇಷಿತ ವಿವರಣೆಯನ್ನು ನಿರ್ದೇಶಕರು (ಎಂ.ಎಸ್.ಎಂ.ಇ.) ರವರು ಸರ್ಕಾರಕ್ಕೆ ಸಲ್ಲಿಸುವುದು.
  • ಈ ಯೋಜನೆಯ Nodal Agency - ಉಸ್ತುವಾರಿ ಸಂಸ್ಥೆಯಾಗಿ ಎಂ.ಡಿ., ಕೆ.ಎಸ್.ಎಸ್.ಐ.ಡಿ.ಸಿ ರವರು ಮೇಲ್ಕಂಡ ಕಾರ್ಯಗಳ ಸಮನ್ವಯ ಸಾಧಿಸಿ ಸರ್ಕಾರಕ್ಕೆ ಆಗಿಂದಾಗ್ಗೆ ವರದಿ ಒಪ್ಪಿಸುವುದು.

ABOUT THE AUTHOR

...view details