ಕರ್ನಾಟಕ

karnataka

ETV Bharat / state

ಒಮಿಕ್ರಾನ್​ ಸೋಂಕಿನಿಂದ ಗುಣಮುಖವಾಗಿ ಮನೆಗೆ ತೆರಳಿದ ವ್ಯಕ್ತಿ ನೀಡಿದರು ಕೆಲ ಉಪಯುಕ್ತ ಟಿಪ್ಸ್‌..

ದಕ್ಷಿಣ ಆಫ್ರಿಕಾದಲ್ಲಿದ್ದಾಗಲೇ ನನಗೆ ಒಮಿಕ್ರಾನ್​​ ಸೋಂಕು ಬಂದಿತ್ತು ಎನಿಸುತ್ತದೆ. ಸೋಂಕಿನ ಲಕ್ಷಣಗಳು ಭಯಪಡುವ ಹಾಗೇನು ಇರಲಲ್ಲಿ. ಈ ಮುಂಚೆ ನನಗೆ ಡೆಲ್ಟಾ ಸೋಂಕು ತಗುಲಿತ್ತು. ಅದಕ್ಕೆ ಹೋಲಿಸಿದರೆ ತುಂಬಾ ಮೈಲ್ಡ್​ ಆಗಿತ್ತು. ಮೂರು ದಿನಗಳ ಕಾಲ ಗಂಟಲು ಕೆರೆತ, ಸುಸ್ತು, ಕೆಮ್ಮು ಕಾಣಿಸಿತ್ತು. ಇದನ್ನು ಬಿಟ್ಟರೆ ಯಾವುದೇ ತೊಂದರೆ ಇರಲಿಲ್ಲ. ಆಸ್ಪತ್ರೆಯಲ್ಲಿಯೇ ಇದ್ದುಕೊಂಡು ಆಫೀಸ್ ಕೆಲಸ ಮಾಡುತ್ತಿದ್ದೆ..

Persion who went home recovering from Omicron infection
ಒಮಿಕ್ರಾನ್​ ಸೋಂಕಿನಿಂದ ಗುಣಮುಖವಾಗಿ ಮನೆಗೆ ತೆರಳಿದ ವ್ಯಕ್ತಿ

By

Published : Dec 15, 2021, 5:19 PM IST

ಬೆಂಗಳೂರು :ಒಮಿಕ್ರಾನ್​ ಟ್ರಾವೆಲ್​​ ಹಿಸ್ಟರಿ ಹೊಂದಿದ್ದ 34 ವರ್ಷ ವಯಸ್ಸಿನ ವ್ಯಕ್ತಿ ಸಂಪೂರ್ಣ ಗುಣಮುಖರಾಗಿ ಮನೆಗೆ ತೆರಳಿಸಿದ್ದಾರೆ‌. ಸೋಂಕಿನಿಂದ ರೋಗಮುಕ್ತವಾದ ವ್ಯಕ್ತಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

ಡಿಸೆಂಬರ್​ 1ರಂದು ಈ ವ್ಯಕ್ತಿ ದಕ್ಷಿಣ ಆಫ್ರಿಕಾದ ಹೈರಿಸ್ಕ್​​ನಿಂದ ಬೆಂಗಳೂರಿಗೆ ಆಗಮಿಸಿದ್ದರು. ಈ ವೇಳೆ ವಿಮಾನ ನಿಲ್ದಾಣದಲ್ಲಿ ಪರೀಕ್ಷಿಸಿದಾಗ ನೆಗೆಟಿವ್​ ಬಂದಿತ್ತು. ಈ ಹಿನ್ನೆಲೆಯಲ್ಲಿ ಮನೆಗೆ ತೆರಳಿದ್ದರು.

ಆದರೆ, ಗಂಟಲಿನಲ್ಲಿ ಕೆರೆತ ಇದ್ದಿದ್ದರಿಂದ ಆಸ್ಪತ್ರೆಗೆ ಹೋಗಿ ಪರೀಕ್ಷೆಗೆ ಒಳಗಾಗಿದ್ದರು. ಈ ವೇಳೆ ಒಮಿಕ್ರಾನ್ ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಚಿಕಿತ್ಸೆ ಪಡೆದು ಸಂಪೂರ್ಣ ಗುಣಮುಖರಾಗಿದ್ದು, ಮನೆಗೆ ತೆರಳಿದ್ದಾರೆ.

ಇನ್ನು ಸೋಂಕಿನಿಂದ ಗುಣಮುಖವಾರ ಹಿನ್ನೆಲೆಯಲ್ಲಿ ವ್ಯಕ್ತಿ ವಿಡಿಯೋದ ಮೂಲಕ ಒಮಿಕ್ರಾನ್​ನಿಂದ ಹೇಗೆ ಗುಣಮುಖನಾದೆ ಮತ್ತು ಸೋಂಕಿನಿಂದ ಬಳಲುತ್ತಿರುವವರಿಗೆ ಕೆಲ ಧೈರ್ಯದ ಮಾತುಗಳನ್ನಾಡಿದ್ದಾರೆ.

'ದಕ್ಷಿಣ ಆಫ್ರಿಕಾದಲ್ಲಿದ್ದಾಗಲೇ ನನಗೆ ಒಮಿಕ್ರಾನ್​​ ಸೋಂಕು ಬಂದಿತ್ತು ಎನಿಸುತ್ತದೆ. ಸೋಂಕಿನ ಲಕ್ಷಣಗಳು ಭಯಪಡುವ ಹಾಗೇನು ಇರಲಲ್ಲಿ. ಈ ಮುಂಚೆ ನನಗೆ ಡೆಲ್ಟಾ ಸೋಂಕು ತಗುಲಿತ್ತು. ಅದಕ್ಕೆ ಹೋಲಿಕೆ ಮಾಡಿದರೆ ತುಂಬಾ ಮೈಲ್ಡ್​ ಆಗಿತ್ತು.

ಮೂರು ದಿನಗಳ ಕಾಲ ಗಂಟಲು ಕೆರೆತ, ಸುಸ್ತು, ಕೆಮ್ಮು ಕಾಣಿಸಿತ್ತು. ಇದನ್ನು ಬಿಟ್ಟರೆ ಯಾವುದೇ ತೊಂದರೆ ಇರಲಿಲ್ಲ. ಆಸ್ಪತ್ರೆಯಲ್ಲಿಯೇ ಇದ್ದುಕೊಂಡು ಆಫೀಸ್ ಕೆಲಸ ಮಾಡುತ್ತಿದ್ದೆ' ಎಂದರು ತಿಳಿಸಿದ್ದಾರೆ.

ಚಿಕಿತ್ಸೆಯಲ್ಲಿ ವ್ಯತ್ಯಾಸ ಇರಲಿಲ್ಲ :ಒಮಿಕ್ರಾನ್​​ ಸೋಂಕಿನ ಚಿಕಿತ್ಸೆಯಲ್ಲಿ ಯಾವುದೇ ವ್ಯತ್ಯಾಸ ಇರಲಿಲ್ಲ. ಕೊರೊನಾಗೆ ಏನು ಔಷಧೋಪಚಾರ ಇದ್ದವೋ ಅದನ್ನೇ ನೀಡಿದ್ದರು ಎಂದು ತಿಳಿಸಿದರು.

ABOUT THE AUTHOR

...view details