ಕರ್ನಾಟಕ

karnataka

ETV Bharat / state

ಪೆಟ್ರೋಲ್, ಡೀಸೆಲ್‌ ಬೆಲೆ ಏರಿಕೆ: ತಕ್ಷಣ ಅಧಿವೇಶನ ಕರೆಯುವಂತೆ ಸರ್ಕಾರಕ್ಕೆ ಹೆಚ್​ಡಿಕೆ ಆಗ್ರಹ - ಪೆಟ್ರೋಲ್, ಡೀಸೆಲ್‌ ಬೆಲೆ ಏರಿಕೆ

ಸರ್ಕಾರ ಜನರ ದುಡ್ಡಿನಿಂದಲೇ ತೆರಿಗೆ ಪಡೆಯುತ್ತಿದೆ. 35 ರೂ.ಗೆ ಕೇಂದ್ರ ಸರ್ಕಾರ ಪೆಟ್ರೋಲ್ ಕೊಡಬೇಕಿತ್ತು. ಆದರೆ ಸರ್ಕಾರ ‌ಜನರ ಹಣವನ್ನು ‌ಸುಲಿಗೆ ಮಾಡುತ್ತಿದೆ. 15 ದಿನದ ಒಳಗೆ ವಿಧಾನಸಭೆ ಅಧಿವೇಶನ ಕರೆಯದಿದ್ದರೆ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.

ಹೆಚ್​ಡಿಕೆ
ಹೆಚ್​ಡಿಕೆ

By

Published : Jun 19, 2021, 8:13 PM IST

ಬೆಂಗಳೂರು:ನನಗೆ ಈ ಬಿಜೆಪಿ ಸರ್ಕಾರದ ಮೇಲೆ‌ ಅಸೂಯೆ ಇಲ್ಲ. ನೀವೇ ಎರಡು ವರ್ಷ ಅಧಿಕಾರ ಮಾಡಿ, ಆದರೆ ನೀವು ಅಧಿಕಾರಕ್ಕೆ ಬಂದಿರುವ ಉದ್ದೇಶ ಏನು? ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಶಾಸಕ ಆರ್. ಮಂಜುನಾಥ್ ಅವರು ಹೆಗ್ಗನಹಳ್ಳಿ ವಾರ್ಡ್​ನಲ್ಲಿ ಇಂದು ಹಮ್ಮಿಕೊಂಡಿದ್ದ ಆಹಾರ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಸರ್ಕಾರ ಜನರ ದುಡ್ಡಿನಿಂದಲೇ ತೆರಿಗೆ ಪಡೆಯುತ್ತಿದೆ. 35 ರೂ.ಗೆ ಕೇಂದ್ರ ಸರ್ಕಾರ ಪೆಟ್ರೋಲ್ ಕೊಡಬೇಕಿತ್ತು. ಆದರೆ ಸರ್ಕಾರ ‌ಜನರಿಂದ ಹಣವನ್ನು ‌ಸುಲಿಗೆ ಮಾಡುತ್ತಿದೆ. 15 ದಿನದ ಒಳಗೆ ವಿಧಾನಸಭೆ ಅಧಿವೇಶನ ಕರೆಯದಿದ್ದರೆ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.

ಕೊರೊನಾ ಸೋಂಕು ಹೆಚ್ಚುತ್ತಿದೆ. ಮಾರ್ಚ್ 15 ರಂದೇ ಲಾಕ್​ಡೌನ್ ಮಾಡಿ ಅಂದಿದ್ದೆ. ಅಷ್ಟೇ ಅಲ್ಲ, ಪ್ರತಿ ಕುಟುಂಬಕ್ಕೆ ಎರಡು ತಿಂಗಳು 10 ಸಾವಿರ ರೂ. ಕೊಡಿ ಅಂತಾನೂ ಹೇಳಿದ್ದೆ. ಈಗ ಸರ್ಕಾರ ಕೊಡುವ 2 ಸಾವಿರ ರೂ.ದಿಂದ ಬದುಕುವುದಕ್ಕೆ ಆಗುತ್ತಾ?. ಕೇಂದ್ರ ಸರ್ಕಾರ ಕೊಡುವ ಅಕ್ಕಿಯನ್ನು ಯಡಿಯೂರಪ್ಪ ಫೋಟೋ ಹಾಕಿಕೊಂಡು ಜನರಿಗೆ ಕೊಡುತ್ತಿದ್ದಾರೆ ಎಂದು ಟೀಕಿಸಿದರು.

ಹೆಗ್ಗನಹಳ್ಳಿ ವಾರ್ಡ್​ನಲ್ಲಿ ಇಂದು ಹಮ್ಮಿಕೊಂಡಿದ್ದ ಆಹಾರ ಕಿಟ್ ವಿತರಣೆ ಕಾರ್ಯಕ್ರಮ

ಕೋವಿಡ್ ಅನಾಹುತದಿಂದ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಜನರ ಸಂಕಷ್ಟಕ್ಕೆ ಪ್ರಾಮಾಣಿಕವಾಗಿ ಶಾಸಕ ಮಂಜುನಾಥ್ ಸಹಕರಿಸುತ್ತಿದ್ದಾರೆ. ಜನರಿಗೆ ಸಂಪರ್ಕ‌ ಮಾಡುವ ಮೊದಲ ವ್ಯಕ್ತಿ ಮಂಜುನಾಥ್ ಅಂದರೆ ತಪ್ಪಾಗಲಿಕ್ಕಿಲ್ಲ. ನಮ್ಮ ಪಕ್ಷಕ್ಕೆ ಸಂಪೂರ್ಣ ಬಹುಮತ ಬರಲಿಲ್ಲ. ಆದರೂ ಈ‌ ಭಾಗದಲ್ಲಿ ಜನರು ಜೆಡಿಎಸ್ ಕೈಬಿಡಲಿಲ್ಲ. ಮೈತ್ರಿ ಸರ್ಕಾರದ ಅವಧಿಯಲ್ಲಿ ದಾಸರಹಳ್ಳಿ ಕ್ಷೇತ್ರಕ್ಕೆ 750ಕೋಟಿ ರೂ. ಅನುದಾನ ಕೊಟ್ಟಿದ್ದೆ‌. ಬೆಂಗಳೂರಿನ 28 ಕ್ಷೇತ್ರಕ್ಕೆ 250 ರಿಂದ 300 ಕೋಟಿ ರೂ. ಹಣ‌ ಕೊಟ್ಟಿದ್ದೆ. ಆಗ ಸಾಕಷ್ಟು ಹಿಂಸೆ ಕೊಟ್ಟರು. ನಾನು ಈಗ ಅದನ್ನು ಪ್ರಸ್ತಾಪ ಮಾಡಲ್ಲ ಎಂದು ಹೆಚ್​ಡಿಕೆ ಹೇಳಿದ್ರು.

ದಾಸರಹಳ್ಳಿ ಶಾಸಕ ಮಂಜುನಾಥ್ ಮಾತನಾಡಿ, ಈ ಸರ್ಕಾರ ನನಗೆ ಕೆಲಸ ಮಾಡುವುದಕ್ಕೆ ಅವಕಾಶ ಕೊಡಲಿಲ್ಲ. ಯಾಕೆಂದರೆ ನನ್ನ ಕ್ಷೇತ್ರದಲ್ಲಿ ನಾನು ಏನು ಕೆಲಸ ಮಾಡಿಲ್ಲ‌ ಅಂತ ತೋರಿಸುತ್ತಾರೆ. ಗುತ್ತಿಗೆದಾರರಿಗೂ ಸರ್ಕಾರದ ಕೆಲ ನಾಯಕರು ಧಮ್ಕಿ ಹಾಕ್ತಾರೆ. ಮೈತ್ರಿ ಸರ್ಕಾರದಲ್ಲಿ ಅಭಿವೃದ್ಧಿಗೆ ಸಾಕಷ್ಟು ಹಣವನ್ನು ಕುಮಾರಸ್ವಾಮಿ ಬಿಡುಗಡೆ ಮಾಡಿದ್ದರು. ಇಂದು ಎಲ್ಲಾ ಹಣ ವಾಪಸ್ ತೆಗೆದುಕೊಂಡು ತಮ್ಮ ತಮ್ಮ ಕ್ಷೇತ್ರಕ್ಕೆ ಹಾಕಿಕೊಂಡಿದ್ದಾರೆ. ನನ್ನ ಕ್ಷೇತ್ರಕ್ಕೆ ಕಡಿಮೆ ಪರಿಹಾರ ಕೊಟ್ಟಿದ್ದಾರೆ, ಆದರೆ ಬೇರೆ ಕ್ಷೇತ್ರದಲ್ಲಿ 250 ಕೋಟಿ ರೂ. ಹಣ ಬಿಡುಗಡೆ ‌ಮಾಡಿದ್ದಾರೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ABOUT THE AUTHOR

...view details