ಬೆಂಗಳೂರು :ಕೊರೊನಾ ಕಾಲದಲ್ಲೂ ದುಬಾರಿ ಪ್ಯಾಕೇಜ್ ಪಡೆಯುವ ಮೂಲಕ ಪಿಇಎಸ್ ವಿದ್ಯಾರ್ಥಿಗಳು ಎಲ್ಲರ ಗಮನ ಸೆಳೆದಿದ್ದಾರೆ. ಪಿಇಎಸ್ ಪ್ಲೇಸ್ಮೆಂಟ್ನಲ್ಲಿ ಇದೇ ಮೊದಲ ಬಾರಿಗೆ ಭಾರಿ ಮೊತ್ತದ ಪ್ಯಾಕೇಜ್ ಪಡೆದಿದ್ದು, ಆಡಳಿತ ಮಂಡಳಿ ಸಂತಸ ವ್ಯಕ್ತಪಡಿಸಿದೆ.
ಈ ಹಿಂದೆ ಪಿಇಎಸ್ ವಿದ್ಯಾರ್ಥಿಯೊಬ್ಬರು ವಾರ್ಷಿಕ ಪ್ಯಾಕೇಜ್ 50 ಲಕ್ಷ ರೂ. ಪಡೆದಿದ್ದರು. ಇದೀಗ ಸಾರಂಗ್ ರವೀಂದ್ರ ಎಂಬ ವಿದ್ಯಾರ್ಥಿ ಲಂಡನ್ ಮೂಲದ ಕನ್‌ಲೈಕ್ಸ್ ಕಚೇರಿಗೆ ಆಯ್ಕೆಯಾಗಿದ್ದರು. ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಓದುತ್ತಿದ್ದ ಸಾರಂಗ್, ಈ ಹಿಂದೆ ಕನ್‌ಲೈಕ್ಸ್ ಕಂಪನಿಯಲ್ಲೇ ಇಂಟರ್ನ್ಶಿಪ್ ಮಾಡಿದ್ದರು. ಆ ನಂತರ ಅವರಿಗೆ ಕಂಪನಿಯು 1.5 ಕೋಟಿ ಪ್ಯಾಕೇಜ್ ನೀಡಿ ಆಯ್ಕೆ ಮಾಡಿಕೊಂಡಿದೆ.
ಮತ್ತೊಬ್ಬ ವಿದ್ಯಾರ್ಥಿನಿ ಜೀವನ ಹೆಗಡೆಗೆ ಗೂಗಲ್ನಲ್ಲಿ ಪೂರ್ಣ ಕಾಲಿಕ ಉದ್ಯೋಗ ದೊರೆತಿದ್ದು, ಈ ಹಿಂದೆ ಗೂಗಲ್ ಸಂಸ್ಥೆ ಆಯೋಜಿಸಿದ್ದ ಜಾಗತಿಕ ಮಟ್ಟದ ಕಾರ್ಯಕ್ರಮ ಒಂದರಲ್ಲಿ ಭಾಗವಹಿಸಿದ್ದರು. ಇದೀಗ ಗೂಗಲ್ನಲ್ಲಿ ನೇಮಕಗೊಂಡಿದ್ದು, ಪ್ಯಾಕೇಜ್ ಮಾಹಿತಿಯನ್ನು ಬಹಿರಂಗ ಪಡಿಸಿಲ್ಲ.