ಬೆಂಗಳೂರು :ಕಬ್ಬನ್ ಪಾರ್ಕ್‌ಗೆ ಸಾರ್ವಜನಿಕರು ನಾಯಿಗಳನ್ನು ವಾಯುವಿಹಾರಕ್ಕಾಗಿ ಕರೆದುಕೊಂಡು ಬರುವುದಕ್ಕೆ ರಾಜ್ಯ ಸರ್ಕಾರ ಜುಲೈ 1ರಿಂದ ಜಾರಿಗೆ ಬರುವಂತೆ ನಿಷೇಧ ಹೇರಲು ಮುಂದಾಗಿದೆ. ಕಳೆದ 6 ತಿಂಗಳಿನಿಂದ ವಾಯುವಿಹಾರಿಗಳು ಮತ್ತು ಜಾಗಿಂಗ್ ಮಾಡುವವರಿಂದ ಪದೇ ಪದೇ ದೂರುಗಳು ಬಂದ ಹಿನ್ನೆಲೆಯಲ್ಲಿ ಕಬ್ಬನ್ ಪಾರ್ಕ್‌ನಲ್ಲಿ ಸಾಕು ನಾಯಿಗಳನ್ನು ನಿಷೇಧಿಸಲು ಮುಂದಾಗಿದ್ದೇವೆ ಎಂದು ಕಬ್ಬನ್ ಪಾರ್ಕ್ ಉಪನಿರ್ದೇಶಕರಾದ ಬಾಲಕೃಷ್ಣ ತಿಳಿಸಿದ್ದಾರೆ.
ಈ ನಿಟ್ಟಿನಲ್ಲಿ ಜುಲೈ 1 ರಿಂದ ಗೇಟ್‌ಗಳಲ್ಲಿ ಬ್ಯಾನರ್‌ಗಳನ್ನು ಅಳವಡಿಸಲಾಗುವುದು. ಉದ್ಯಾನವನಗಳಲ್ಲಿ ಸಾಕುಪ್ರಾಣಿಗಳಿಗೆ ಇರುವ ಮಾರ್ಗಸೂಚಿಗಳನ್ನು ಪದೇ ಪದೇ ಉಲ್ಲಂಘಿಸುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ. ಕಬ್ಬನ್ ಪಾರ್ಕ್ ಒಳಗೆ ಸಾಕು ನಾಯಿಗಳನ್ನು ನಿಷೇಧಿಸುವ ಬಗ್ಗೆ ಸರ್ಕಾರದ ಮುಂದೆ ಪ್ರಸ್ತಾಪಿಸಲಾಗಿದೆ. ಸಾಕುಪ್ರಾಣಿಗಳ ನಿಷೇಧದ ಬಗ್ಗೆ ಜನರಿಗೆ ತಿಳಿಸಲು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಅವರು ಹೇಳಿದ್ದಾರೆ.