ಕರ್ನಾಟಕ

karnataka

ಶಾಲೆ ತೆರೆಯಲು ಆತುರದ ನಿರ್ಧಾರ ತೆಗೆದುಕೊಳ್ಳೋದು ಬೇಡ: ಫನಾ ಕಾರ್ಯತಂತ್ರ ವರದಿ

By

Published : Aug 30, 2021, 4:53 PM IST

ಮಕ್ಕಳಿಗೆ ಐಸಿಯು ಬೆಡ್​ಗಳ ಕೊರತೆ ಕಾಣಬಹುದು. ನುರಿತ ತಜ್ಞರ ಕೊರತೆ ಇದೆ. ಆದಷ್ಟು ಬೇಗ ವೈದ್ಯರ ನೇಮಕಾತಿ ಆಗಬೇಕು ಎಂದು ಫನಾ ಅಧ್ಯಕ್ಷ ಪ್ರಸನ್ನ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

phana-report
ಫನಾ ಕಾರ್ಯತಂತ್ರ ವರದಿ

ಬೆಂಗಳೂರು: ಶಾಲೆ ತೆರೆಯಲು ಆತುರದ ನಿರ್ಧಾರ ತೆಗೆದುಕೊಳ್ಳೋದು ಬೇಡ ಎಂದು ಫನಾ ತನ್ನ ವರದಿಯಲ್ಲಿ ಸರ್ಕಾರಕ್ಕೆ ತಿಳಿಸಿದೆ.

ವಿಧಾನಸೌಧದಲ್ಲಿ ಆರೋಗ್ಯ ಸಚಿವರಿಗೆ ಸಲ್ಲಿಸಿದ ವರದಿಯಲ್ಲಿ, ಶಾಲೆಗಳನ್ನು ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳದೇ ತೆರೆಯಬಾರದು. ಇಸ್ರೇಲ್‌ನಲ್ಲಿ ಶಾಲೆ ಆರಂಭ ಮಾಡಿದ್ರು. ಆದ್ರೆ ಅಲ್ಲಿ ಹೆಚ್ಚಾಗಿ ಮಕ್ಕಳಲ್ಲಿ ಕೋವಿಡ್ ಕೇಸ್‌ ಕಂಡು ಬಂತು. ಹೀಗಾಗಿ, ಒಂದೇ ವಾರದಲ್ಲಿ ಶಾಲೆಗಳನ್ನು ಕ್ಲೋಸ್ ಮಾಡಿಸಿದ್ರು. ಆದ್ದರಿಂದ ಶಾಲೆಗಳನ್ನು ಆರಂಭ ಮಾಡಲು ಆತುರ ಬೇಡ. ತರಗತಿಗಳ ಸಮಯವನ್ನು ಹಂತ ಹಂತವಾಗಿ ವಿಸ್ತರಣೆ ಮಾಡಬೇಕು ಎಂದು ಶಿಫಾರಸು ಮಾಡಿದೆ.

ಅಮೆರಿಕದಲ್ಲಿ ಕೋವಿಡ್ ಹಿನ್ನೆಲೆ ಪದೇ ಪದೆ ಶಾಲೆಗಳನ್ನು ಆರಂಭಿಸಿ, ಮುಚ್ಚಲಾಗುತ್ತಿದೆ. ದಕ್ಷಿಣ ಕೊರಿಯಾದಲ್ಲಿ ಐದು ಬಾರಿ ಶಾಲೆ ತೆರೆಯುವುದನ್ನು ಮುಂದೂಡಲಾಗಿದೆ. ಅಮೆರಿಕದಲ್ಲಿ ಕೋವಿಡ್​ನಿಂದ ಅತಿ ಹೆಚ್ಚು ಮಕ್ಕಳು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ ಎಂದು ಫನಾ ಆತಂಕ ವ್ಯಕ್ತಪಡಿಸಿದೆ.

ಖಾಸಗಿ ಆಸ್ಪತ್ರೆಗಳ ಒಕ್ಕೂಟದಿಂದ ಆರೋಗ್ಯ ಸಚಿವರಿಗೆ 3ನೇ ಅಲೆ ಕುರಿತ ಕಾರ್ಯತಂತ್ರ ವರದಿಯನ್ನು ಸಲ್ಲಿಸಿದೆ. ವರದಿಯಲ್ಲಿ ಮುಂಬರುವ 3ನೇ ಅಲೆ ಹೇಗಿರಬಹುದು?. ಏನೆಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದರ ಕುರಿತು ಆ್ಯಕ್ಷನ್ ಪ್ಲಾನ್ ಸಲ್ಲಿಸಿದೆ.

ಈ ಕುರಿತು ಮಾತನಾಡಿದ ಫನಾ ಅಧ್ಯಕ್ಷ ಪ್ರಸನ್ನ, ಮೂರನೇ ಅಲೆಗೆ ಐಸಿಯು ಬೆಡ್​ಗಳ ಕೊರತೆ ಉಂಟಾಗಬಹುದು. ಮಕ್ಕಳಿಗೆ ಐಸಿಯು ಬೆಡ್​ಗಳ ಕೊರತೆ ಕಾಣಬಹುದು. ನುರಿತ ತಜ್ಞರ ಕೊರತೆ ಇದೆ. ಆದಷ್ಟು ಬೇಗ ವೈದ್ಯರ ನೇಮಕಾತಿ ಆಗಬೇಕು. ಲಸಿಕೆ ಅಭಿಯಾನ ಚುರುಕುಗೊಳಿಸಬೇಕು. ಮಕ್ಕಳಿಗೆ ಲಸಿಕೆ ಆದಷ್ಟು ಬೇಗ ಲಭ್ಯವಾಗಬೇಕು. ಸೆಕ್ಯೂರ್ಡ್ ಡೇಟಾ ಬೇಸ್ ಸಿದ್ಧಪಡಿಸಬೇಕು ಎಂದು ತಿಳಿಸಿದರು.

ಟೆಲಿಮೆಡಿಸನ್ ವ್ಯವಸ್ಥೆ: ಎಲ್ಲಾ ರೋಗಿಗಳಿಗೂ ಹೋಂ ಐಸೋಲೇಷನ್ ಸರ್ವೆಲೆನ್ಸ್ ಆಗಬೇಕು. ಕಟ್ಟುನಿಟ್ಟಾಗಿ ಇದನ್ನು ಪಾಲಿಸಬೇಕು. ಹೋಂ ಐಸೋಲೇಷನ್ ಇರೋ ಪ್ರತಿ ರೋಗಿಗೂ ಟೆಲಿಮೆಡಿಸನ್ ವ್ಯವಸ್ಥೆ ಆಗಬೇಕು. ಕೋವಿಡ್​ ಆರೈಕೆ ಕೇಂದ್ರಕ್ಕೆ ರೋಗಿಗಳನ್ನು ದಾಖಲಿಸಬೇಕು. ಮೈಕ್ರೋ ಕಂಟೈನ್‌ಮೆಂಟ್ ಝೋನ್‌ಗಳಲ್ಲಿ T3 ಸೂತ್ರ ಕಡ್ಡಾಯವಾಗಿ ಪಾಲಿಸಬೇಕು. ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ಅಗತ್ಯ ಔಷಧಗಳನ್ನು ಸಂಗ್ರಹಿಸಬೇಕು. ಶಾಲೆಗಳಲ್ಲಿ ಹೊಸ ಕ್ಲಸ್ಟರ್ ಆಗ್ತಿದಿಯಾ? ಅನ್ನೋದು ಮಾನಿಟರಿಂಗ್ ಮಾಡಬೇಕು ಎಂದರು.

ಸಮಾರಂಭಕ್ಕೆ ವಿರೋಧ: ಸರ್ಕಾರ ಕೇಳಿದ 50% ಬೆಡ್​ಗಳನ್ನು ಕೊಡ್ತೇವೆ. ಈ ಬಾರಿ ಸಹ ಬೆಡ್ ಕೊಡ್ತೇವೆ. ಒಂದು ವಾರದಲ್ಲಿ ರೆಡಿ ಮಾಡಿ ಕೊಡ್ತೇವೆ. ಗಣೇಶೋತ್ಸವಕ್ಕೆ ಅವಕಾಶ ಕೊಡಬಾರದು. ಮನೆಯಲ್ಲಿ ಮಾತ್ರ ಹಬ್ಬ ಆಚರಿಸಲು ಅವಕಾಶ ನೀಡಬೇಕು. ಸಾರ್ವಜನಿಕ ಸಮಾರಂಭಕ್ಕೆ ವಿರೋಧವಿದೆ ಎಂದರು.

ಓದಿ:SSLC ಪೂರಕ ಪರೀಕ್ಷೆ : ವಿದ್ಯಾರ್ಥಿಗಳ ನೋಂದಣಿಗೆ ದಿನಾಂಕ ವಿಸ್ತರಣೆ

ABOUT THE AUTHOR

...view details