ಕರ್ನಾಟಕ

karnataka

By

Published : Feb 9, 2022, 9:45 AM IST

ETV Bharat / state

'ಕೋವಿಡ್ ಸೋಂಕಿತರಿಗೆ ಮೀಸಲಿಟ್ಟ ಹಾಸಿಗೆಗಳನ್ನು ಕೋವಿಡೇತರ ಚಿಕಿತ್ಸೆಗೆ ಬಳಸಲು ಅನುಮತಿ ನೀಡಿ'

ಸರ್ಕಾರದ ಸೂಚನೆಯ ಮೇರೆಗೆ ಜನವರಿ 4 ರಂದು ಖಾಸಗಿ ಆಸ್ಪತ್ರೆ ಮತ್ತು ನರ್ಸಿಂಗ್ ಹೋಂಗಳಲ್ಲಿ ಶೇ. 50ರಷ್ಟು ಹಾಸಿಗೆಗಳನ್ನು ಕೋವಿಡ್ ರೋಗಿಗಳ ಆರೈಕೆಗಾಗಿ ಮೀಸಲಿರಿಸಲಾಗಿದೆ.‌ ಆದರೆ ಕಳೆದೊಂದು ತಿಂಗಳಿನಿಂದ ಆಸ್ಪತ್ರೆಗೆ ದಾಖಲಾಗುವ ರೋಗಿಗಳ ಪ್ರಮಾಣ ತುಂಬಾ ಕಡಿಮೆಯಾಗಿದೆ. ಹೀಗಾಗಿ, ಕೋವಿಡೇತರ ಚಿಕಿತ್ಸೆಗೆ ಅವಕಾಶ ನೀಡಿ ಎಂದು ಫನಾ ಸರ್ಕಾರಕ್ಕೆ ಪತ್ರ ಬರೆದಿದೆ.‌

ಕೋವಿಡ್​ ಬೆಡ್​
ಕೋವಿಡ್​ ಬೆಡ್​

ಬೆಂಗಳೂರು: ಖಾಸಗಿ ಆಸ್ಪತ್ರೆಗಳಲ್ಲಿ ಸರ್ಕಾರಿ ವ್ಯವಸ್ಥೆಯಡಿ ಮೀಸಲಿರಿಸಲಾಗಿದ್ದ ಹಾಸಿಗೆಗಳನ್ನು ಕೋವಿಡೇತರ ಚಿಕಿತ್ಸೆಗೆ ದಾಖಲಾಗುವವರಿಗೆ ಬಳಸಲು ಅನುಮತಿ ನೀಡಿ ಎಂದು ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್ಸ್ ಅಸೋಸಿಯೇಷನ್ (ಫನಾ) ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದೆ.

ರಾಜ್ಯದಲ್ಲಿ ರೂಪಾಂತರಿ ವೈರಸ್ ಪತ್ತೆಯಾದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ದೃಷ್ಟಿಯಿಂದ ಖಾಸಗಿ ಆಸ್ಪತ್ರೆಯಲ್ಲಿ ಹಾಸಿಗೆಗಳನ್ನು ಮೀಸಲಿಡಲಾಗಿತ್ತು. ಸರ್ಕಾರದ ಸೂಚನೆಯ ಮೇರೆಗೆ ಜನವರಿ 4 ರಂದು ಖಾಸಗಿ ಆಸ್ಪತ್ರೆ ಮತ್ತು ನರ್ಸಿಂಗ್ ಹೋಂಗಳಲ್ಲಿ ಶೇ. 50 ಹಾಸಿಗೆಗಳನ್ನು ಕೋವಿಡ್ ರೋಗಿಗಳ ಆರೈಕೆಗಾಗಿ ಇರಿಸಲಾಗಿತ್ತು.‌ ಆದರೆ ಕಳೆದೊಂದು ತಿಂಗಳಿನಿಂದ ಆಸ್ಪತ್ರೆಗೆ ದಾಖಲಾಗುವ ಪ್ರಮಾಣ ತುಂಬಾ ಕಡಿಮೆಯಾಗಿದೆ. ಹೀಗಾಗಿ, ಕೋವಿಡೇತರ ಚಿಕಿತ್ಸೆಗೆ ಅವಕಾಶ ನೀಡಬೇಕು ಎಂದು ಫನಾ ಸರ್ಕಾರವನ್ನು ಒತ್ತಾಯಿಸಿದೆ.

ಫನಾ ಪತ್ರ

ಸದ್ಯಕ್ಕೆ ಈ ಎಲ್ಲಾ ಹಾಸಿಗೆಗಳನ್ನು ಸರ್ಕಾರ ರೆಫರ್ ಮಾಡಿದ ರೋಗಿಗಳು ಬಳಸಿಕೊಂಡಿಲ್ಲ, ಈ ಅಧಿಸೂಚಿತ ಹಾಸಿಗೆಗಳು ಯಾವುದೇ ಆದಾಯವನ್ನೂ ಗಳಿಸುತ್ತಿಲ್ಲ ಮತ್ತು ಈ ಹಾಸಿಗೆಗಳ ನಿರ್ವಹಣೆಯು ಖಾಸಗಿ ವಲಯದ ಮೇಲೆ ಆರ್ಥಿಕ ಹೊರೆಯಾಗಿದೆ. ಜೊತೆಗೆ, ಇದೇ ಸಮಯದಲ್ಲಿ ಅವಶ್ಯಕತೆ ಮತ್ತು ಕೋವಿಡ್ ಅಲ್ಲದ ರೋಗಿಗಳಿಂದ ಬೇಡಿಕೆಯು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಆದ್ದರಿಂದ ಹಾಸಿಗೆ ಮೀಸಲಾತಿಯಿಂದ ಬಿಡುಗಡೆ ಮಾಡುವಂತೆ ವಿನಂತಿಸಿದ್ದಾರೆ.

ಇದನ್ನೂ ಓದಿ:ರಾಜ್ಯದ ಗಡಿ ದಾಟಿದ ಹಿಜಾಬ್-ಕೇಸರಿ ಶಾಲು ವಿವಾದ: ಮಧ್ಯಪ್ರದೇಶ, ಪುದುಚೇರಿಯಲ್ಲೂ ಕಾಣಿಸಿಕೊಂಡ ಕಿಡಿ

ಸರ್ಕಾರ ವಿನಾಯಿತಿ ನೀಡಿದ್ರೆ ಈ ಹಾಸಿಗೆಗಳನ್ನು ಅರ್ಹ ರೋಗಿಗಳು ಉತ್ತಮವಾಗಿ ಬಳಸಿಕೊಳ್ಳಬಹುದು. ಒಂದು ವೇಳೆ ಕೋವಿಡ್ ದಾಖಲಾತಿಯಲ್ಲಿ ಯಾವುದೇ ಬದಲಾವಣೆಯಾದ್ರೆ ಅಥವಾ ಹಾಸಿಗೆಗಳ ಅವಶ್ಯಕತೆಯಿದ್ದರೆ 5 ರಿಂದ 7 ದಿನಗಳ ಕಾಲಾವಧಿಯಲ್ಲಿ ಸರ್ಕಾರದ ಹಂಚಿಕೆಗೆ ಲಭ್ಯವಾಗುವಂತೆ ಮಾಡುತ್ತೇವೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ABOUT THE AUTHOR

...view details