ಕರ್ನಾಟಕ

karnataka

ETV Bharat / state

ನೆರೆ ಹಾವಳಿಗೆ ತುತ್ತಾದ ಶಾಲೆಗಳಿಗೆ PES ಸಂಸ್ಥೆಯಿಂದ ಸಹಾಯ - bangalore pes

PES ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ದೊರೆಸ್ವಾಮಿಯವರು ದೂರವಾಣಿ ಕರೆಮಾಡಿ ಸಹಾಯ ಮಾಡುವುದಾಗಿ ತಿಳಿಸಿದ್ದಾರೆ. ರಾಜ್ಯದಲ್ಲಿ ನೆರೆಹಾವಳಿಗೆ ತುತ್ತಾಗಿ ಸಂಪೂರ್ಣ ಹಾಳಾಗಿರುವ 10 ಶಾಲಾ ಕಟ್ಟಡಗಳನ್ನು PES ನಿಂದ ಸಂಪೂರ್ಣವಾಗಿ ಪುನರ್​ನಿರ್ಮಾಣ ಮಾಡಿಕೊಡುತ್ತೇವೆ ಎಂದು ಭರವಸೆ ನೀಡಿದ್ದಾರೆ.

ನೆರೆ ಹಾವಳಿಗೆ ತುತ್ತಾದ ಶಾಲೆಗಳಿಗೆ PESIT ನಿಂದ ಸಹಾಯ

By

Published : Sep 13, 2019, 3:12 PM IST

ಬೆಂಗಳೂರು: ನೆರೆ ಹಾವಳಿಗೆ ತುತ್ತಾದ ಶಾಲೆಗಳಿಗೆ ಪಿಇಎಸ್ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಸಹಾಯಕ್ಕೆ ಮುಂದಾಗಿದ್ದಾರೆ.

ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ರವರಿಗೆ PES ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ದೊರೆಸ್ವಾಮಿಯವರು ದೂರವಾಣಿ ಕರೆಮಾಡಿ ಸಹಾಯ ಮಾಡುವುದಾಗಿ ತಿಳಿಸಿದ್ದಾರೆ. ರಾಜ್ಯದಲ್ಲಿ ನೆರೆಹಾವಳಿಗೆ ತುತ್ತಾಗಿ ಸಂಪೂರ್ಣ ಹಾಳಾಗಿರುವ 10 ಶಾಲಾ ಕಟ್ಟಡಗಳನ್ನು PES ನಿಂದ ಸಂಪೂರ್ಣವಾಗಿ ಪುನರ್​ನಿರ್ಮಾಣ ಮಾಡಿಕೊಡುತ್ತೇವೆ ಎಂದು ಭರವಸೆ ನೀಡಿದ್ದಾರೆ.

ಜೊತೆಗೆ ಆ ಶಾಲೆಗಳ ಪಟ್ಟಿಯನ್ನು ಪೆಸಿಟ್ ಮುಖ್ಯಸ್ಥರಿಗೆ ಶೀಘ್ರ ತಲುಪಿಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ. ಈ ಸಂಬಂಧ ಸಂಜೆ ಮುಖ್ಯಮಂತ್ರಿ ಯಡಿಯೂರಪ್ಪರವರನ್ನು ಭೇಟಿ ಮಾಡಿ ದೊರೆಸ್ವಾಮಿಯವರು ಚೆಕ್ ವಿತರಣೆ ಮಾಡಲಿದ್ದಾರೆ.‌

ABOUT THE AUTHOR

...view details