ಕರ್ನಾಟಕ

karnataka

ETV Bharat / state

ಸಂಚಾರಿ ನಿಯಮ ಉಲ್ಲಂಘಿಸಿ ಸಾಕ್ಷ್ಯ ಕೇಳಿದ ವ್ಯಕ್ತಿ: ಬೆಂಗಳೂರು ಸಂಚಾರಿ ಪೊಲೀಸರ ಪ್ರತಿಕ್ರಿಯೆ ಇದು!

ಬೈಕ್​ ಸವಾರರೊಬ್ಬರು ಸಂಚಾರಿ ನಿಯಮ ಉಲ್ಲಂಘಿಸಿದ್ದು, ದಂಡ ವಿಧಿಸಿದ ಪೊಲೀಸರ ಬಳಿಯೇ ಸಾಕ್ಷ್ಯ ಕೇಳಿದ್ದರು. ಇದಕ್ಕೆ ಪೊಲೀಸರು ಖಡಕ್​ ಉತ್ತರವನ್ನೇ ನೀಡಿದ್ದಾರೆ.

ಸಂಚಾರಿ ನಿಯಮ ಉಲ್ಲಂಘಿಸಿ ಸಾಕ್ಷ್ಯ ಕೇಳಿದ ವ್ಯಕ್ತಿ
ಸಂಚಾರಿ ನಿಯಮ ಉಲ್ಲಂಘಿಸಿ ಸಾಕ್ಷ್ಯ ಕೇಳಿದ ವ್ಯಕ್ತಿ

By

Published : Oct 21, 2022, 6:55 PM IST

ಬೆಂಗಳೂರು:ಸಂಚಾರಿ ನಿಯಮ ಉಲ್ಲಂಘಿಸಿದ ವಾಹನ ಸವಾರರೊಬ್ಬರು ದಂಡ ವಿಧಿಸಿದ ಪೊಲೀಸರ ಬಳಿ ಸೂಕ್ತ ಸಾಕ್ಷಿ ಕೇಳಿದ್ದರು. ಈ ಪ್ರಕರಣದಲ್ಲಿ ನಗರ ಸಂಚಾರಿ‌ ಪೊಲೀಸರ ಟ್ವೀಟ್ ಪ್ರತಿಕ್ರಿಯೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆಯುತ್ತಿದೆ.

ಸಂಚಾರಿ ನಿಯಮ ಉಲ್ಲಂಘಿಸಿ ಸಾಕ್ಷ್ಯ ಕೇಳಿದ ಬೈಕ್ ಸವಾರ

ಫೆಲಿಕ್ಸ್ ರಾಜ್ ಹೆಸರಿನ ಟ್ವಿಟರ್ ಖಾತೆಯ ಬಳಕೆದಾರರಿಗೆ ಹೆಲ್ಮೆಟ್‌ರಹಿತ ದ್ವಿಚಕ್ರ ವಾಹನ ಚಾಲನೆಗಾಗಿ ಸಂಚಾರಿ ಪೊಲೀಸರು ಸ್ಕೂಟರ್ ನಂಬರ್ ಪ್ಲೇಟ್ ಫೋಟೋ ಸಹಿತ ದಂಡದ ರಶೀದಿ ರವಾನಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಚಾಲಕ ರಶೀದಿಯ ಫೋಟೋವನ್ನು ಟ್ವೀಟ್ ಮಾಡಿ, ತನ್ನ ನಿಯಮ ಉಲ್ಲಂಘನೆಗೆ ಸಾಕ್ಷಿ ನೀಡುವಂತೆ ಕೇಳಿದ್ದರು. ಇಲ್ಲವಾದಲ್ಲಿ ದಂಡವನ್ನು ಹಿಂಪಡೆಯುವಂತೆಯೂ ಸವಾಲೆಸೆದಿದ್ದರು. ಕೆಲವೇ ನಿಮಿಷಗಳಲ್ಲಿ ಪ್ರತಿಕ್ರಿಯಿಸಿರುವ ಬೆಂಗಳೂರು ಸಂಚಾರಿ ಪೊಲೀಸ್​ ಅಧಿಕೃತ ಟ್ವಿಟರ್ ಹ್ಯಾಂಡಲ್ ಮೂಲಕ ಸ್ಕೂಟರ್ ಚಾಲಕ ಹೆಲ್ಮೆಟ್ ಧರಿಸದಿರುವ ಫೋಟೋವನ್ನು ಲಗತ್ತಿಸಿದ್ದಾರೆ.

ಪೊಲೀಸರು ಫೋಟೋ ಸಾಕ್ಷ್ಯ ಒದಗಿಸಿದ ಬಳಿಕ ಪ್ರತಿಕ್ರಿಯಿಸಿರುವ ಫೆಲಿಕ್ಸ್‌ ರಾಜ್, ಟ್ವಿಟರ್ ಖಾತೆಯಲ್ಲಿ ಜನಸಾಮಾನ್ಯರಾದ ಎಲ್ಲರಿಗೂ ಪ್ರಶ್ನಿಸುವ ಅಧಿಕಾರವಿದೆ. ನನ್ನ ಪ್ರಶ್ನೆಗೆ ಉತ್ತರಿಸಿದ್ದಕ್ಕೆ ಧನ್ಯವಾದಗಳು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ಅಚಾನಕ್​ ಸಿಗ್ನಲ್ ಜಂಪ್ ಮಾಡಿದ್ದಕ್ಕೆ ಪಶ್ಚಾತಾಪ: ದಂಡ ಪಾವತಿಗೆ ಮುಂದೆ ಬಂದ ವ್ಯಕ್ತಿ

ABOUT THE AUTHOR

...view details