ಕರ್ನಾಟಕ

karnataka

ETV Bharat / state

ಸ್ಫೋಟಕ ಮಾಹಿತಿ ಬಹಿರಂಗ: ಅಪರಾಧ ನಡೆಸಲು ತರಬೇತಿ ಪಡೆಯುತ್ತಿದ್ದರಾ ಪಿಎಫ್​ಐ ಮುಖಂಡರು? - ಅಟ್ಯಾಕಿಂಗ್ ಪ್ರಾಕ್ಟೀಸ್ ಟ್ರೈನಿಂಗ್

ಪಿಎಫ್‌ಐ ಬಂಧಿತ‌ ಆರೋಪಿಗಳ ಮೊಬೈಲ್ ಹಾಗೂ ಲ್ಯಾಪ್​ಟಾಪ್​ಗಳ ರಿಟ್ರೀವ್ ರಿಪೋರ್ಟ್​ನಲ್ಲಿ ಸ್ಫೋಟಕ ಮಾಹಿತಿ ಲಭ್ಯವಾಗಿದ್ದು, ಅಪರಾಧ ಕೃತ್ಯಗಳ ತರಬೇತಿಗಾಗಿ ಬಂಟ್ವಾಳದ ಮಿತ್ತೂರಿನಲ್ಲಿರುವ ಕಟ್ಟಡವನ್ನು ಕೇಂದ್ರ ಕಚೇರಿ ಮಾಡಿಕೊಂಡಿದ್ದರು ಎಂದು ತಿಳಿದು ಬಂದಿದೆ.

ಪಿಎಫ್​ಐ
pfi

By

Published : Oct 2, 2022, 1:00 PM IST

ಬೆಂಗಳೂರು: ಸಮಾಜ ವಿರೋಧಿ ಚಟುವಟಿಕೆ ನಡೆಸಲು ಸಂಚು ರೂಪಿಸುತ್ತಿದ್ದ ಆರೋಪದಡಿ ಬಂಧಿತರಾಗಿರುವ 15 ಮಂದಿಯ ಮೊಬೈಲ್ ಹಾಗೂ ಲ್ಯಾಪ್​ಟಾಪ್​ಗಳ ರಿಟ್ರೀವ್ ಮತ್ತು ಎಫ್​ಎಸ್ಎಲ್ ವರದಿ ಪಡೆದುಕೊಂಡಿರುವ ಪೂರ್ವ ವಿಭಾಗದ ಪೊಲೀಸರಿಗೆ ಮಹತ್ವದ ವಿಚಾರ ಬೆಳಕಿಗೆ ಬಂದಿದೆ.

ಹೌದು, ಅಪರಾಧ ಕೃತ್ಯಗಳ ತರಬೇತಿಗಾಗಿ ಬಂಟ್ವಾಳದ ಮಿತ್ತೂರಿನಲ್ಲಿರುವ ಕಟ್ಟಡವನ್ನು ಕೇಂದ್ರ ಕಚೇರಿ ಮಾಡಿಕೊಂಡಿದ್ದರು ಎಂಬ ವಿಚಾರ ತಿಳಿದು ಬಂದಿದೆ. ಆರ್​ಎಸ್​ಎಸ್ ಟಾರ್ಗೆಟ್ ಮಾಡಿಕೊಂಡು ಮೂರು ಹಂತದಲ್ಲಿ ತರಬೇತಿ ತೆಗೆದುಕೊಳ್ಳುತ್ತಿದ್ದರು ಎನ್ನಲಾಗ್ತಿದೆ.

ಮಾರ್ಷಲ್ ಆರ್ಟ್ಸ್, ಡಿಫೆನ್ಸಿವ್ ಹಾಗೂ ಅಟ್ಯಾಕಿಂಗ್ ಪ್ರಾಕ್ಟೀಸ್ ಎಂದು ಮೂರು ವಿಭಾಗಗಳನ್ನಾಗಿ ಮಾಡಿ ತರಬೇತಿ ನೀಡಲಾಗ್ತಿತ್ತು. ಪ್ರತಿಭಟನೆ, ರ‍್ಯಾಲಿಗಳಲ್ಲಿ ಭಾಗವಹಿಸುವವರಿಗೆ ಮಾರ್ಷಲ್ ಆರ್ಟ್ಸ್ ಹಾಗೂ ಡಿಫೆನ್ಸಿವ್ ಕಲಿಸಿ ಕೊಡಲಾಗ್ತಿತ್ತು. ಟಾರ್ಗೆಟ್ ಮಾಡಿ ಕೊಲೆ ಮಾಡಲು ಅಟ್ಯಾಕಿಂಗ್ ಪ್ರಾಕ್ಟೀಸ್ ಟ್ರೈನಿಂಗ್ ನೀಡಲಾಗ್ತಿತ್ತು.

ಇದನ್ನೂ ಓದಿ:ಪಿಎಫ್​ಐ ಬಂಧಿತರ ಮೊಬೈಲ್ ರಿಟ್ರೀವ್: ಸ್ಫೋಟಕ ಅಂಶಗಳು ಬಹಿರಂಗ

ಇನ್ನು ಈ ಅಟ್ಯಾಕಿಂಗ್ ಪ್ರಾಕ್ಟೀಸ್ ಅನ್ನು ಆಯ್ದ ಕೆಲವರಿಗೆ ಮಾತ್ರ ಕಲಿಸಿ ಕೊಡಲಾಗ್ತಿತ್ತು. ಡಿಫೆನ್ಸಿವ್ ಮತ್ತು ಮಾರ್ಷಲ್ ಆರ್ಟ್ಸ್ ಪ್ರತಿಭಟನೆ ವೇಳೆ ಕೋಮುಗಲಭೆ ಸೃಷ್ಟಿ ಮಾಡಲು ಕಲಿಸಿ ಕೊಡಲಾಗ್ತಿತ್ತು. ತಮಿಳುನಾಡು, ಕೇರಳ ಹಾಗೂ ಕರ್ನಾಟಕ ಕೇಡರ್​ಗಳಿಗೆ ತರಬೇತಿ ನೀಡಲಾಗ್ತಿತ್ತು. ಯುವಕರ ಮೈಂಡ್ ವಾಷ್ ಮಾಡಿ ಉಗ್ರವಾದಕ್ಕೆ ಹಾಗೂ ಸಮಾಜಘಾತುಕ ಕೃತ್ಯಗಳಿಗೆ ಟ್ರೈನಿಂಗ್ ನೀಡುತ್ತಿದ್ದು, ಈಗಾಗಲೇ ಹಲವು ತಂಡಗಳಿಗೆ ತರಬೇತಿ ನೀಡಿರುವ ಮಾಹಿತಿ ಸಿಕ್ಕಿದೆ.

ಇತಿಹಾಸ ಹೇಳಿ ಯುವಕರನ್ನು ಹುರಿದುಂಬಿಸುತ್ತಿದ್ದ ಪಿಎಫ್​ಐ:ಸಂಘಟನೆ ಸೇರುವ ಯುವಕರನ್ನು ಪ್ರಚೋದಿಸುತ್ತಿದ್ದ ಆರೋಪಿಗಳು ಭಾರತ ನಮ್ಮದು. ಇತಿಹಾಸ ನೋಡಿ ಮುಸ್ಲಿಂ ರಾಜರು ಅಫ್ಘಾನಿಸ್ತಾನ್, ಇರಾಕ್​ನಿಂದ ಭಾರತದವರೆಗೂ ಆಳ್ವಿಕೆ ನಡೆಸಿದ್ದಾರೆ. ಹಿಂದೆ ನಮ್ಮವರೇ ಆಳಿದ್ದು. ಮುಂದೆಯೂ ನಾವೇ ಆಳ್ವಿಕೆ ನಡೆಸಬೇಕು ಎಂದು ಪಾಠ ಮಾಡುತ್ತಿದ್ದರಂತೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ.

ABOUT THE AUTHOR

...view details